ಕಾಮಿಡಿ ಕಿಂಗ್ ಚಿಕ್ಕಣ್ಣನ ಮದುವೆ ಮ್ಯಾಟರ್ ಸಾಕಷ್ಟು ಸದ್ದು ಮಾಡುತ್ತಿದೆ. ಇವರು ಎಲ್ಲೇ ಕಾಣಿಸಿಕೊಂಡರೂ 'ಸರ್ ನಿಮ್ಮ ಮದುವೆ ಯಾವಾಗ? ಅನ್ನೋ ಪ್ರಶ್ನೆ ಕೇಳಿಬರುತ್ತಿದೆ. ಸದ್ಯ 'ಮನೆ ಮಾರಾಟಕ್ಕಿದೆ' ಸಿನಿಮಾ ಪತ್ರಿಕಾಗೋಷ್ಠಿಯಲ್ಲೂ ಚಿಕ್ಕಣ್ಣನಿಗೆ ಮತ್ತೆ ಅದೇ ಪ್ರಶ್ನೆ ಎದುರಾಯಿತು. ಇದಕ್ಕೆ ನಗು ಮೊಗದಿಂದಲೇ ಉತ್ತರಿಸಿದ ಅವರು, ಇನ್ನೂ ಹುಡ್ಗಿ ಸಿಕ್ಕಿಲ್ಲ, ಸಿಕ್ಕಿದ್ಮಲೇ ನಿಮಗೆ ಹೇಳ್ತಿನಿ ಎಂದ್ರು.
ನಿಮ್ಮ ಮದುವೆ ಬಗ್ಗೆ ನಿಮ್ಮ ಪ್ಲ್ಯಾನಿಂಗ್ ಏನು ಎನ್ನುವ ಪ್ರಶ್ನೆಗೆ ರಿಯಾಕ್ಟ್ ಮಾಡಿದ ಚಿಕ್ಕಣ್ಣ, ಅಂತಹ ಪ್ಲ್ಯಾನ್ ಏನೂ ಇಲ್ಲ. ಫಸ್ಟ್ ಟೈಮ್ ಹೀರೋ ಆಗಿ ನಟಿಸುತ್ತಿದ್ದೇನೆ. ಈ ಸಿನಿಮಾ ಹಿಟ್ ಆದ್ರೆ ಮದುವೆ, ಇಲ್ಲ ಅಂದ್ರೆ ಇಲ್ಲ ಎಂದು ನಗುತ್ತಲೇ ಉತ್ತರಿಸಿದರು.