ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬ ಬಂತೆಂದರೆ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಲು ರೆಡಿ ಆಗ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಜನ್ಮದಿನವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳಲು ಕಿಚ್ಚ ನಿರಾಕರಿಸಿದ್ದಾರೆ. ತಾವು ಇರುವ ಸ್ಥಳದಿಂದಲೇ ವಿಶ್ ಮಾಡುವಂತೆ ಈಗಾಗಲೇ ಮನವಿ ಸಹ ಮಾಡಿದ್ದಾರೆ.
ಸೆಪ್ಟೆಂಬರ್ 2ಕ್ಕೆ ನಟ ಸುದೀಪ್ 50ನೇ ವಸಂತಕ್ಕೆ ಕಾಲಿಡಲಿದ್ದಾರೆ. 'ವಿಕ್ರಾಂತ್ ರೋಣ', 'ಕೋಟಿಗೊಬ್ಬ 3' ಸಿನಿಮಾಗಳ ಬಿಡುಗಡೆಗಾಗಿ ಕಿಚ್ಚನ ಫ್ಯಾನ್ಸ್ ಹುಚ್ಚೆದ್ದು ಕಾಯುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳು ಬಾಕಿ ಇರುವಾಗ 'ವಿಕ್ರಾಂತ್ ರೋಣ' ಚಿತ್ರತಂಡ ಬಿಗ್ ಸರ್ಪ್ರೈಸ್ ಕೊಡಲು ಸಜ್ಜಾಗಿದೆ.
![Dead Man Anthem Song will be release by Vikrant Rona team](https://etvbharatimages.akamaized.net/etvbharat/prod-images/kn-bng-04-sudeepge-surprise-kodalide-vikrant-rona-team-7204735_28082021164637_2808f_1630149397_735.jpg)
ನಟ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರದ ಗ್ಲಿಮ್ಸ್ ವಿಡಿಯೋ ರಿಲೀಸ್ಗೆ ರೆಡಿಯಾಗಿದೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 11.05ಕ್ಕೆ 'ಡೆಡ್ ಮ್ಯಾನ್ಸ್ ಆ್ಯಂಥಮ್' ಸಾಂಗ್ ಬಿಡುಗಡೆಯಾಗಲಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ವಿಶ್ವದ್ಯಾಂತ ಸದ್ದು ಮಾಡಿರುವ 'ವಿಕ್ರಾಂತ್ ರೋಣ'ನ ವೈಭವಕ್ಕೆ ಡೆಡ್ ಮ್ಯಾನ್ಸ್ ಆ್ಯಂಥಮ್ ಮತ್ತಷ್ಟು ಪುಷ್ಠಿ ನೀಡಲಿದೆ.
-
Get ready for The Dead Man’s Anthem!!#VikrantRonaGlimpse on
— Nirup Bhandari (@nirupbhandari) August 28, 2021 " class="align-text-top noRightClick twitterSection" data="
Sept 2 11:05 AM#VikrantRona @KicchaSudeep @anupsbhandari @Asli_Jacqueline @neethaofficial @JackManjunath @shaliniartss @The_BigLittle @Kichchacreatiin @tseries @laharimusic @VikrantRona pic.twitter.com/ls0SeTnnCQ
">Get ready for The Dead Man’s Anthem!!#VikrantRonaGlimpse on
— Nirup Bhandari (@nirupbhandari) August 28, 2021
Sept 2 11:05 AM#VikrantRona @KicchaSudeep @anupsbhandari @Asli_Jacqueline @neethaofficial @JackManjunath @shaliniartss @The_BigLittle @Kichchacreatiin @tseries @laharimusic @VikrantRona pic.twitter.com/ls0SeTnnCQGet ready for The Dead Man’s Anthem!!#VikrantRonaGlimpse on
— Nirup Bhandari (@nirupbhandari) August 28, 2021
Sept 2 11:05 AM#VikrantRona @KicchaSudeep @anupsbhandari @Asli_Jacqueline @neethaofficial @JackManjunath @shaliniartss @The_BigLittle @Kichchacreatiin @tseries @laharimusic @VikrantRona pic.twitter.com/ls0SeTnnCQ
ಪೋಸ್ಟರ್ ಹಾಗೂ ಮೇಕಿಂಗ್ನಿಂದಲೇ ಈಗಾಗಲೇ ವಿಶ್ವದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರವನ್ನ ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯಿಸಿರುವುದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿಸಿದೆ. ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್, ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಜಾಕ್ ಮಂಜು ಬಂಡವಾಳವನ್ನು ಹೂಡಿದ್ದಾರೆ.