ETV Bharat / sitara

'ಶಾಲೆಯಿಂದ ಮನೆಗೆ ಬಂದ ಮಗುವಿನಂತೆ ಸೈಕಲ್ ರೈಡ್ ಮಾಡಿ ಅಪ್ಪು ಸಂಭ್ರಮಿಸಿದ್ದರು' - ನಿರ್ದೇಶಕ ನಿತಿನ್ ಕೃಷ್ಣಮೂರ್ತಿ

ಸ್ಯಾಂಡಲ್​​ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ನೆನಪುಗಳನ್ನು ಹಂಚಿಕೊಂಡಿದ್ದಾರೆ.

Nitin Krishnamurthy who shared Puneet's memory
ಪುನೀತ್ ನೆನಪು ಹಂಚಿಕೊಂಡ ಸ್ಯಾಂಡಲ್​​ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ
author img

By

Published : Nov 7, 2021, 5:27 PM IST

ಬೆಂಗಳೂರು: ಯುವರತ್ನ ಪುನೀತ್​ ರಾಜ್​ಕುಮಾರ್ ಅಕಾಲಿಕ ನಿಧನ ಅವರ ಕುಟುಂಬ ಮಾತ್ರವಲ್ಲದೇ, ಅಭಿಮಾನಿಗಳ ಹೃದಯವನ್ನೂ ಘಾಸಿಗೊಳಿಸಿದೆ. ಪುನೀತ್ ಅಗಲಿದರೂ ಅವರ ನೆನಪು ಮಾತ್ರ ಎಲ್ಲರನ್ನೂ ಇನ್ನೂ ಕಾಡುತ್ತಿವೆ. ಸ್ಯಾಂಡಲ್​​ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಕೂಡ ಅಪ್ಪು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಉಡುಗೊರೆಯಾಗಿ ನೀಡಿದ ಬ್ಯಾಟರಿಚಾಲಿತ ಸೈಕಲ್ ಅ​​ನ್ನು ನಟ ಪುನೀತ್​ ರಾಜ್​​ಕುಮಾರ್​​ ಅವರು ಸಂತೋಷದಿಂದ ಸ್ವೀಕರಿಸಿದ್ದರು. ಮಗುವಿನಂತೆ ಓಡಿಸಿ ಖುಷಿಪಟ್ಟಿದ್ದರು ಎಂದು ಸ್ಯಾಂಡಲ್​​ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಿತಿನ್ ಕೋವಿಡ್ ಜಾಗೃತಿ ಅಭಿಯಾನಕ್ಕೆ ಮಾಡಿದ ಪ್ರೋಮೋ ಶೂಟ್​​ನಲ್ಲಿ ಹಣ ಪಡೆಯದೆ ಪುನೀತ್ ನಟಿಸಿದ್ದರು. ಅವರ ಫಿಟ್ನೆಸ್ ಪ್ರೀತಿ ತಿಳಿದಿದ್ದರಿಂದ ಸೈಕಲ್​ ಅ​ನ್ನು ಕೊಡುಗೆಯಾಗಿ ನೀಡಲಾಯಿತು. ಅವರ ಬಳಿ 5-10 ಸೈಕಲ್ ಇದ್ದರೂ, ಈ ಸೈಕಲ್ ಅ​​ನ್ನು ಅಪ್ಪು ಪ್ರೀತಿಯಿಂದಲೇ ಸ್ವೀಕರಿಸಿದರು.

ಅಪ್ಪುಗೆ ಉಡುಗೊರಯಾಗಿ ನೀಡಿದ ಬ್ಯಾಟರಿ ಚಾಲಿತ ಸೈಕಲ್
ಅಪ್ಪುಗೆ ಉಡುಗೊರೆಯಾಗಿ ನೀಡಿದ ಬ್ಯಾಟರಿಚಾಲಿತ ಸೈಕಲ್

ಈ ವೇಳೆ, ಶಾಲೆಯಿಂದ ಮನೆಗೆ ಬಂದ ಮಗುವಿನಂತೆ ಸೈಕಲ್ ರೈಡ್ ಮಾಡಿ ಅವರು ಸಂಭ್ರಮಪಟ್ಟಿದ್ದರು. ಕಚೇರಿಯಿಂದ ಮನೆವರೆಗೂ ಸೈಕಲ್​​ನಲ್ಲಿಯೇ ಬಂದು ಎಂಜಾಯ್ ಮಾಡಿದ್ದರು. ಬೇರೆ ಯಾವ ಸೆಲೆಬ್ರೆಟಿಯೂ ಇಷ್ಟು ಸರಳವಾಗಿರಲು ಸಾಧ್ಯವಿಲ್ಲ. 'ಮಿಸ್ ಯೂ ಅಪ್ಪು ಸರ್' ಎಂದು ನಿರ್ದೇಶಕ ನಿತಿನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪುನೀತ್​ ಸರ್​ಗೆ ಶೀಘ್ರ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಲಿ: ನಟ ಪ್ರೇಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.