ಶ್ರೀ ಭರತ ಬಾಹುಬಲಿ ಸ್ಯಾಂಡಲ್ವುಡ್ನಲ್ಲಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ರಿಲೀಸ್ಗೆ ಸಜ್ಜಾಗಿರೋ ಚಿತ್ರ. ಮಾಸ್ಟರ್ ಪೀಸ್ ಸಿನಿಮಾ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಆಕ್ಟ್ ಮಾಡಿ, ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ಸದ್ಯ ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಈ ಸಿನಿಮಾ ಮೂಲಕ ಬಹುಭಾಷಾ ನಟ ಚರಣ್ ರಾಜ್ ಮಗ ತೇಜ್ ಚರಣ್ ರಾಜ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡೋದಿಕ್ಕೆ ನಟ, ನಿರ್ದೇಶಕ ಮಂಜು ಮಾಂಡವ್ಯ, ಚರಣ್ ರಾಜ್, ತೇಜ್ ಚರಣ್ ರಾಜ್, ನಿರ್ಮಾಪಕ ಶಿವ ಪ್ರಕಾಶ್, ಸಾರಾ ಹರೀಶ್ ಸುದ್ದಿಗೋಷ್ಠಿ ಆಯೋಜಿಸಿದ್ರು.
ಇನ್ನು ಈ ಚಿತ್ರ ಹೆಚ್ಚು ಸೌಂಡ್ ಮಾಡ್ತಿರೋದಕ್ಕೆ ಕಾರಣ ಚಿತ್ರತಂಡ ನೀಡಿರುವ ಆಫರ್. ಶ್ರೀ ಭರತ ಬಾಹುಬಲಿ ಚಿತ್ರತಂಡ ಪ್ರೇಕ್ಷಕರಿಗೆ ಆಫರ್ ನೀಡಿದ್ದು, ಸಿನಿಮಾ ನೋಡಿ 5 ಲಕ್ಷ ರೂ. ಮೌಲ್ಯದ ಕಾರು ಹಾಗೂ 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಗೆಲ್ಲಿ ಅಂತಾ ಆಫರ್ ಕೊಟ್ಟಿದೆ. ಇದಕ್ಕಾಗಿ ಚಿತ್ರತಂಡ 25 ಲಕ್ಷ ಖರ್ಚು ಮಾಡಿ ಶ್ರೀ ಭರತ ಬಾಹುಬಲಿ ಲಕ್ಕಿ ಕೂಪನ್ ರೆಡಿ ಮಾಡಿದೆ.
ನಿರ್ದೇಶಕ ಕಮ್ ನಟ ಮಂಜು ಹೇಳುವ ಪ್ರಕಾರ ಶ್ರೀ ಭರತ ಬಾಹುಬಲಿ ಸಿನಿಮಾ ನೋಡಲು ಬರುವ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರಮಂದಿರದ ಟಿಕೆಟ್ ಜೊತೆಗೆ ಶ್ರೀ ಭರತ ಬಾಹುಬಲಿ ಫೋಟೋ ಇರುವ ಲಕ್ಕಿ ಕೂಪನ್ ಪಡೆಯಬೇಕು. ಈ ಸಿನಿಮಾ ರಿಲೀಸ್ ಆಗಿ 14 ದಿನದ ಬಳಿಕ ಈ ಲಕ್ಕಿ ಡಿಪ್ ಮೂಲಕ 20 ಪ್ರೇಕ್ಷಕರನ್ನು ಆರಿಸಿ ಅವರಿಗೆ 5 ಲಕ್ಷ ರೂ. ಮೌಲ್ಯದ ಕಾರು ಹಾಗು 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಬಹುಮಾನವಾಗಿ ಕೋಡಲಾಗುವುದು ಎಂದು ಹೇಳಿದರು.