ETV Bharat / sitara

ಸ್ವದೇಶಿ ನಿರ್ಮಿತ FAU-G ಗೇಮ್​ ಆ್ಯಪ್ ಬಿಡುಗಡೆ ಮಾಡಿದ ಅಕ್ಷಯ್ ಕುಮಾರ್

ಭಾರತದಲ್ಲಿ ಪಬ್​​ ಜಿ ಗೇಮ್ ಬ್ಯಾನ್ ಮಾಡಿದ ನಂತರ ಸ್ವದೇಶಿ ನಿರ್ಮಿತ ಆ್ಯಪ್​​ ಒಂದನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಅದರಂತೆ 26 ಜನವರಿ 2021 ರಂದು ಬಹುನಿರೀಕ್ಷಿತ FAU-G ಗೇಮ್​ ಆ್ಯಪನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ.

FAU-G Game app
FAU-G ಗೇಮ್​ ಆ್ಯಪ್
author img

By

Published : Jan 27, 2021, 12:25 PM IST

ಕಳೆದ ವರ್ಷ ಭಾರತದಲ್ಲಿ ಟಿಕ್​​​ಟಾಕ್, ಷೇರ್ ಇಟ್​​​​​​​, ಪಬ್​ ಜಿ ಸೇರಿ ಅನೇಕ ಆ್ಯಪ್​​​​​ಗಳನ್ನು ನಿಷೇಧಿಸಲಾಯ್ತು. ಪಬ್​ಜಿ ಗೇಮ್​ ಬ್ಯಾನ್ ಮಾಡಿದ ನಂತರ ಈ ಗೇಮ್​​ಗೆ ಪರ್ಯಾಯವಾಗಿ FAU-G ಯನ್ನು ಘೋಷಿಸಲಾಗಿತ್ತು. 26 ಜನವರಿ 2021 ರಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ FAU-G ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಗಣರಾಜ್ಯೋತ್ಸವದಂದು FAU-G ಆ್ಯಪ್ ಬಿಡುಗಡೆ ಮಾಡಲಾಗುವುದು ಎಂದು ಕೆಲವು ದಿನಗಳ ಹಿಂದೆಯೇ ಅಕ್ಷಯ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಗೂಗಲ್ ಪ್ಲೇನಲ್ಲಿ ಈ ಆಟವನ್ನು ಡೌನ್​​​​​ಲೋಡ್ ಮಾಡಿಕೊಳ್ಳಬಹುದು ಎಂದು ಮೊಬೈಲ್ ಆ್ಯಪ್ ಸಿದ್ಧಪಡಿಸಿದ ಕಂಪನಿ ಮಾಹಿತಿ ನೀಡಿದೆ. ಅಕ್ಷಯ್ ಕುಮಾರ್ ಈ ಗೇಮ್​​​​ಗೆ ಸಂಬಂಧಿಸಿದ ಅನಿಮೇಟೆಡ್ ವಿಡಿಯೋ ಕ್ಲಿಪ್ಪಿಂಗ್ ಒಂದನ್ನು ಹಂಚಿಕೊಂಡಿದ್ದಾರೆ. ಭಾರತದ ಗಡಿಯಲ್ಲಿ ಸೈನಿಕರು ಶತ್ರುಗಳನ್ನು ಹೇಗೆ ಸಂಭಾಳಿಸುತ್ತಾರೆ ಎಂಬುದನ್ನು ಈ ವಿಡಿಯೋ ಕ್ಲಿಪ್ಪಿಂಗ್​​​​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: 'ಬ್ಯಾಂಗ್'ನಲ್ಲಿ ಶಾನ್ವಿ ಶ್ರೀವಾಸ್ತವ್ 'ಗ್ಯಾಂಗ್ ಸ್ಟಾರ್'..!

"ನಿಮ್ಮ ದೇಶಕ್ಕಾಗಿ ಶತ್ರುವನ್ನು ಎದುರಿಸಲು ಸಿದ್ಧರಾಗಿ, ನಮ್ಮ ಧ್ವಜವನ್ನು ರಕ್ಷಿಸಿ. ಇದು ಭಾರತದ ಬಹುನಿರೀಕ್ಷಿತ ಗೇಮ್ ಆಗಿದೆ. ನಿಮ್ಮ ಯುದ್ಧವನ್ನು ಆರಂಭಿಸಿ" ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಗೇಮ್ ಡೌನ್​​ಲೋಡ್ ಮಾಡಿಕೊಳ್ಳಲು ಲಿಂಕ್ ಕೂಡಾ ನೀಡಿದ್ದಾರೆ. ವಿಶೇಷ ಎಂದರೆ ಈ FAU-G (ಫೌಜಿ) ಆ್ಯಪ್ ಸ್ವದೇಶಿ ಆಗಿದ್ದು ಗೇಮ್​​​​ ಪ್ರಿಯರು ಈ ಆ್ಯಪ್ ಡೌನ್​​​ಲೋಡ್ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.