ETV Bharat / sitara

ಈ ರೀತಿಯ ಸೋಲನ್ನು ನಾನೆಂದಿಗೂ ಕಂಡಿರಲಿಲ್ಲ: ಸುನಿಲ್​​ಕುಮಾರ್ ದೇಸಾಯಿ ನೋವು

ನಿರ್ದೇಶಕ ಸುನಿಲ್​​​ಕುಮಾರ್ ದೇಸಾಯಿ ಇದೀಗ ಸಿಂಪಲ್ ಕಥೆಯನ್ನು ಆಯ್ಕೆ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾರಂತೆ. 'ಉದ್ಘರ್ಷ' ಸಿನಿಮಾದಿಂದ ಕಂಡ ಸೋಲನ್ನು ನಾನು ಈ ಹಿಂದೆ ಯಾವ ಸಿನಿಮಾದಲ್ಲೂ ಅನುಭವಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಸುನಿಲ್​​ಕುಮಾರ್ ದೇಸಾಯಿ
author img

By

Published : Sep 6, 2019, 8:54 AM IST

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಸುನಿಲ್​​​ಕುಮಾರ್ ದೇಸಾಯಿ ಬಸವಳಿದಿದ್ದಾರೆ. ಅದಕ್ಕೆ ಕಾರಣ ‘ಉದ್ಘರ್ಷ’ ಸಿನಿಮಾದಲ್ಲಿ ಅವರಿಗಾದ ಸೋಲು. ಸುನಿಲ್ ಕುಮಾರ್ ದೇಸಾಯಿ ಹತ್ತಿರದಿಂದ ಬಲ್ಲವರ ಬಳಿ ಮಾತ್ರ ತಮ್ಮ ನೋವು ಹಾಗೂ ಸಂಕಷ್ಟ ತೋಡಿಕೊಳ್ಳುತ್ತಾರೆ.

Udgharsha
'ಉದ್ಘರ್ಷ' ಚಿತ್ರತಂಡ

‘ನನ್ನ ಸಿನಿಮಾ ಜೀವನದ 30 ವರ್ಷಗಳಲ್ಲಿ ‘ಉದ್ಘರ್ಷ’ ಚಿತ್ರದಿಂದ ಕಂಡ ಸೋಲನ್ನು ಈ ಹಿಂದೆ ಯಾವ ಚಿತ್ರದಲ್ಲೂ ಅನುಭವಿಸಿರಲ್ಲ. ಅದು ಒಂದು ರೀತಿಯಲ್ಲಿ ಬಾಕ್ಸ್ ಆಫೀಸಿನಲ್ಲಿ ಸಂಪೂರ್ಣ ವಾಷ್ ಔಟ್ ಆದ ಸಿನಿಮಾ. ಜನರು ಏಕೆ ಅದನ್ನು ತಿರಸ್ಕಾರ ಮಾಡಿದರು ಎಂಬುದು ನನಗೆ ತಿಳಿಯುತ್ತಿಲ್ಲ. ಆ ಸಿನಿಮಾಕ್ಕೆ ಹೆಚ್ಚು ಪರಿಶ್ರಮ ಹಾಕಿದ್ದೆ. ಸಿನಿಮಾ ಉದ್ಯಮದಲ್ಲಿ ಎಷ್ಟೋ ಮಂದಿಗೆ ಈ ರೀತಿ ಆಗಿದೆ. ಆದರೆ ನಾನು ವೃತ್ತಿರಂಗದಲ್ಲಿ ಬಹಳ ಕಷ್ಟದ ಸ್ಥಿತಿಯಲ್ಲಿ ಇರುವಾಗ ನನ್ನನ್ನು ನಂಬಿದ ನಿರ್ಮಾಪಕರಿಗೆ ಮೋಸ ಆಯಿತು. ಬಹುಶಃ ಸಿನಿಮಾ ಬಿಡುಗಡೆಗೆ ಮುಂಚೆಯೇ ನಾವು ವ್ಯಾಪಾರ ಮಾಡಿದ್ದರೆ ಅದು ಸ್ವಲ್ಪವಾದರೂ ಸೇಫ್ ಆಗುತ್ತಿತ್ತೇನೋ ಎಂಬ ಪಶ್ಚಾತ್ತಾಪ ಈಗ ಕಾಡುತ್ತಿದೆ. ನನ್ನ ಹಿಂದಿನ ಸಿನಿಮಾ ‘ರೇ’ ಗಿಂತ ಈ ‘ಉದ್ಘರ್ಷ’ ದೊಡ್ಡ ಲಾಸ್ ಆಯಿತು. ನಮ್ಮ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಬಿತ್ತು ಎಂದು ದೇಸಾಯಿ ಹೇಳಿಕೊಳ್ಳುತ್ತಾರೆ.

sunilkumar desai
ನಿರ್ದೇಶಕ ಸುನಿಲ್​​ಕುಮಾರ್ ದೇಸಾಯಿ

ಇದೀಗ ತಮ್ಮ ಮುಂದಿನ ಸಿನಿಮಾಗೆ ಒಂದು ಸಿಂಪಲ್ ಕಥೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಮಯ ಹಾಗೂ ಹೆಚ್ಚು ಹಣ ಖರ್ಚು ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ. ನಿರ್ಮಾಪಕರ ಹುಡುಕಾಟದಲ್ಲಿದ್ದೇನೆ. ಆದಷ್ಟು ಬೇಗ ಇದರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸುನಿಲ್​​​ಕುಮಾರ್ ದೇಸಾಯಿ ಹೇಳಿದ್ದಾರೆ.

ಈ ಪಾಟಿ ಸೋಲು ನಾನು ಕಂಡಿರಲಿಲ್ಲ – ಸುನಿಲ್ ಕುಮಾರ್ ದೇಸಾಯಿ

ಕನ್ನಡ ಚಿತ್ರ ರಂಗದ ಹೆಮ್ಮೆಯ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಬಸವಳಿದಿದ್ದಾರೆ. ಅದಕ್ಕೆ ಕಾರಣ ಅವರ ಅತೀ ಕೆಟ್ಟ ಸೋಲು ಉದ್ಘರ್ಷ ಸಿನಿಮಾ ಇಂದ. ಸುನಿಲ್ ಕುಮಾರ್ ದೇಸಾಯಿ ಅವರನ್ನು ಹತ್ತಿರದಿಂದ ಬಲ್ಲವರ ಬಳಿ ಮಾತ್ರ ತಮ್ಮ ನೋವು ಹಾಗೂ ಸಂಕಷ್ಟ ತೋಡಿಕೊಳ್ಳುವುದು ಸಹ. ನಿನ್ನೆ ರಾತ್ರಿ ಅದೇ ಆಗಿದೆ ಸಹ.

ನನ್ನ ಜೀವ ಮಾನದ 30 ವರ್ಷಗಳಲ್ಲಿ ಉದ್ಘರ್ಷ ಕಂಡ ಸೋಲು ನಾನು ಹಿಂದೆ ಅನುಭವಿಸಿಲ್ಲ’. ಅದು ಒಂದು ರೀತಿಯಲ್ಲಿ ಬಾಕ್ಸ್ ಆಫೀಸಿನಲ್ಲಿ ಸಂಪೂರ್ಣ ವಾಷ್ ಔಟ್ ಆದ ಸಿನಿಮಾ. ಅದು ಯಾಕೆ ಜನ ತಿರಸ್ಕಾರ ಮಾಡಿದರು ಎಂಬುದು ನನಗೆ ತಿಳಿಯುತ್ತಿಲ್ಲ. ಅತಿ ಹೆಚ್ಚು ಪರಿಶ್ರಮ ಆ ಸಿನಿಮಾಕ್ಕೆ ಹಾಕಿದ್ದೇ. ಸಿನಿಮಾ ಉಧ್ಯಮದಲ್ಲಿ ಈ ರೀತಿ ಕೆಲವರಿಗೆ ಆಗಿದೆ. ಆದರೆ ನಾನು ವೃತ್ತಿ ರಂಗದಲ್ಲಿ ಬಹಳ ಕಷ್ಟದ ಸ್ಥಿತಿಯಲ್ಲಿ ಇರುವಾಗ ನನ್ನನ್ನು ನಂಬಿದ ನಿರ್ಮಾಪಕರಿಗೆ ಮೋಸ ಆಯಿತು. ಬಹುಶಃ ಸಿನಿಮಾ ಬಿಡುಗಡೆ ಮುಂಚೆಯೇ ನಾವು ವ್ಯಾಪಾರ ಮಾಡಿದ್ದರೆ ಅದು ಸ್ವಲ್ಪ ಆದರೂ ಸೆಫ್ ಆಗುತ್ತಾ ಇತ್ತು ಎಂದು ಈಗ ಯೋಚಿಸುವಂತೆ ಮಾಡಿದೆ. ನನ್ನ ಹಿಂದಿನ ಸಿನಿಮಾ ರೇ ಗಿಂತ ಈ ಉದ್ಘರ್ಷ ದೊಡ್ಡ ಲಾಸ್ ಆಯಿತು.ನಮ್ಮ ಟೀಮ್ ಅಲ್ಲಿ ಇದ್ದ ಆತ್ಮ ವಿಶ್ವಾಸಕ್ಕೆ ದೊಡ್ಡ ಹೊಡತ ಬಿತ್ತು ಎಂದು ದೇಸಾಯಿ ಹೇಳಿಕೊಳ್ಳುತ್ತಾರೆ.

ಅದಕ್ಕೆ ಆವರು ಮುಂದಿನ ಸಿನಿಮಾಕ್ಕೆ ಒಂದು ಮುದ್ದಾದ, ಸಿಂಪಲ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಮಯ ಹಾಗೂ ಹಣ ಸಹ ದೇಸಾಯಿ ಅವರು ಹೆಚ್ಚು ಖರ್ಚು ಮಾಡಲು ಬೇಡ ಎಂದು ನಿರ್ಧರಿಸಿದ್ದಾರೆ.

ಸುನಿಲ್ ಕುಮಾರ್ ದೇಸಾಯಿ ಅವರಿಗೆ ಹೊಳದಿರುವ ಹೊಸ ಕಥಾ ವಸ್ತು ಸಹ ಅಷ್ಟು ಹಣವನ್ನು ಕೇಳುವುದಿಲ್ಲವಂತೆ. ಸರಿಯಾದ ನಿರ್ಮಾಪಕ ಹಾಗೂ ತಂಡದ ಆಯ್ಕೆಯಲ್ಲಿ ಸುನಿಲ್ ಕುಮಾರ್ ದೇಸಾಯಿ ತೊಡಗಿದ್ದಾರೆ. ಆದಷ್ಟು ಬೇಗ ಇದರ ಬಗ್ಗೆ ವಿವರಣೆ ಹೊರಹಾಕಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.