ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮಗಳ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದ ಸ್ನೇಹಿತರಿಗೆ, ಆಪ್ತರಿಗೆ, ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. ಖುದ್ದು ತಾವೇ ಎಲ್ಲರ ಮನೆಗಳಿಗೆ ತೆರಳುತ್ತಿರುವ ರವಿಮಾಮ, ಮದುವೆಯ ಕರೆಯೋಲೆ ನೀಡಿ ಆಹ್ವಾನಿಸುತ್ತಿದ್ದಾರೆ.
ಇಂದು ಖಾಸಗಿ ಹೊಟೇಲ್ನಲ್ಲಿ ಕುಟುಂಬ ಸಮೇತ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿರುವ ರವಿಚಂದ್ರನ್ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ತ್ರೀ ಡಿಯಲ್ಲಿರುವ ಮದುವೆ ಕಾರ್ಡ್ ನೀಡಿ ಇನ್ವೈಟ್ ಮಾಡಿದ್ದಾರೆ.
ಇದೇ ಮೇ 28 ಮತ್ತು 29ಕ್ಕೆ ಸ್ಯಾಂಡಲ್‍ವುಡ್‍ನ ರವಿಮಾಮನ ಮಗಳು ಗೀತಾಂಜಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಅಜಯ್ ಎಂಬುವರ ಜತೆ ಹಸೆಮಣೆ ಏರಲಿದ್ದಾರೆ.