ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಹಾಗೂ ಜಗದೀಶ್ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ-ತಂದೆಯಾದ ಖುಷಿಯಲ್ಲಿ ಅಮೂಲ್ಯ- ಜಗದೀಶ್ ಇದ್ದಾರೆ.
ಅಮೂಲ್ಯ ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಚೆಲುವಿನ ಚಿತ್ತಾರ ಸಿನಿಮಾ ನಾಯಕಿಯಾಗಿ ಭಾರಿ ಯಶಸ್ಸು ಜೊತೆಗೆ ಅಭಿಮಾನಿ ಬಳಗವನ್ನು ಗಳಿಸುತ್ತಾರೆ. ಚಿತ್ರರಂಗದಲ್ಲಿ ಅಮೂಲ್ಯ ಉತ್ತುಂಗದ ಮಟ್ಟದಲ್ಲಿ ಇರುವ ಸಮಯದಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಜೊತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡುತ್ತಾರೆ. ಇದೀಗ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅಮೂಲ್ಯ ಅವರ ಹೆರಿಗೆ ಆಗಿದ್ದು, ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಇಂದು 11.45ಕ್ಕೆ ಡೆಲಿವರಿ ಆಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಸಹೋದರ ದೀಪಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ರಿಲೀಸ್.. ಸಖತ್ತಾಗಿದೆ ಫವರ್ ಫುಲ್ ಸಾಂಗ್..
ಇನ್ನು ಚೊಚ್ಚಲ ಮಗವಿನ ನಿರೀಕ್ಷೆಯಲ್ಲಿದ್ದ ಜಗದೀಶ್ ಹಾಗೂ ಅಮೂಲ್ಯ ಬೇಬಿ ಬಂಪ್ ಫೋಟೋ ಶೂಟ್ ಹಾಗೂ ಅದ್ಧೂರಿಯಾಗಿ ಸೀಮಂತ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.