ಮುಂಬೈ (ಮಹಾರಾಷ್ಟ್ರ): ಸ್ಯಾಂಡಲ್ವುಡ್ನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಚಿತ್ರ ಸುದೀಪ್ ಅಭಿನಯದ ‘ಹುಚ್ಚ’ ಸಿನಿಮಾ. ಈ ಸಿನಿಮಾ ಹಿಂದಿಯಲ್ಲಿ ‘ತೇರೇ ನಾಮ್’ ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು. ಸಲ್ಮಾನ್ ಖಾನ್ ಅಭಿನಯದ ‘ತೇರೇ ನಾಮ್’ ಚಿತ್ರ 2003ರಲ್ಲಿ ಬಿಡುಗೊಂಡು ಬಾಲಿವುಡ್ ಬಾಕ್ಸ್ ಆಫೀಸ್ ಗಲ್ಲಾ ಪೆಟ್ಟಿಗೆ ತುಂಬಿ ತುಳುಕುವಂತೆ ಮಾಡಿತ್ತು. ಸಲ್ಮಾನ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಆ ಚಿತ್ರದ ಕೆಲ ಸತ್ಯ ಘಟನೆಗಳನ್ನು ಸಲ್ಮಾನ್ ಖಾನ್ ಸರಿಗಮಪ ಶೋನಲ್ಲಿ ಹಂಚಿಕೊಂಡಿದ್ದಾರೆ.
ಅನೇಕ ಜನರಿಗೆ ಈ ಚಿತ್ರದ ಹಿಂದಿನ ಘಟನೆ ಬಗ್ಗೆ ತಿಳಿದಿಲ್ಲ. ತೇರೇ ನಾಮ್ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಬಹಳ ಆಸಕ್ತಿದಾಯಕ ಕಥೆಯಿದೆ. ನಾನು ಇನ್ನೊಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗ 'ತೇರೆ ನಾಮ್' ನಿರ್ಮಾಪಕ ಮತ್ತು ನನ್ನ ಆತ್ಮೀಯ ಸ್ನೇಹಿತ ಸುನೀಲ್ ಮಂಚಂದ ನನ್ನ ಬಳಿಗೆ ಬಂದರು. ಚಿತ್ರದ ಕಥೆ ಬಗ್ಗೆ ಹೇಳಿದರು. ಬಳಿಕ ಈ ಚಿತ್ರದಲ್ಲಿ ನೀವು ತಲೆ ಕೂದಲನ್ನು ತೆಗೆಸಬೇಕೆಂದು ಹೇಳಿದರು.
ಉದ್ವೇಗಕ್ಕೆ ಒಳಗಾಗಿ ತಲೆ ಬೋಳಿಸಿಕೊಂಡೆ
ನಾನು ಆ ಸಮಯದಲ್ಲಿ ಮತ್ತೊಂದು ಚಲನಚಿತ್ರ ಮಾಡುತ್ತಿದ್ದೆ. ಅಷ್ಟೇ ಅಲ್ಲದೆ ಆಗ ನಾನು ಕೆಲೆ ದಿನ ಜ್ವರದಿಂದ ಬಳಲುತ್ತಿದ್ದೆ. ಆದರೆ ಚಿತ್ರದ ನಿರ್ದೇಶಕರು ಚಿತ್ರೀಕರಣಕ್ಕೆ ಹಾಜರಾಗುವಂತೆ ನನ್ನನ್ನು ಪೀಡಿಸುತ್ತಿದ್ದರು. ಇದರಿಂದ ನನಗೆ ಬಹಳ ಕೋಪಬಂತು. ನಾನು ಉದ್ವೇಗಕ್ಕೊಳಗಾಗಿ ವಾಶ್‌ರೂಮ್‌ಗೆ ತೆರಳಿ ನನ್ನ ಕೂದಲನ್ನು ಬೋಳಿಸಿಕೊಂಡೆ ಎಂದರು.
ಮರುದಿನ ನಾನು ಸುನೀಲ್ ಜಿಗೆ ಕರೆ ಮಾಡಿ, ನಾನು ನನ್ನ ಕೂದಲನ್ನು ಬೋಳಿಸಿಕೊಂಡಿದ್ದೇನೆ ಮತ್ತು ತೇರೇ ನಾಮ್ ಚಿತ್ರಕ್ಕೆ ಸೈನ್ ಅಪ್ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದೆ. ಎಲ್ಲರೂ ಈ ಚಿತ್ರ ಮಾಡುವುದನ್ನು ವಿರೋಧಿಸಿದರು. ಆದರೆ, ಕೆಲವು ಕಾರಣಗಳಿಂದ ನಾನು ಈ ಚಿತ್ರ ಮಾಡಲು ಬಯಸಿದ್ದೆ. ಎಲ್ಲರ ಭಿನ್ನಾಭಿಪ್ರಾಯವನ್ನು ಲೆಕ್ಕಿಸದೇ ನಾನು ‘ತೇರೇ ನಾಮ ಚಿತ್ರದ ರಾಧೆ ಮೋಹನ್' ಪಾತ್ರವನ್ನು ವಹಿಸಿಕೊಂಡೆ ಎಂದು ಹೇಳಿದರು.
ಗ್ಯಾಲಕ್ಸಿಯಲ್ಲಿ ಚಿತ್ರದ ಬಗ್ಗೆ ಚರ್ಚಿಸುತ್ತಿದ್ದೆವು
ನನಗೆ ನೆನಪಿದೆ ಹಿಮೇಶ್ ಮತ್ತು ನಾನು ಗ್ಯಾಲಕ್ಸಿಯಲ್ಲಿ ಚಿತ್ರದ ಬಗ್ಗೆ ಚರ್ಚಿಸುತ್ತಿದ್ದೆವು. ಅವರು ಸಂಪೂರ್ಣ ಕಥಾವಸ್ತುವನ್ನು ಕೇಳಿದಾಗ ಅವರು ತಕ್ಷಣವೇ ಒಂದು ಹಾಡಿನೊಂದಿಗೆ ಬಂದರು. ಅದು ತೇರೆ ನಾಮ್ ಚಿತ್ರದ ಟೈಟಲ್ ಹಾಡಾಗಿತ್ತು. ಅದನ್ನು ಕೇಳಿದ ನಾನು ತಕ್ಷಣವೇ ಲಾಕ್ ಮಾಡಿದೆ. ನೀವು ನಂಬುವುದಿಲ್ಲ. ಅವರು ತಕ್ಷಣ ನನಗೆ ನಾಲ್ಕೈದು ಹಾಡುಗಳನ್ನು ಸ್ಥಳದಲ್ಲೇ ನೀಡಿದರು. ಅವುಗಳಲ್ಲಿ ಯಾವುದನ್ನೂ ನಾವು ತಿರಸ್ಕರಿಸಲು ಸಾಧ್ಯವಾಗಲಿಲ್ಲ. ಅವು ತುಂಬಾ ಚೆನ್ನಾಗಿದ್ದವು ಎಂದು ಸಲ್ಮಾನ್ ಖಾನ್ ಹೇಳಿದರು.
ಹಿಮೇಶ್ ಅಕ್ಷರಶಃ 13 ಹಾಡುಗಳೊಂದಿಗೆ ಬಂದರು. ಆ ಹಾಡುಗಳೆಲ್ಲವೂ ಸೂಪರ್ ಆಗಿದ್ದು, ತೆಗೆದು ಹಾಕಲು ಮನಸ್ಸು ಒಪ್ಪುತ್ತಿದ್ದಿಲ್ಲ. ಆದರೆ ಚಿತ್ರವು ಹೆಚ್ಚು ಬೇಡಿಕೆಯಿರುವ ಕಾರಣ ನಾವು ಏಳ ಹಾಡುಗಳನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು ಎಂದು ಹಿಮೇಶ್ ಹಾಡಿನ ಬಗ್ಗೆ ಹೇಳಿದರು.