ETV Bharat / sitara

ನನ್ನನ್ನು ತುಳಿದಷ್ಟು ನಾನು ಮತ್ತಷ್ಟು ಬಲಗೊಳ್ಳುತ್ತೇನೆ...ಕಂಗನಾ ಹೀಗೆ ಹೇಳಿದ್ದೇಕೆ...? - ಮುಂಬೈ ಮುನ್ಸಿಪಲ್ ಕಾರ್ಪೊರೇಷನ್

ಮುಂಬೈ ಪಾಲಿಹಿಲ್ಸ್ ಪ್ರದೇಶದಲ್ಲಿರುವ ನನ್ನ ಕಚೇರಿಯನ್ನು ಅನಧಿಕೃತ ನಿರ್ಮಾಣ ಎಂದು ಆರೋಪಿಸಿ ಬಿಎಂಸಿ ಕಚೇರಿಯನ್ನು ಸೀಲ್ ಮಾಡಿದೆ. ಈಗ ಬಿಎಂಸಿ ನನ್ನ ವಿರುದ್ಧ ಕೇವಿಯಟ್ ಸಲ್ಲಿಸಿದ್ದು ಕಚೇರಿಯನ್ನು ನಾಶ ಮಾಡಿದರೂ ನಾನು ಮತ್ತಷ್ಟು ಬಲಗೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Kangana office in Mumbai
ಮುಂಬೈ ಕಂಗನಾ ಕಚೇರಿ
author img

By

Published : Sep 9, 2020, 8:47 AM IST

ಮುಂಬೈ: ಒಂದೆಡೆ ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್ ಪ್ರಕರಣದ ಚರ್ಚೆ ನಡೆಯುತ್ತಿದ್ದರೆ ಬಾಲಿವುಡ್​​​ನಲ್ಲಿ ಕೂಡಾ ನಟಿ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಆರೋಪ ಕೇಳಿ ಬಂದಿದೆ. ಇಷ್ಟು ದಿನ ನೆಪೋಟಿಸಂ, ಮೂವಿ ಮಾಫಿಯಾ ವಿರುದ್ಧ ತಿರುಗಿಬಿದ್ದಿದ್ದ ಕಂಗನಾ ವಿರುದ್ಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​​​​​ಮುಖ್​​​​​ ಡ್ರಗ್ಸ್ ಸೇವನೆ ಆರೋಪ ಮಾಡಿದ್ದಾರೆ.

  • Now @mybmc has filed a caveat against me, really desperate to break my house, I deeply love what I built with so much passion over so many years but know that even if you break it my spirit will only get stronger .... GO ON ... pic.twitter.com/7MQRQ5h0qO

    — Kangana Ranaut (@KanganaTeam) September 8, 2020 " class="align-text-top noRightClick twitterSection" data=" ">

ಈ ನಡುವೆ ಮುಂಬೈ ಉಪನಗರದ ಬಾಂದ್ರಾ ಪಾಲಿಹಿಲ್ ಪ್ರದೇಶದಲ್ಲಿರುವ ಕಂಗನಾ ಅವರ ಕಚೇರಿಯನ್ನು ಅನಧಿಕೃತ ನಿರ್ಮಾಣ ಎಂದು ಆರೋಪಿಸಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸೀಲ್ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂಗನಾ ರಣಾವತ್​, ನನ್ನ ವಿರುದ್ಧ ಬಿಎಂಸಿ ಕೇವಿಯಟ್ ಸಲ್ಲಿಸಿದೆ. ಒಂದು ವೇಳೆ ಕಚೇರಿಯನ್ನು ಅವರು ನಾಶ ಮಾಡಿದರೂ ಅದೇ ನನಗೆ ಸ್ಟ್ರೆಂತ್ ಆಗುತ್ತದೆ ಹೊರತು ಇದರಿಂದ ನಾನು ಎಂದಿಗೂ ಬಲಹೀನಳಾಗುವುದಿಲ್ಲ ಎಂದು ಹೇಳಿದ್ದಾರೆ.

ಟ್ವಿಟ್ಟರ್​​​ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಕಂಗನಾ 'ಕೇವಿಯಟ್​ ಪ್ರತಿಗಳ ಫೋಟೋವನ್ನು ಷೇರ್ ಮಾಡಿದ್ದಾರೆ. ಅಲ್ಲದೆ ನನ್ನ ಕಚೇರಿ ಕೂಡಾ ನನಗೆ ಮನೆ ಇದ್ದಂತೆ ಎಂದು ಹೇಳಿದ್ದಾರೆ. ಬಿಎಂಸಿ ನನ್ನ ವಿರುದ್ಧ ಕೇವಿಯಟ್ ಸಲ್ಲಿಸಿದೆ. ನನ್ನ ಮನೆಯನ್ನು (ಕಚೇರಿ) ನಾಶ ಮಾಡುವುದು ನಿಜಕ್ಕೂ ನನಗೆ ಹತಾಶೆಯಾಗಿದೆ. ಅದನ್ನು ನಾನು ಬಹಳ ಆಸೆಯಿಂದ ಹಾಗೂ ಕಷ್ಟಪಟ್ಟು ನಿರ್ಮಿಸಿದ್ದೇನೆ. ಒಂದು ವೇಳೆ ಅದನ್ನು ನಾಶ ಮಾಡಿದರೂ ನಾನು ಮತ್ತಷ್ಟು ಬಲಗೊಳ್ಳುತ್ತೇನೆ' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಕಂಗನಾ ಸ್ವಜನಪಕ್ಷಪಾತದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಇತ್ತೀಚೆಗೆ ಅವರ ಮೇಲೆ ಡ್ರಗ್ಸ್ ಆರೋಪ ಮಾಡಿದಾಗಿನಿಂದ ನಾನು ಡ್ರಗ್ಸ್​ ಸೇವಿಸಿದ್ದೇನೆ ಎಂದು ಸಾಬೀತಾದರೆ ನಾನು ಮುಂಬೈಯನ್ನು ಶಾಶ್ವತವಾಗಿ ಬಿಟ್ಟು ಹೋಗುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.