ETV Bharat / sitara

'ಅಂದವಾದ' ಸಿನಿಮಾಗೆ ತಲೆದೂಗಿದ ಪ್ರೇಕ್ಷಕ, ರೇಟಿಂಗ್‌ನಲ್ಲೂ ಮುಂದಿದೆ ಪ್ರೇಮ ಕಹಾನಿ - ಅಂದವಾದ ಚಿತ್ರಕ್ಕೆ ಐಎಂಬಿಡಿಯಲ್ಲಿ 3ನೇ ಸ್ಥಾನ

ಅಪ್ಪಟ ಸ್ವಮೇಕ್ ಆಗಿರುವ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಹೊಸತನ ಎದ್ದು ಕಾಣುತ್ತಿದೆ.

'ಅಂದವಾದ'
author img

By

Published : Oct 29, 2019, 11:38 PM IST

'ಅಂದವಾದ' ಸಿನಿಮಾ, ಅಪ್ಪಟ ಹೊಸಬರ ತಂಡವೊಂದು ಸೇರಿಕೊಂಡ ಮಾಡಿರುವ ಸಿನಿಮಾ. ಎಲ್ಲಾ ಆ್ಯಂಗಲ್​​​ನಿಂದಲೂ ಜಾಗ್ರತೆ ವಹಿಸಿ, ಕನ್ನಡಿಗರ ಮನ ಗೆಲ್ಲಲೇಬೇಕು, ಚೊಚ್ಚಲ ಪ್ರಯತ್ನದಲ್ಲಿ ನಿಲ್ಲಲೇಬೇಕು ಎಂದು ಶ್ರಮ ಹಾಕಿರುವ ಮುದ್ದಾದ ಪ್ರೇಮ ಕಹಾನಿ ಇದು.

Andavada
'ಅಂದವಾದ'

ಕಳೆದ ವಾರವಷ್ಟೇ ಪ್ರೇಕ್ಷಕರ ಎದುರಿಗೆ ಬಂದಿರುವ 'ಅಂದವಾದ' ಸಿನಿಮಾ ಹದಿ, ಹರೆಯದ ಯುವಜನತೆಯನ್ನು ಆಕರ್ಷಿಸುತ್ತಿದೆ. ಅಪ್ಪಟ ಹಸಿರು, ಮಳೆ ಹಿನ್ನೆಲೆಯಲ್ಲಿ ಚಿತ್ರಿಸಿರುವ ಮುದ್ದಾದ ಪ್ರೇಮಕಥೆ. ಜೈ ಎಂಬ ಹ್ಯಾಂಡ್​​ಸಮ್​ ಹುಡುಗ ಮತ್ತು ಅನುಷಾ ರಂಗನಾಥ್ ಎಂಬ ಬ್ಯೂಟಿಫುಲ್ ಹುಡುಗಿಯ ಕಾಂಬಿನೇಷನ್, ಈ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಅಪ್ಪಟ ಸ್ವಮೇಕ್ ಆಗಿರುವ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಹೊಸತನ ಎದ್ದು ಕಾಣುತ್ತಿದೆ. ವಿಶೇಷ ಎಂದರೆ ಸಿನಿಮಾ ಹೊಸಬರದ್ದೇ ಆದರೂ IMDB ರೇಟಿಂಗ್​​​ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

jai, anusha ranganath
ಜೈ, ಅನುಷಾ ರಂಗನಾಥ್​​

ಪರಭಾಷಾ ದೊಡ್ಡ ಸಿನಿಮಾಗಳ ಹಾವಳಿಯ ನಡುವೆ ಕನ್ನಡದ ಈ ಸಿನಿಮಾ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಮೊದಲ ನಿರ್ದೇಶನದಲ್ಲೇ ಛಲದಿಂದ ಸಾಧನೆ ಮಾಡಿ ಗೆದ್ದಿರುವ ನಿರ್ದೇಶಕ ಚಲ ರಾಜ್ಯದ ಗಮನ ಸೆಳೆದಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರು ಹೀಗೆ ಪ್ರೋತ್ಸಾಹ ನೀಡಿದರೆ ಇದು ಮತ್ತೊಂದು ಮುಂಗಾರು ಮಳೆ ಸಿನಿಮಾ ಆಗುವುದರಲ್ಲಿ ಸಂದೇಹವೇ ಇಲ್ಲ. 'ಮುಂಗಾರು ಮಳೆ' ಚಿತ್ರಕ್ಕೆ ಕೂಡಾ ಇದೇ ರೀತಿಯ ಪ್ರತಿಕ್ರಿಯೆ ದೊರೆತಿತ್ತು. ಜನರು ಥಿಯೇಟರ್​​ಗೆ ನುಗ್ಗಿ ಬಂದಿದ್ದು ಮೂರು ವಾರಗಳ ನಂತರ. ನಂತರ ಇಡೀ ಕರ್ನಾಟಕವನ್ನೇ ಆ ಗುಂಗಲ್ಲಿ ಮುಳುಗಿಸಿತ್ತು.

Intro:IMDB ರೇಟಿಂಗ್ ನಲ್ಲಿ 3ನೇ ಸ್ಥಾನ ಪಡೆದುಕೊಂಡ ಹೊಸಬರ ಅಂದವಾದ ಚಿತ್ರ!!

ಅಂದವಾದ.‌ ಅಪ್ಪಟ ಹೊಸಬರ ಚಿತ್ರತಂಡವೊಂದು ಸೇರಿಕೊಂಡ ಮಾಡಿರೋ ಸಿನಿಮಾ. ಎಲ್ಲಾ ಆ್ಯಂಗಲ್ ನಿಂದ್ಲೂ ಜಾಗ್ರತೆ ವಹಿಸಿ, ಕನ್ನಡಿಗರ ಮನ ಗೆಲ್ಲಲೇ ಬೇಕು, ಚೊಚ್ಚಲ ಪ್ರಯತ್ನದಲ್ಲೇ ನಿಲ್ಲಲೇ ಬೇಕು ಅಂತ ಶ್ರಮಹಾಕಿರೋ ಮುದ್ದಾದ ಪ್ರೇಮ ಕಹಾನಿ..ಕಳೆದ ವಾರವಷ್ಟೇ ಸೈಲೆಂಟಾಗಿ ಪ್ರೇಕ್ಷಕರೆದುರಿಗೆ ಬಂದಿರೋ ಅಂದವಾದ ಚಿತ್ರ ಹದಿ, ಹರೆಯದ ಯೂತ್ಸ್ ನ್ನ ಆಕರ್ಷಿಸುತ್ತಿದೆ.ಅಪ್ಪಟ ಹಸಿರು, ಮಳೆ ಹಿನ್ನೆಲೆಯಲ್ಲಿ ಚಿತ್ರಿಸಿರೋ ಮುದ್ದಾದ ಪ್ರೇಮಕಥೆ. ಜೈ ಅನ್ನೋ ಹ್ಯಾಡ್ಸಂ ಹುಡುಗ ಮತ್ತು ಅನುಷ್ ರಂಗನಾಥ್ ಅನ್ನೋ ಬ್ಯೂಟಿಫುಲ್ ಹುಡುಗಿಯ ಕಾಂಬೋ ಈ ಸಿನಿಮಾಗೆ ದೊಡ್ಡ ಪ್ಲಸ್ ಆಗಿದೆ. ಸುಳ್ಳುಗಳನ್ನ ಹೇಳಿಕೊಂಡು, ಪ್ರೀತಿಸೋ ಹುಡುಗಿಯೊಬ್ಬಳ ಸ್ಟೋರಿಯಿದು.ಅಪ್ಪಟ ಸ್ವಮೇಕ್ ಆಗಿರೋ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಫ್ರೆಶ್ ನೆಸ್ ಎದ್ದು ಕಾಣ್ತಿದೆ. ವಿಶೇಷ ಅಂದ್ರೆ, ದೀಪಾವಳಿ ಪ್ರಯುಕ್ತ ರಿಲೀಸ್ ಆಗಿರೋ ಅಂದವಾದ ಸಿನಿಮಾ ಹೊಸಬರದ್ದೇ ಆದ್ರೂ, IMDB ರೇಟಿಂಗ್ ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಪರಭಾಷಾ ದೊಡ್ಡ ಸಿನಿಮಾಗಳ ಹಾವಳಿಯ ನಡುವೆಯ ಕನ್ನಡದ ಈ ಸಿನಿಮಾ ಗಮನ ಸೆಳೆತಿರೋದು, ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೊಸ ಚೈತನ್ಯ ತಂದೊಡ್ಡಿದೆ. ಚೊಚ್ಚಲ ನಿರ್ದೇಶನ ಮಾಡಿರೋ ಚಲ, ಅಂದವಾದ ಮೂಲಕ ಮೊದಲ ಪ್ರಯತ್ನದಲ್ಲೇ ದೊಡ್ಡದಾಗಿ ಗಮನ ಸೆಳೆದಿದ್ದಾರೆBody:.ಅಂದವಾದ ಸಿನಿಮಾಗೆ ಕನ್ನಡ ಸಿನಿಪ್ರಿಯರು ಇದೇ ಪ್ರೀತಿ ವಿಶ್ವಾಸ ಪ್ರೋತ್ಸಾಹವನ್ನ ಮುಂದುವರೆಸಿದರೆ. ಖಂಡಿತ ಇದು ಮತ್ತೊಂದು ಮುಂಗಾರು ಮಳೆಯಾಗೋದ್ರಲ್ಲಿ ದೂಸ್ರಾ ಮಾತೇ ಇಲ್ಲ. ಹೌದು, ಮುಂಗಾರು ಮಳೆ ಸಿನಿಮಾ ಕೂಡ ಇದೇ ರೀತಿ ಮೊದಲವಾರ ಒಳ್ಳೆಯ ಪ್ರತಿಕ್ರಿಯೆ ಗಳಿಸಿತ್ತಾದ್ರೂ, ಜನ ಥಿಯೇಟರ್ಗೆ ನುಗ್ಗಿ ಬಂದಿದ್ದು, ಮೊದಲ ಮೂರು ದಿನಗಳ ನಂತ್ರ.ಅದ್ರಲ್ಲೂ ಎರಡನೇ ವಾರದಿಂದ ಮುಂಗಾರು ಮಳೆ ಮಾಡಿದ್ದು ರಿಯಲ್ ಲವ್ ಮ್ಯಾಜಿಕ್, ಮ್ಯೂಸಿಕ್ ಮ್ಯಾಜಿಕ್ , ಮಳೆ ಮ್ಯಾಜಿಕ್ ಇಡೀ ಕರ್ನಾಟಕವನ್ನೇ ಆ ಗುಂಗಲ್ಲಿ ಮುಳುಗಿಸಿ ಬಿಡ್ತು.. ಇದೀಗ ಅಂದವಾದ ಒಂದು ರೀತಿ ಅದೇ ಹಾದಿಯಲ್ಲಿದೆ. ಈ ಚಿತ್ರಕ್ಕೆ ಮುಂಗಾರು ಮಳೆ ಸಿನಿಮಾಕ್ಕೆ ಸಿಕ್ಕಷ್ಟು ಪ್ರೋತ್ಸಾಹ ಸಿಕ್ಕಿ ಬಿಟ್ರೆ, ಖಂಡಿತವಾಗಿಯೂ ಈ ಸಿನಿಮಾ ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಎವರ್ ಗ್ರೀನ್ ಲವ್ ಸಿನಿಮಾ ಆಗಿ ಉಳಿದುಕೊಳ್ಳುತ್ತೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.