'ಮಾಸ್ಟರ್ ಪೀಸ್' ನಿರ್ದೇಶಕ ಮಂಜು ಮಾಂಡವ್ಯ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಮಂಜು ಮಾಂಡವ್ಯ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನದ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ.
ಮಂಜು ಮಾಂಡವ್ಯ ಈ ಸಿನಿಮಾದಲ್ಲಿ ಭರತನಾಗಿ ಕಾಣಿಸಿಕೊಂಡರೆ, ಕಾಮಿಡಿ ನಟ ಚಿಕ್ಕಣ್ಣ ಬಾಹುಬಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದು, ನಿನ್ನೆ ಚಿತ್ರದ ಟ್ರೇಲರ್ ಹಾಗೂ ಮೂರು ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕೊಡಗಿನ ಬೆಡಗಿ ಸಾರಾ ಹರೀಶ್ ಹಾಗೂ ಬೆಂಗಳೂರಿನ ಟೆಕ್ಕಿ ಶ್ರೇಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು, ಕದ್ರಿ ಮಣಿಕಾಂತ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಹಾಗೂ 'ನಡುವೆ ಅಂತರವಿರಲಿ' ಖ್ಯಾತಿಯ ಪ್ರಖ್ಯಾತ್ ಪರಮೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಬಿಗ್ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಚಿತ್ರವನ್ನು ಮೈಸೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ನಿರ್ಮಿಸಿದ್ದು, ಇದೇ ತಿಂಗಳ 17ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ಮೂಲಕ ವಿತರಕ ಕಾರ್ತಿಕ್ ಗೌಡ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮೊದಲ ದಿನ ಈ ಸಿನಿಮಾ ನೋಡಲು ಬರುವ ಜನರಿಗೆ ಲಕ್ಕಿ ಡ್ರಾ ಮೂಲಕ ಕೋಟಿ ರೂಪಾಯಿ ಮೌಲ್ಯದ ಬಹುಮಾನ ನೀಡುವುದಾಗಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದಾರೆ.
- " class="align-text-top noRightClick twitterSection" data="">