ETV Bharat / sitara

ವಿವಾದದಲ್ಲಿ ಸಾಹೋ... ಪ್ರಭಾಸ್​ ಚಿತ್ರದ ಮೇಲೆ ಕೃತಿಚೌರ್ಯ ಆರೋಪ!

ಬಹು ನಿರೀಕ್ಷಿತ ಸಾಹೋ ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ತಂಡದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ.

ವಿವಾದದಲ್ಲಿ ಸಾಹೋ
author img

By

Published : Aug 31, 2019, 12:04 PM IST

ಮುಂಬೈ: ನಿನ್ನೆಯಷ್ಟೆ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪ್ರಭಾಸ್​ ಅಭಿನಯದ ಸಾಹೋ ಚಿತ್ರದ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ.

ನಟಿ ಮತ್ತು ಕಲಾವಿದೆಯಾಗಿರುವ ಲೀಸಾ ರೈ ನಾನು ರಚಿಸಿದ ಚಿತ್ರವೊಂದನ್ನ ಸಾಹೋ ಚಿತ್ರತಂಡ ನ್ನನ ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ಸಾಹೋ ಚಿತ್ರದಲ್ಲಿ ಕಲಾವಿದೆ ಶಿಲೊ ಶಿವ್ ಸುಲೆಮನ್ ವಿರುದ್ಧ ಆರೋಪಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ತಾನು ಚಿತ್ರಿಸಿದ ಫೋಟೊ ಮತ್ತು ಸಾಹೋ ಚಿತ್ರದ ಪೋಸ್ಟರ್​ ಅನ್ನ ಹಂಚಿಕೊಂಡಿರುವ ಲೀಸಾ ರೈ, ಸಾಹೋ ಚಿತ್ರತಂಡ ನನ್ನ ಅನುಮತಿ ಇಲ್ಲದೆ ಇದನ್ನ ಬಳಸಿಕೊಂಡಿದೆ. ಕನಿಷ್ಠ ಅದಕ್ಕೆ ಕ್ರೆಡಿಟ್​ ಕೂಡ ಕೊಟ್ಟಿಲ್ಲ ಸ್ಪೂರ್ತಿಯ ನೆಪದಲ್ಲಿ ಇಂತಾ ಕೃತಿಚೌರ್ಯಗಳು ನಡೆಯುತ್ತಿರುತ್ತವೆ. ನನ್ನ ಅನುಮತಿ ಪಡೆಯದ ಚಿತ್ರ ನಿರ್ಮಾಪಕರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸತತ ಎರಡು ವರ್ಷಗಳ ಕಾಲ ₹350 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಸಾಹೋ ಮೊದಲ ದಿನ ಬರೋಬ್ಬರಿ ₹24 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.