ETV Bharat / sitara

ಆ ಸಮಯದಲ್ಲಿ ನಾನು ಜೀವನದ ಮೌಲ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ...ಶ್ರದ್ಧಾ ಕಪೂರ್​

2010 ರಲ್ಲಿ ತೀನ್ ಪತ್ತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶ್ರದ್ಧಾ, ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬಾರಿ ಸೋಲು-ಗೆಲುವುಗಳನ್ನು ಕಂಡಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ನಾನು ಜೀವನದ ಮೌಲ್ಯಗಳನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡೆ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.

Shraddha Kapoor
ಶ್ರದ್ಧಾ ಕಪೂರ್​
author img

By

Published : Feb 18, 2021, 2:22 PM IST

ಕಳೆದ ವರ್ಷ ಕೊರೊನಾ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್​ಡೌನ್ ಆಗಿತ್ತು. ಈ ಸಮಯದಲ್ಲಿ ಜನಸಾಮಾನ್ಯರು, ಸೆಲಬ್ರಿಟಿಗಳು ಮನೆಯಲ್ಲೇ ಉಳಿದುಕೊಂಡಿದ್ದರು. ಈ ಸಮಯ ಕೆಲವರಿಗೆ ಶಾಪವಾದರೆ ಮತ್ತೆ ಕೆಲವರಿಗೆ ವರವಾಗಿತ್ತು ಎಂದು ಹೇಳಿದರೂ ತಪ್ಪಾಗಲಾರದು. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡಾ ಲಾಕ್​ಡೌನ್ ಸಮಯ ನನಗೆ ಬಹಳ ಉಪಯೋಗವಾಯ್ತು ಎಂದು ಹೇಳಿಕೊಂಡಿದ್ದಾರೆ.

"ನಾವು ಏನೇ ಹೊಸ ವಿಚಾರವನ್ನು ಆರಂಭಿಸಬೇಕಾದರೂ ಶೂನ್ಯದಿಂದ ಆರಂಭಿಸುತ್ತೇವೆ. ಲಾಕ್ ಡೌನ್ ಸಮಯ ನನಗೆ ಜೀವನದಲ್ಲಿ ಎಷ್ಟೋ ಅಮೂಲ್ಯವಾದ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಯ್ತು. ಸ್ವಯಂಪ್ರೇಮ, ಕುಟುಂಬ ಸದಸ್ಯರ ನಡುವಿನ ಬಾಂಧವ್ಯ, ಆಧ್ಯಾತ್ಮಿಕ ಆರೋಗ್ಯ ಎಲ್ಲವನ್ನೂ ನಾನು ಅನುಭವಿಸಿದೆ. ಅಷ್ಟೇ ಅಲ್ಲ ಈ ಸಮಯ ಮತ್ತಷ್ಟು ಸ್ವತಂತ್ರ್ಯಳನ್ನಾಗಿ ಮಾಡಿತು, ಯೋಗದ ಮಹತ್ವ ಏನು ಎಂಬುದನ್ನು ನಾನು ಈ ಸಮಯದಲ್ಲಿ ಅರ್ಥ ಮಾಡಿಕೊಂಡೆ. ಇದರಿಂದ ನಾನು ಈಗ ಯಾವುದೇ ಪ್ರಾಜೆಕ್ಟ್​​​​ಗಳ ಬಗ್ಗೆ ಸುಲಭವಾಗಿ ಗಮನ ಹರಿಸುವಂತಾಗಿದೆ. ಈ ಲಾಕ್​ಡೌನ್ ಸಮಯದಲ್ಲಿ ನಾನು ಶೂನ್ಯದ ಮಹತ್ವವನ್ನು ಕೂಡಾ ಅರ್ಥ ಮಾಡಿಕೊಂಡಿದ್ದೇನೆ. ನಾನು ಒಂದು ಸಿನಿಮಾ ಒಪ್ಪಿಕೊಂಡರೆ ಮೊದಲು ನಿರ್ಮಾಪಕರ ಶ್ರಮವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ಆ ಚಿತ್ರಕ್ಕಾಗಿ ಎಷ್ಟೆಲ್ಲಾ ಕನಸು ಕಂಡಿರುತ್ತಾರೆ. ಆ ಕನಸಿನಲ್ಲಿ ನನ್ನನ್ನೂ ಭಾಗಿಯಾಗುವಂತೆ ಮಾಡುತ್ತಾರೆ. ಒಬ್ಬ ನಟಿಯಾಗಿ ನಾನು 100 ರಷ್ಟು ಶ್ರಮ ವಹಿಸುತ್ತೇನೆ. ಆದರೆ ಪ್ರತಿಫಲ ನಮ್ಮ ಕೈಯಲ್ಲಿ ಇಲ್ಲ, ಅದು ಪ್ರೇಕ್ಷಕರಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಲಾಕ್​ಡೌನ್ ನಂತರ ನಾನು ಬಹಳ ಬದಲಾಗಿದ್ದೇನೆ" ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ನೃತ್ಯ ಪ್ರಾಕಾರದತ್ತ ಆಕರ್ಷಿತರಾದ ಧಕ್ ಧಕ್ ಹುಡುಗಿ ಮಾಧುರಿ

ಶ್ರದ್ಧಾ ಕಪೂರ್ ಸುಮಾರು ದಶಕಗಳಿಂದ ಚಿತ್ರರಂಗಲ್ಲಿದ್ದಾರೆ. 2010 ರಲ್ಲಿ ತೀನ್ ಪತ್ತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶ್ರದ್ಧಾ, ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಲವ್ ರಾಜನ್ ನಿರ್ದೇಶನದಲ್ಲಿ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಜೊತೆ ರಣಬೀರ್ ಕಪೂರ್​​​​​​​​​​​​​​​​​ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.