ಹೈದರಾಬಾದ್ (ತೆಲಂಗಾಣ): ವಿನ್ಯಾಸಭರಿತ ದಿರಿಸುಗಳ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಗಮನ ಸೆಳೆದಿದ್ದಾರೆ. ಅವರ ಆಕರ್ಷಕ ಪೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ.
ಮತ್ಸ್ಯ ಕನ್ಯೆಯ ಲುಕ್ನಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋ ಇದೀಗ ಪತ್ರಿಕೆಯೊಂದರ ಮುಖಪುಟದಲ್ಲಿ ರಾರಾಜಿಸುತ್ತಿದೆ.
![This person is Janhvi Kapoor's 'favourite for life'. See his picture inside](https://etvbharatimages.akamaized.net/etvbharat/prod-images/janhvi-kapoor_0809newsroom_1631072672_363.jpg)
ನಟಿಯು ಇತ್ತೀಚೆಗೆ ವಿನ್ಯಾಸಭರಿತ ಬಟ್ಟೆ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅವುಗಳನ್ನು ನಿನ್ನೆ (ಸೋಮವಾರ) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಥೇಟ್ ಮತ್ಸ್ಯ ರೂಪದಲ್ಲಿ ಕಾಣಿಸಿಕೊಂಡಿರುವ ಜಾಹ್ನವಿಯ ಮಾದಕ ನೋಟಕ್ಕೆ ನೆಟಿಜನ್ಸ್ ಫಿದಾ ಆಗಿದ್ದಾರೆ.
ಫ್ಯಾಶನ್ ಮ್ಯಾಗಜೀನ್ ಹಲೋ ಎಂಬ ನಿಯತಕಾಲಿಕೆಗಾಗಿ ಜಾಹ್ನವಿ ಕ್ಯಾಮರಾಗೆ ಫೋಸ್ ನೀಡಿದ್ದು ಫೋಟೋವನ್ನು ಪತ್ರಿಕೆ ಮುಖಪುಟದಲ್ಲಿ ಅಚ್ಚು ಮಾಡಿಕೊಂಡಿದೆ.
- " class="align-text-top noRightClick twitterSection" data="
">
ವಸ್ತ್ರವಿನ್ಯಾಸಕ ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ದಿರಿಸುಗಳು ಇವುಗಳಾಗಿದ್ದು ಜಾಹ್ನವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ನನ್ನ ಜೀವನಕ್ಕೆ ಅಚ್ಚುಮೆಚ್ಚು ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಮನೀಶ್ ಮಲ್ಹೋತ್ರಾ ಬಾಲಿವುಡ್‌ನ ಅತ್ಯಂತ ಬೇಡಿಕೆಯ ವಸ್ತ್ರ ವಿನ್ಯಾಸಕರಲ್ಲೊಬ್ಬರು. ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ಹಾಗೂ ತಾಯಿ ಶ್ರೀದೇವಿ ಅವರ ಕಾಲದಿಂದಲೂ ಮನೀಶ್ ಅವರು ಕಪೂರ್ ಕುಟುಂಬದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.
![This person is Janhvi Kapoor's 'favourite for life'. See his picture inside](https://etvbharatimages.akamaized.net/etvbharat/prod-images/252188004_631811044538462_7939992453247697791_n_0911newsroom_1636450897_437.jpg)