ETV Bharat / sitara

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಚಿತ್ರಕ್ಕೆ ರಿಷಬ್​​ ಶೆಟ್ಟಿ ಆ್ಯಕ್ಷನ್-ಕಟ್.. - ಶಿವರಾಜ್​ ಕುಮಾರ್​ ಚಿತ್ರಕ್ಕೆ ರಿಷಬ್​​ ಶೆಟ್ಟಿ ಆ್ಯಕ್ಷನ್ ಕಟ್

ರಿಕ್ಕಿ, ಕಿರಿಕ್​ ಪಾರ್ಟಿ, ಸಹಿಪ್ರಾ ಶಾಲೆ ಕಾಸರಗೋಡು ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಿಷಬ್​​ ಶೆಟ್ಟಿ, ಹ್ಯಾಟ್ರಿಕ್ ಹೀರೋ ಚಿತ್ರಕ್ಕೆ ನಿರ್ದೇಶನ‌ ಮಾಡುವ ಕಾಲ‌ ಕೂಡಿ ಬಂದಿದೆ. ಈ ಹಿಂದೆ ರುಸ್ತುಂ, ಭಜರಂಗಿ 2 ಚಿತ್ರಗಳನ್ನ ನಿರ್ಮಿಸಿದ್ದ ಜಯಣ್ಣ ಭೋಗೇಂದ್ರ ಮತ್ತೆ ಶಿವಣ್ಣನ ಹೊಸ ಸಿನಿಮಾಗೆ ಹಣ ಹೂಡಿಕೆ ಮಾಡಲಿದಾರೆ..

shivaraj kumar and Rishab Shetty
ಶಿವರಾಜ್​ ಕುಮಾರ್ ಹಾಗೂ ರಿಷಬ್​​ ಶೆಟ್ಟಿ
author img

By

Published : Jul 10, 2021, 7:19 PM IST

ಕನ್ನಡ ಚಿತ್ರರಂಗದ ಫೆವರೇಟ್ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್. ಸದ್ಯ ಭಜರಂಗಿ 2, ವೇದಾ ಹಾಗೂ ಶಿವಪ್ಪ ಸಿನಿಮಾಗಳಲ್ಲಿ ಬ್ಯುಸಿಯಾಗಿದಾರೆ. ಆದರೆ, ಸೆಂಚುರಿ ಸ್ಟಾರ್ 126ನೇ ಸಿನಿಮಾ, ಯಾವ ನಿರ್ದೇಶಕನ‌ ಜೊತೆ ಅನ್ನೋದು ಅನೌನ್ಸ್​ ಆಗಿದೆ.

ಸದ್ಯ ಸ್ಯಾಂಡಲ್​​ವುಡ್​​ನಲ್ಲಿ ನಿರ್ದೇಶನದ ಜತೆಗೆ ನಟನೆಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ವಾಪಸ್ ಆಗಲಿದ್ದಾರೆ. ಶಿವರಾಜ್​ಕುಮಾರ್​ ಅವರ 126ನೇ ಚಿತ್ರಕ್ಕೆ ರಿಷಬ್​ ಶೆಟ್ಟಿ ಆ್ಯಕ್ಷನ್-ಕಟ್​ ಹೇಳಲಿದ್ದಾರಂತೆ.

ರಿಕ್ಕಿ, ಕಿರಿಕ್​ ಪಾರ್ಟಿ, ಸಹಿಪ್ರಾ ಶಾಲೆ ಕಾಸರಗೋಡು ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಿಷಬ್​​ ಶೆಟ್ಟಿ, ಹ್ಯಾಟ್ರಿಕ್ ಹೀರೋ ಚಿತ್ರಕ್ಕೆ ನಿರ್ದೇಶನ‌ ಮಾಡುವ ಕಾಲ‌ ಕೂಡಿ ಬಂದಿದೆ. ಈ ಹಿಂದೆ ರುಸ್ತುಂ, ಭಜರಂಗಿ 2 ಚಿತ್ರಗಳನ್ನ ನಿರ್ಮಿಸಿದ್ದ ಜಯಣ್ಣ ಭೋಗೇಂದ್ರ ಮತ್ತೆ ಶಿವಣ್ಣನ ಹೊಸ ಸಿನಿಮಾಗೆ ಹಣ ಹೂಡಿಕೆ ಮಾಡಲಿದಾರೆ.

ಇದೇ ಜುಲೈ 12ರಂದು ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಅಧಿಕೃತವಾಗಿ ಘೋಷಣೆಯಾಗಲಿದೆ. ಆದರೆ, ಶಿವರಾಜ್ ಕುಮಾರ್ ಭಜರಂಗಿ 2 ಹಾಗೂ ವೇದಾ ಸಿನಿಮಾದ ಶೂಟಿಂಗ್ ಮುಗಿದ ಮೇಲೆ ರಿಷಬ್ ಶೆಟ್ಟಿ ಜೊತೆಗಿನ‌ ಸಿನಿಮಾ‌ ಆರಂಭವಾಗಲಿದೆ.

ಇದನ್ನೂ ಓದಿ: ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ.. ಬರ್ತ್​ಡೇ ಆಚರಣೆ ಬೇಡವೆಂದ ಹ್ಯಾಟ್ರಿಕ್ ಹೀರೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.