ಕೊರೊನಾದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಕನ್ನಡದ ಹಲವು ನಟ- ನಟಿಯರು ಸಿನಿಮಾ ಜೊತೆಗೆ ತಮ್ಮದೇ ಸ್ವಂತ ಜಮೀನು, ಫಾರಂ ಹೌಸ್ ಹಾಗೂ ಕಮರ್ಶಿಯಲ್ ಮಾಲ್ಗಳತ್ತ ಮುಖ ಮಾಡಿದ್ದಾರೆ. ಅದರಂತೆ ಇದೀಗ ಹಾಸ್ಯ ನಟ ಚಿಕ್ಕಣ್ಣ ತಮ್ಮದೇ ಹೊಸ ಫಾರಂ ಹೌಸ್ನ್ನು ಆರಂಭಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿರುವ ನಟ ದರ್ಶನ್ ಅವರು ಮೈಸೂರಿನಲ್ಲಿರುವ ತೂಗುದೀಪ ಫಾರಂ ಹೌಸ್ ಹೊಂದಿದ್ದು, ಅದರಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಪ್ರಾಣಿ, ಪಕ್ಷಿಗಳನ್ನು ಸಾಕಿ, ವ್ಯಾಪಾರ ಮಾಡುತ್ತಿದ್ದಾರೆ. ಈಗ ದರ್ಶನ್ ಹಾದಿಯಲ್ಲಿಯೇ ಹಾಸ್ಯ ನಟ ಚಿಕ್ಕಣ್ಣ ಕೂಡ ಸಾಗುತ್ತಿದ್ದಾರೆ. ಮೈಸೂರಿನ ಸಾಗರ ಎಂಬ ಹಳ್ಳಿಯಲ್ಲಿ ಚಿಕ್ಕಣ್ಣ, ಚಾಮುಂಡೇಶ್ವರಿ ಮೇಕೆ ಹಾಗೂ ನಾಟಿ ಕೋಳಿ ಫಾರಂ ಹೌಸ್ನ್ನು ಆರಂಭಿಸಿದ್ದಾರೆ. ಈ ಮೂಲಕ ಮೇಕೆ ಹಾಗೂ ನಾಟಿ ಕೋಳಿಗಳನ್ನು ಸಾಕಿ ಮಾರಾಟ ಮಾಡಲು ಮುಂದಾಗಿದ್ದಾರೆ.
![Comedian Chikkanna Started Goat Farm House at Mysore](https://etvbharatimages.akamaized.net/etvbharat/prod-images/9896872_thujpg.jpg)
ಓದಿ: ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಅರುಣ್ ಸಾಗರ್
ಕೆಲ ದಿನಗಳ ಹಿಂದೆ ದರ್ಶನ್ ಆ್ಯಂಡ್ ಗ್ಯಾಂಗ್ ಬೈಕ್ ರೈಡಿಂಗ್ ಹೋಗಿದ್ದ ಸಂದರ್ಭದಲ್ಲಿ ಚಿಕ್ಕಣ್ಣನ ಮೇಕೆ ಫಾರಂ ಹೌಸ್ಗೆ ಭೇಟಿ ನೀಡಿದ್ದರು. ಆ ವೇಳೆ ಚಿಕ್ಕಣ್ಣ ಅವರ ಕೆಲಸಕ್ಕೆ ನಟ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
![Comedian Chikkanna Started Goat Farm House at Mysore](https://etvbharatimages.akamaized.net/etvbharat/prod-images/9896872_thunnjpg.jpg)