ಅದ್ದೂರಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಧ್ರುವಸರ್ಜಾ, ಕಟ್ಟುಮಸ್ತಾದ ಮೈಕಟ್ಟು, ಖಡಕ್ ಡೈಲಾಗ್ ಹಾಗೂ ಖದರ್ ಆ್ಯಕ್ಷನ್ಗಳಿಂದಲೇ ಹ್ಯಾಟ್ರಿಕ್ ಬಾರಿಸಿ ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪೊಗರು ಚಿತ್ರದ ಧ್ಯಾನದಲ್ಲೇ ಇರುವ ಧ್ರುವ ಸರ್ಜಾ, ಪೊಗರು ಚಿತ್ರಕ್ಕಾಗಿ ದೇಹವನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ. ಗಡ್ಡಾ ಬಿಟ್ಟು ಮಾಸ್ ಲುಕ್ನಲ್ಲಿ ಮಿಂಚಲು ರೆಡಿಯಾಗಿರುವ ಬಹದ್ದೂರ್ ಹುಡುಗ ಪ್ರತಿನಿತ್ಯ ಜಿಮ್ನಲ್ಲಿ ವರ್ಕ್ಔಟ್ ಮಾಡೋದನ್ನು ಮಾತ್ರ ಮರೆಯೋದಿಲ್ಲ. ಜಿಮ್ಗಾಗಿಯೇ ಟೈಮ್ ಮೀಸಲಿಟ್ಟಿರುವ ಧ್ರುವ ಪ್ರತಿನಿತ್ಯ ವರ್ಕ್ಔಟ್ ಮಾಡ್ತಾರೆ.
ಅದೇ ರೀತಿ ಇಂದು ಧ್ರುವ ಜಿಮ್ನಲ್ಲಿ ವರ್ಕ್ಔಟ್ ಮಾಡೋ ವೇಳೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ವಿಡಿಯೋ ಮಾಡಿ ಇದು ಪೊಗರುಗಾಗಿ ಮಾಡ್ತಿರುವ ಕಸರತ್ತು ಎಂದು ಪಿಸುಗುಟ್ಟಿದ್ದಾರೆ. ಅಲ್ಲದೆ ಧ್ರುವ ಒಳ್ಳೆ ಹುಡುಗನಿಗೆ ಪ್ರೀತಿಯಿಂದ ಬೆನ್ನು ತಟ್ಟಿದ್ದಾರೆ. ಇನ್ನು ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳ್ತಿರುವ ಪೊಗರು ಚಿತ್ರ ಬಹುತೇಕ ಕಂಪ್ಲೀಟ್ ಆಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.