ETV Bharat / sitara

ಅರ್ಜುನ್​ ಜನ್ಯ ಆರೋಗ್ಯ ಸ್ಥಿರ, ಇನ್ನೆರಡು ದಿನಗಳಲ್ಲಿ ಡಿಸ್ಜಾರ್ಜ್: ಡಾ. ಆದಿತ್ಯ ಉಡುಪ

author img

By

Published : Feb 27, 2020, 10:33 AM IST

Updated : Feb 27, 2020, 1:10 PM IST

ಅರ್ಜುನ್ ಜನ್ಯ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಸ್ಪೆಷಲ್ ವಾರ್ಡಿನಿಂದ ಜನರಲ್ ವಾರ್ಡಿಗೆ ಶಿಫ್ಟ್ ಮಾಡಿದ್ದೇವೆ. ಆರೋಗ್ಯ ಸ್ಥಿರವಾಗಿದ್ದು ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Arjun janya
ಅರ್ಜುನ್ ಜನ್ಯಾ

ಮೈಸೂರು: ಸ್ಯಾಂಡಲ್​ವುಡ್​ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆರೋಗ್ಯ ಸ್ಥಿರವಾಗಿದ್ದು ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗುವುದು ಎಂದು ಮೈಸೂರು ಅಪೋಲೋ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಆದಿತ್ಯ ಉಡುಪ ಹಾಗೂ ಡಾ. ರಾಜ್​​​ಕುಮಾರ್ ಪಿ. ವಾದ್ವಾ ಮಾಹಿತಿ ನೀಡಿದ್ದಾರೆ.

ಅರ್ಜುನ್​ ಜನ್ಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಡಾ. ಆದಿತ್ಯ ಉಡುಪ

ಅರ್ಜುನ್ ಜನ್ಯ ಅವರಿಗೆ ನೀಡಲಾದ ಚಿಕಿತ್ಸೆ ಬಗ್ಗೆ ಮಾತನಾಡಿದ ವೈದ್ಯಾಧಿಕಾರಿಗಳು ಭಾನುವಾರ ಮಧ್ಯಾಹ್ನವೇ ಅರ್ಜುನ್ ಜನ್ಯ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರಿಕ್ ಚಿಕಿತ್ಸೆ ನಂತರ ಹೆಚ್ಚುವರಿ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಬೆನ್ನುನೋವು, ಎದೆನೋವು ಹಾಗೂ ತೀವ್ರ ತಲೆ ನೋವು ಕಾಣಿಸಿಕೊಂಡಿತು. ಆದ್ದರಿಂದ ಸ್ಪೆಷಲ್ ವಾರ್ಡಿನಲ್ಲಿಟ್ಟು ಚಿಕಿತ್ಸೆ ಮುಂದುವರೆಸಲಾಯಿತು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅರ್ಜುನ್ ಜನ್ಯ ಸಂಪೂರ್ಣ ಗುಣಮುಖರಾದರು. ಆದರೆ ಬುಧವಾರ ಮುಂಜಾನೆ ಕುಟುಂಬಸ್ಥರ ಅನುಮತಿ ಮೇರೆಗೆ ಅಂಜಿಯೋಗ್ರಾಂ, ಅಂಜಿಯೋಪ್ಟಾಸ್ಟ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಮಾಡಿದ ನಂತರ ಹೃದಯಭಾಗದ ರಕ್ತ ನಾಳಗಳು ಶೇಕಡ 99% ರಷ್ಟು ಬ್ಲಾಕ್ ಆಗಿದ್ದು ಕಂಡು ಬಂತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಸ್ಪೆಷಲ್ ವಾರ್ಡಿನಿಂದ ಜನರಲ್ ವಾರ್ಡಿಗೆ ಶಿಫ್ಟ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Apollo hospital Health bulletin
ಆಸ್ಪತ್ರೆಯಿಂದ ಬಿಡುಗಡೆ ಮಾಡಲಾದ ಹೆಲ್ತ್ ಬುಲೆಟಿನ್

ಡಾ. ಭರತೀಶ್ ರೆಡ್ಡಿ ಮಾತನಾಡಿ, ವೈದ್ಯರ ಸಲಹೆ ಪಡೆದು ಅರ್ಜುನ್ ಜನ್ಯ ಆರೋಗ್ಯ ಕಾಪಾಡಿಕೊಳ್ಳಕಬೇಕು. ಖ್ಯಾತ ಸಂಗೀತ ನಿರ್ದೇಶಕರಾದ ಅವರದ್ದು ಸದಾ ಒತ್ತಡದಲ್ಲಿರುವ ಲೈಫ್ ಸ್ಟೈಲ್. ಅಂತಹ ವ್ಯಕ್ತಿಗಳು ಆರೋಗ್ಯದ ಕಡೆ ಕೂಡಾ ಗಮನ ನೀಡಬೇಕು. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ, 15 ದಿನಗಳು ರೆಸ್ಟ್ ಮಾಡಿದರೆ ಒಳ್ಳೆಯರು ಎಂದು ಹೇಳಿದರು. ಡಾ. ರಾಜ್​​​ಕುಮಾರ್ ಮಾತನಾಡಿ, ಬಿಡುವಿಲ್ಲದ ಕೆಲಸ, ಹೊರಗಡೆ ಊಟ ಹಾಗೂ ಹೆಚ್ಚಾಗಿ ಟ್ರಾವೆಲ್ ಮಾಡಿದ್ದರಿಂದ ಜನ್ಯ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯಕ್ಕೆ ಎಲ್ಲವೂ ನಾರ್ಮಲ್ ಆಗಿದ್ದು 15 ದಿನಗಳು ರೆಸ್ಟ್ ಮಾಡಿದರೆ ಎಲ್ಲಾ ಸರಿಹೋಗುತ್ತದೆ ಎಂದರು.

ಜನ್ಯ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ

Last Updated : Feb 27, 2020, 1:10 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.