ನವದೆಹಲಿ : ಲಾಕ್ ಡೌನ್ನಿಂದಾಗಿ ಮನೆಯಲ್ಲೇ ಉಳಿದಿರುವ ಬಾಲಿವುಡ್ ನಟ-ನಟಿಯರು ದಿನಕ್ಕೊಂದು ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟಿ ಸಾರಾ ಅಲೀ ಖಾನ್ ಕೂಡ ಹಳೆಯ ಫೋಟೋವನ್ನು ತನ್ನ ಇನ್ಸ್ಸ್ಟಾಗ್ರಾಂ ಪೇಜ್ಲ್ಲಿ ಹಂಚಿಕೊಂಡಿದ್ದಾರೆ.
24 ವರ್ಷದ ಸಾರಾ ಹುಲಾ-ಹೂಪ್ ವ್ಯಾಯಾಮದಲ್ಲಿ ತೊಡಗಿರುವ ಹಳೆಯ ಫೋಟೋ ಒಂದನ್ನು ಹಂಚಿಕೊಂಡಿದ್ದು, " ಯಾಕೆ ಅಂತ ನನಗೆ ಗೊತ್ತಿಲ್ಲ, ಸೂರ್ಯನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಮಸ್ಟ್ ಟ್ರೈ ಹುಲಾ-ಹೋಪ್ " ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸದ್ಯ ಪೋಸ್ಟ್ ಮಾಡಿರುವ ಪೋಟೊದೊಂದಿಗೆ ಸಾರಾ ಕವನ ಒಂದನ್ನು ಬರೆದು ಹಾಕಿದ್ದು,ಡೋಂಟ್ ನೋ ಮಿಸ್ಸಿಂಗ್ ದ ಸನ್ ಮಿಸ್ಸಿಂಗ್ ಸ್ಕೈ. ಹೂಲ-ಹೋಪ್ ಇಸ್ ಮಸ್ಟ್ ಟ್ರೈ. ಜಸ್ಟ್ ಆಸ್ ಮಚ್ ಆಸ್ ಅಂಡಾ ಫ್ರೈ. ಬಟ್ ಫೋರ್ ನೌ ಸ್ಟೇ ಹೋಂ- ಇಟ್ಸ್ ಎವರಿ ಒನ್ಸ್ ರೈ ಎಂದಿದ್ದಾರೆ.
ಈ ಹಿಂದೆ ಕೊರೊನಾ ವೈರಸ್ ಬಿಕ್ಕಟ್ಟು ಎದುರಿಸಲು ಮಹಾರಾಷ್ಟ್ರದ ಪಿಎಂ-ಕೇರ್ಸ್ ಮತ್ತು ಸಿಎಂ ರಿಲೀಫ್ ಫಂಡ್ಗೆ ದೇಣಿಗೆ ನೀಡುವುದಾಗಿ ಸಾರಾ ಭರವಸೆ ನೀಡಿದ್ದರು. ಇದನ್ನು ಇನ್ಸ್ಸ್ಟಾಗ್ರಾಂ ಪೇಜ್ಲ್ಲಿ ಬರೆದುಕೊಂಡಿದ್ದ ಸಾರಾ, ಇದು ಒಳ್ಳೆಯ ಕಾರ್ಯ ಮಾಡುವ ಸಮಯ. ಅಗತ್ಯವಿರುವವರಿಗೆ ಸಹಾಯ ಮಾಡಿ! ನಿಮ್ಮ ಕೊಡುಗೆಗಳು ಅವರನ್ನು ರಕ್ಷಿಸುತ್ತವೆ ಮತ್ತು ಆಹಾರವನ್ನು ಒದಗಿಸುತ್ತವೆ.. ನಾನು ನಿಮ್ಮನ್ನು ಬೆಂಬಲಿಸುವಂತೆ ಒತ್ತಾಯಿಸುತ್ತೇನೆ, ವಿನಂತಿಸುತ್ತೇನೆ, ಮನವಿ ಮಾಡುತ್ತೇನೆ" ಎಂದಿದ್ದರು.