ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಗೂ ಮುನ್ನ ಅಬ್ಬರಿಸಿದ ಸಿನಿಮಾಗಳ ಪೈಕಿ ಪ್ರೇಮ್ ನಿರ್ದೇಶನದ ವಿಲನ್ ಸಿನಿಮಾ ಕೂಡ ಒಂದು. ಇಬ್ಬರು ಸ್ಟಾರ್ ನಟರಾದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಸಿನಿಮಾದಲ್ಲಿ ಅಭಿನಯಿಸಿದ್ದು ಅಭಿಮಾನಿಗಳಲ್ಲಿ ಖುಷಿ ನೀಡಿದ್ದರು.
ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆ್ಯಮಿ ಜಾಕ್ಸನ್ ಒಂದು ಸಂತಸದ ಸುದ್ದಿ ನೀಡಿದ್ದಾರೆ. ಹೌದು ಆ್ಯಮಿ ಜಾಕ್ಸ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ, ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಮಗುವಿಗೆ ಹಾಲುಣಿಸುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ಏಂಜಲ್, ಈ ಪ್ರಪಂಚಕ್ಕೆ ಸುಸ್ವಾಗತ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಆ್ಯಮಿ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಗೈದಿದ್ದು, ಫೈನಲಿ ಅವರ್ ಬೇಬಿ ಜಾಕ್ಸನ್ ಇನ್ ದಿ ವರ್ಲ್ಡ್ ಎಂದು ಬರೆದಿದ್ದಾರೆ.
ಆ್ಯಮಿ ಜಾಕ್ಸ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ಪತಿ ಜಾರ್ಜ್ ಪನೆಯೌಟು ಕೂಡ ಇದ್ದು ಮಡದಿಯ ಹಣೆಗೆ ಮುತ್ತಿಕ್ಕುತ್ತಿದ್ದಾರೆ.