ರಾಧಾ ರಮಣ ಧಾರಾವಾಹಿಯಲ್ಲಿ ಅವನಿ ಅಲಿಯಾಸ್ ರಾಣಿಯಾಗಿ ನಟಿಸಿದ್ದ ಆಶಿತಾ ಚಂದ್ರಪ್ಪ ರಾಧಾ ರಮಣದ ನಂತರ ನಟನಾ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ರಾಧಾ ರಮಣದ ನಂತರ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳದ ನಟಿ ಆಶಿತಾ ಚಂದ್ರಪ್ಪ ಇದೀಗ ಉದ್ಯಮಿಯಾಗಿ ಬದಲಾಗಿದ್ದಾರೆ. ಫ್ಯಾಷನ್ ಬಗೆಗೆ ತಮಗಿರುವ ಅಗಾಧ ಪ್ರೀತಿಯನ್ನು ವಿಸ್ತರಿಸಿರುವ ಆಶಿತಾ, ತಮ್ಮದೇ ಆದ ಫ್ಯಾಷನ್ ಲೇಬಲ್ ತಂದಿದ್ದಾರೆ. ಈ ಮೂಲಕ ಮತ್ತೊಬ್ಬ ಕಿರುತೆರೆ ನಟಿ ಉದ್ಯಮಿ ಆಗಿದ್ದಾರೆ.
ಹೌದು, ಇತ್ತೀಚೆಗೆ ದೀಪಿಕಾ ದಾಸ್, ಶ್ವೇತಾ ಪ್ರಸಾದ್, ಶ್ವೇತಾ ಚಂಗಪ್ಪ ತಮ್ಮದೇ ಆದ ಉದ್ಯಮವನ್ನು ಆರಂಭಿಸಿದ್ದರು. ಇದೀಗ ಆ ಸಾಲಿಗೆ ಆಶಿತಾ ಚಂದ್ರಪ್ಪ ಸೇರ್ಪಡೆಯಾಗಿದ್ದಾರೆ. ಫ್ಯಾಷನ್ ಕುರಿತು ಉತ್ಸುಕರಾಗಿರುವ ಆಶಿತಾ, ಸಾಂಪ್ರದಾಯಿಕ ಉಡುಗೆಗಳಿಂದ ಪಾಶ್ಚಾತ್ಯ ಉಡುಗೆಗಳವರೆಗೂ ತಮ್ಮ ಲೇಬಲ್ನಲ್ಲಿ ಉತ್ತಮವಾದ ಡಿಸೈನರ್ ಕಲೆಕ್ಷನ್ ಹೊಂದಿದ್ದಾರೆ. ಇದಲ್ಲದೆ ಆಕ್ಸೆಸರೀಸ್ನಲ್ಲಿಯು ವಿಶೇಷ ಸಂಗ್ರಹವೂ ಅವರ ಬಳಿಯಿದೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಆಶಿತಾ, ಜೊತೆಜೊತೆಯಲಿ ಧಾರಾವಾಹಿ ಮೂಲಕ ನಟನಾ ಕರಿಯರ್ ಆರಂಭಿಸಿದರು. ಮುಂದೆ ಸುಂದರಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ ಆಶಿತಾ, ತಮಿಳಿನ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಆಶಿತಾ, ಐಎಎಸ್ ಶಾಲಿನಿ ಸಿನಿಮಾದಲ್ಲಿ ಶಾಲಿನಿ ಆಗಿ ನಟಿಸಿದ್ದಾರೆ.