ಅಪಘಾತಕ್ಕೀಡಾಗಿದ್ದ ವ್ಯಕ್ತಿವೋರ್ವನ ಜೀವ ಉಳಿಸಲು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಮುಂದಾಗಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ತನ್ನ ಅಭಿಮಾನಿಯ ಸ್ನೇಹಿತನಿಗೆ ಸಹಾಯ ಹಸ್ತ ಚಾಚಿದ್ದಾರೆ ಕರುನಾಡಿನ ರನ್ನ.
ಪಾರ್ಥ ಗೌಡ ಹೆಸರಿನ ಅಭಿಮಾನಿವೋರ್ವ, ತನ್ನ ಸ್ನೇಹಿತ ಬೈಕ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾನೆ. ಆತನ ಪ್ರಾಣ ಉಳಿಯಬೇಕಂದ್ರೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿದೆ. ಇದಕ್ಕಾಗಿ ವೈದ್ಯರು ₹10 ಲಕ್ಷ ಕೇಳಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ಸುದೀಪ್ ಅವರಿಗೆ ಟ್ವಿಟ್ಟರ್ನಲ್ಲಿ ಕೇಳಿಕೊಂಡಿದ್ದರು. ತಕ್ಷಣ ಈ ಟ್ವೀಟ್ಗೆ ಸ್ಪಂದಿಸಿರುವ ಸುದೀಪ್, ತಕ್ಷಣವೇ ನನ್ನ ಜನ ನಿಮ್ಮನ್ನು ಸಂಪರ್ಕಿಸುತ್ತಾರೆ. ಆತನ ಪ್ರಾಣ ಉಳಿಸಲು ಸಾಧ್ಯವಾದಷ್ಟು ಪ್ರಯತ್ನಿಸೋಣ. ನಿನ್ನ ಸ್ನೇಹಿತನಿಗೆ ನನ್ನ ಪ್ರಾರ್ಥನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಅವರ ಕರುಣಾಮಯಿ ಹೃದಯಕ್ಕೆ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ತಾವೂ ಕೂಡ ಆ ಸ್ನೇಹಿತನ ನೆರವಿಗೆ ಧಾವಿಸುವುದಾಗಿ ಹೇಳಿದ್ದಾರೆ.