ಕನ್ನಡ ಚಲನಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರೆ ತಾರಾ ಅನುರಾಧ ಅವರು ಸಹ ಅನಾಥ ಅಂಧ ಮಕ್ಕಳ ಜತೆ ಯೋಗ ಮಾಡಿದ್ದಾರೆ. ಇಂದು ಮುಂಜಾನೆ ಬೆಂಗಳೂರಿನ ಜೆಪಿನಗರದಲ್ಲಿರುವ ಅನಾಥ ಹಾಗೂ ಅಂಧ ಮಕ್ಕಳ ಶಾಲೆಯಲ್ಲಿರುವ ವಿಶೇಷ ಚೇತನ ಮಕ್ಕಳೊಂದಿಗೆ ತಾರಾ ಯೋಗಾಸನ ಮಾಡಿದರು. ಈ ಮೂಲಕ ಈ ದೇವರ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
![actress tara anuradha](https://etvbharatimages.akamaized.net/etvbharat/prod-images/img-20190621-wa00231561114068496-62_2106email_1561114080_1012.jpg)
ಪ್ರತಿದಿನ ಯೋಗ ಮಾಡ್ತಿನಿ ಅಂತಾರೆ ಡಾಲಿ ಬೇಬಿ ಅನಿತಾ ಭಟ್ :
![yoga](https://etvbharatimages.akamaized.net/etvbharat/prod-images/3624021_anita.jpg)
ಇನ್ನು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಕನ್ನಡದ ನಟಿ ನಾಯಕಿ ಅನಿತಾ ಭಟ್ ಅರ್ಪಣ ಯೋಗ ಕೇಂದ್ರದಲ್ಲಿ ಸ್ನೇಹಿತರ ಜತೆ ಯೋಗ ಮಾಡಿದ್ರು. ಅವರು ಯೋಗದ ಹಲವು ಆಸನಗಳನ್ನು ಮಾಡಿ ಗಮನ ಸೆಳೆದಿದ್ರು. ಈ ವೇಳೆ ಮಾತಾಡಿರುವ ಅವರು 'ನಿತ್ಯ ಯೋಗ ಮಾಡ್ತಿನಿ. ಅದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಒತ್ತಡ ಕಡಿಮೆ ಆಗುತ್ತದೆ ಎಂದರು. ಇನ್ನು ಅನಿತಾ ಭಟ್ ಸೈಕೋ ಸಿನಿಮಾ ಹಾಗೂ ಟಗರು ಚಿತ್ರದಲ್ಲಿ ಡಾಲಿ ಪ್ರೇಯಸಿ ಪಾತ್ರ ಮಾಡಿದ್ದಾರೆ.