ಹೈದರಾಬಾದ್(ತೆಲಂಗಾಣ) : ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬಂಗಾಳಿ ನಟಿ ರೂಪಾ ದತ್ತಾ ಅವರನ್ನು ಶನಿವಾರ ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್ಪಾಕೆಟ್ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರುವ ರೂಪಾ ದತ್ತಾ, ಶನಿವಾರ ಪುಸ್ತಕ ಮೇಳದಲ್ಲಿ ಕಸದಬುಟ್ಟಿಗೆ ಪರ್ಸ್ ಎಸೆಯುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಅವರನ್ನು ಆ ಬಗ್ಗೆ ಪ್ರಶ್ನಿಸಿದಾಗ ಸಮಪರ್ಕವಾದ ಉತ್ತರ ನೀಡುವಲ್ಲಿ ತಡವರಿಸಿದ್ದಾರೆ.
ಹಾಗಾಗಿ, ಅವರನ್ನು ಬಂಧಿಸಿ ಅವರ ಬ್ಯಾಗ್ ಶೋಧಿಸಿದಾಗ ಇನ್ನೂ ಹಲವಾರು ಪರ್ಸ್ಗಳು ಹಾಗೂ ₹75,000 ನಗದು ದೊರಕಿದೆ. ಈ ಅಪರಾಧದಲ್ಲಿ ಇನ್ನೂ ಹಲವರು ಶಾಮೀಲಾಗಿದ್ದಾರೆಯೇ ಎಂಬುದನ್ನು ಕಂಡು ಹಿಡಿಯಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸಿ ರೂಪಾ ದತ್ತಾ ಸುದ್ದಿಯಾಗಿದ್ದರು. ಅನುರಾಗ್ ಕಶ್ಯಪ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ರೂಪಾ ದತ್ತಾ ಅವರು ಬೇರೊಂದು ವ್ಯಕ್ತಿಯ ಜೊತೆ ನಡೆಸಿದ ಮಾತುಕತೆಯ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದರು.