ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಕಳೆದೆರಡು ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಪತಿ ಆನಂದ್ ಅಹುಜಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಗರದಲ್ಲಿರುವ ಅಂಗಡಿಯೊಂದಕ್ಕೆ ಸೋನಂ, ಪತಿಯೊಂದಿಗೆ ಆಮಿಸಿದ್ದರು. ಈ ವೇಳೆ ಬಿಳಿ ಬಣ್ಣದ ಟೀ ಶರ್ಟ್ ಜೊತೆ ನೀಲಿ ಬಣ್ಣd ಸೂಟ್ ತೊಟ್ಟು ಎಲ್ಲರ ಗಮನ ಸೆಳೆದರು. ಸೋನಂ ಕಪೂರ್ ಅವರ ಮುಖದಲ್ಲಿ ತಾಯ್ತನದ ಹೊಳಪು ಕಾಣಿಸುತ್ತಿತ್ತು. ಇತ್ತ ಸೋನಂ ಸಹೋದರಿ ರಿಯಾ ಕಪೂರ್, ನಟಿಯ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದಕ್ಕೂ ಮೊದಲು ನಟಿ ಸೋನಂ, ತಮ್ಮ ಪತಿ ಉದ್ಯಮಿಯಾದ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 'ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ. ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ. ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದರು.
ಸೋನಂ ಕಪೂರ್ ಅವರು ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018ರಂದು ಮುಂಬೈನಲ್ಲಿ ವಿವಾಹವಾಗಿದ್ದರು.
ಇದನ್ನೂ ಓದಿ: ಬಾಲಿವುಡ್ಗೆ ಪ್ರವೇಶಿಸುವ ಮುನ್ನವೇ 80 ಲಕ್ಷ ರೂ.ನ ಕಾರು ಖರೀದಿಸಿದ ಶನಾಯಾ ಕಪೂರ್