Bigg Boss Season 8ಅನ್ನು ಗೆಲ್ಲಲು ಸ್ಪರ್ಧಿ ವೈಷ್ಣವಿ ಗೌಡಗೆ ಎಲ್ಲ ಅರ್ಹತೆ ಇದೆ ಎಂದು ಅಗ್ನಿಸಾಕ್ಷಿಯ ಸಹ ಕಲಾವಿದೆ ಇಶಿತಾ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಾನು ನೋಡುತ್ತಿರುವ ವೈಷ್ಣವಿಯೇ ಬಿಗ್ಬಾಸ್ ಮನೆಯಲ್ಲಿ ಇದ್ದಾಳೆ. ಆಕೆಯಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ. ವೈಷ್ಣವಿಗೆ ಮೆಚ್ಯುರಿಟಿ ಇದೆ ಎಂದಿದ್ದಾರೆ.
ವೈಷ್ಣವಿ ತುಂಬಾ ಫನ್ ಮಾಡ್ತಾಳೆ. ಎಲ್ಲರೊಂದಿಗೆ ಬೆರೆಯುತ್ತಾಳೆ. ಬಿಗ್ಬಾಸ್ ಸೀಸನ್ಗಳಲ್ಲಿ ಶ್ರುತಿ ಅವರನ್ನು ಹೊರತುಪಡಿಸಿದರೆ ಮತ್ಯಾವ ಮಹಿಳೆಯೂ ಗೆದ್ದಿಲ್ಲ. ಹೀಗಾಗಿ, ಈ ಬಾರಿ ವೈಷ್ಣವಿ ಗೌಡ ಬಿಗ್ಬಾಸ್ ಸೀಸನ್ 8ರಲ್ಲಿ ಗೆಲ್ಲಬೇಕು ಎಂಬುದು ನನ್ನ ಆಶಯ ಎನ್ನುತ್ತಾರೆ ಇಶಿತಾ.
ಇದನ್ನೂ ಓದಿ: ಟ್ವಿಸ್ಟ್ ಕೊಟ್ಟ ಬಿಗ್ಬಾಸ್... ಮನೆಯ 8 ಮಂದಿ ನೇರವಾಗಿ ನಾಮಿನೇಟ್