ETV Bharat / sitara

ಬುರ್ಜ್‌ ಖಲೀಫಾದಲ್ಲಿ ಮುದ್ದುಮಗಳ ಹುಟ್ಟುಹಬ್ಬ ಆಚರಿಸಿದ ಅಲ್ಲು ಅರ್ಜುನ್ - Shaakuntalam Telugu Movie

ಪತ್ನಿ ಸ್ನೇಹಾ ರೆಡ್ಡಿ, ಪುತ್ರ ಅಲ್ಲು ಅಯಾನ್​ ಜೊತೆ ದುಬೈ ಪ್ರವಾಸದಲ್ಲಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಮುದ್ದಿನ ಮಗಳು ಅಲ್ಲು ಆರ್ಹಾಳ 5ನೇ ವರ್ಷದ ಜನ್ಮದಿನವನ್ನು ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಆಯೋಜಿಸಿದ್ದಾರೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್ - ಅಲ್ಲು ಆರ್ಹಾ
author img

By

Published : Nov 22, 2021, 3:44 PM IST

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ಮುದ್ದಿನ ಮಗಳು ಅಲ್ಲು ಆರ್ಹಾ ನಿನ್ನೆ (ನ.21) ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಪುಟಾಣಿಯ ಹುಟ್ಟುಹಬ್ಬವನ್ನು ನಟ ತನ್ನ ಕುಟುಂಬದೊಂದಿಗೆ ಸೇರಿ ಬುರ್ಜ್ ಖಲೀಫಾದಲ್ಲಿ ಆಚರಿಸಿದರು. (Allu Arjun celebrates daughter Arya's birthday at Burj Khalifa).

ಈಗಾಗಲೇ ತನ್ನ ಕ್ಯೂಟ್​ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆರ್ಹಾ ಸಖತ್​ ಫೇಮಸ್​ ಆಗಿದ್ದಾಳೆ. ಈಕೆಯ ಫೋಟೋ, ವಿಡಿಯೋ ಇರುವ ಪೋಸ್ಟ್​ಗಳಿಗೆ ಲಕ್ಷಗಟ್ಟಲೆ ಕಾಮೆಂಟ್‌ಗಳು, ಲೈಕ್​ಗಳು ಬರುತ್ತವೆ. ಅಷ್ಟೇ ಅಲ್ಲ, ಸಮಂತಾ ರುತ್ ಪ್ರಭು ನಟನೆಯ 'ಶಾಕುಂತಲಂ' ಸಿನಿಮಾದಲ್ಲಿ (Shaakuntalam Telugu Movie) ಕಾಣಿಸಿಕೊಳ್ಳಲಿದ್ದಾಳೆ ಆರ್ಹಾ.

ಪತ್ನಿ ಸ್ನೇಹಾ ರೆಡ್ಡಿ, ಪುತ್ರ ಅಲ್ಲು ಅಯಾನ್​ ಜೊತೆ ದುಬೈ ಪ್ರವಾಸದಲ್ಲಿರುವ ಸ್ಟೈಲಿಶ್ ಸ್ಟಾರ್, ಮಗಳು ಆರ್ಹಾಳ ಜನ್ಮದಿನ (Allu Arha Birthday Celebration) ಆಚರಿಸಲು ಐಕಾನಿಕ್ ಕಟ್ಟಡ ಬುರ್ಜ್ ಖಲೀಫಾವನ್ನು ಆಯ್ಕೆ ಮಾಡಿದ್ದಾರೆ. ಆದರೆ ಕೋವಿಡ್​ನಿಂದಾಗಿ ಬುರ್ಜ್ ಖಲೀಫಾ ಸಾರ್ವಜನಿಕ ಪ್ರವೇಶಕ್ಕೆ ಹಾಗೂ ಪಾರ್ಟಿಗಳ ಆಯೋಜನೆಗೆ ನಿಷೇಧಿಸಲಾಗಿದ್ದು, ತೆಲುಗು ಸ್ಟಾರ್​ ಕುಟುಂಬಕ್ಕೆ ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Puneeth Rajkumar's Biopic? ತೆರೆ ಮೇಲೆ ಬರಲಿದಿಯ್ಯಾ ಪವರ್ ಸ್ಟಾರ್ ಬಯೋಪಿಕ್? ನಿರ್ದೇಶಕ ಸಂತೋಷ್ ಆನಂದ್​​ರಾಮ್ ಹೇಳಿದ್ದೇನು?

ಇತ್ತ, ಅಲ್ಲು ಅರ್ಜುನ್ ಟ್ವಿಟರ್​ ಖಾತೆಯಲ್ಲಿ ತಮ್ಮ ಲಿಟ್ಲ್​ ಪ್ರಿನ್ಸೆಸ್​ಗೆ​ 'ಲವ್​ ಯೂ ಸೋ ಮಚ್​ ಚಿನ್ನ ಬೇಬಿ' ಎಂದು ವಿಶ್​ ಮಾಡಿ ಮಗಳೊಂದಿಗಿನ ಫೋಟೋ ಶೇರ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.