ETV Bharat / sitara

ಸಾಮಾಜಿಕ ಮಾಧ್ಯಮ ಜನರನ್ನು ವಿಭಜಿಸುತ್ತಿದೆ.. ನಟಿ ಆಲಿಯಾ ಭಟ್ ಕಳವಳ

ಪ್ರತಿವರ್ಷ ಭಾರತದಿಂದ ಹೆಚ್ಚಿನ ನಟರು, ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಅಕಾಡೆಮಿ ಗುರುತಿಸುತ್ತಿದೆ. ಭಾರತೀಯ ಸಿನಿಮಾ ಪ್ರಪಂಚದಾದ್ಯಂತ ಜನರ ಹೃದಯಗಳನ್ನು ತಲುಪುತ್ತಲೇ ಇದೆ..

Alia Bhatt
ಆಲಿಯಾ ಭಟ್
author img

By

Published : Jul 3, 2020, 7:57 PM IST

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮನ್ನು ಸದಸ್ಯರಾಗಲು ಆಹ್ವಾನಿಸಿದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್​​​​ಗೆ ಸೋಷಿಯಲ್​ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ಸಂದೇಶದಲ್ಲಿ ಸಾಮಾಜಿಕ ಮಾಧ್ಯಮವು ಜನರನ್ನು ವಿಭಜಿಸುತ್ತದೆ ಎಂದಿದ್ದಾರೆ. ಅಕಾಡೆಮಿಯ ಸದಸ್ಯರಾಗಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್​ಗೆ ಧನ್ಯವಾದ ಹೇಳುತ್ತೇನೆ ಎಂದಿರುವ ಅವರು, ಈ ಬಗ್ಗೆ ನನಗೆ ಗೌರವವಿದೆ ಎಂದಿದ್ದಾರೆ.

ಭಾರತೀಯ ಚಿತ್ರರಂಗವು ವಿಶ್ವ ವೇದಿಕೆಯಲ್ಲಿ ಬಹಳ ಉನ್ನತ ವೇದಿಕೆಯನ್ನು ಕಂಡುಕೊಳ್ಳುತ್ತಿರುವುದನ್ನು ನೋಡುವುದರಲ್ಲಿ ಆಳವಾದ ತೃಪ್ತಿಯಿದೆ. ಅಲ್ಲದೇ ಪ್ರತಿವರ್ಷ ಭಾರತದಿಂದ ಹೆಚ್ಚಿನ ನಟರು, ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಅಕಾಡೆಮಿ ಗುರುತಿಸುತ್ತಿದೆ ಎಂದಿರುವ ಅವರು, ಭಾರತೀಯ ಸಿನೆಮಾ ಪ್ರಪಂಚದಾದ್ಯಂತ ಜನರ ಹೃದಯಗಳನ್ನು ತಲುಪುತ್ತಲೇ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಮುಕ್ತವಾಗಿರುತ್ತದೆ : ಸಿನಿಮಾ ಎಂಬುದು ನೀರಿನಂತೆ, ಅದು ಅದರ ನಿರ್ದಿಷ್ಟ ಗುರಿ ಕಂಡುಕೊಳ್ಳುತ್ತದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಮತ್ತು ನೀರಿನಂತೆ ಅದು ಯಾವುದೇ ಜನಾಂಗ, ವರ್ಗ, ಗಡಿ, ಅಥವಾ ಭೌಗೋಳಿಕತೆ ತಿಳಿಯದೆ ಮುಕ್ತವಾಗಿ ಹರಿಯುತ್ತದೆ. ಅಲ್ಲದೇ, ಇದು ತನ್ನ ಹಾದಿಯಲ್ಲಿ ಎಲ್ಲವನ್ನೂ ಸ್ವೀಕರಿಸುತ್ತದೆ ಎಂದು ಸ್ವಜನಪಕ್ಷಪಾತದ ವಿರುದ್ಧ ಟಾಂಗ್​ ನೀಡಿದ್ದಾರೆ.

ಚಲನಚಿತ್ರಗಳ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ವಿಂಗಡಿಸಬಹುದು. ಆದರೆ, ಒಟ್ಟಾರೆ ಸಿನಿಮಾ ಪ್ರಬಲವಾಗಿ ಸೆಳೆಯುವ ಮತ್ತು ಏಕೀಕರಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.