ಹೈದರಾಬಾದ್ (ತೆಲಂಗಾಣ): ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಗೆಳತಿ ಶಿವಾನಿ ದಾಂಡೇಕರ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. 4 ವರ್ಷಗಳ ಕಾಲ ಜೊತೆಯಾಗಿ ಸುತ್ತಾಡಿದ್ದ ಈ ಜೋಡಿ ಇದೀಗ ವಿವಾಹವಾಗಲು ನಿರ್ಧರಿಸಿದ್ದು, ಈ ಕುರಿತು ಫರ್ಹಾನ್ ತಂದೆ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ.
ಫರ್ಹಾನ್ ಹಾಗೂ ಶಿವಾನಿ ಫೆಬ್ರುವರಿ 21ರಂದು ವಿವಾಹವಾಗಲಿದ್ದಾರೆ. ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ನಾವು ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸುತ್ತಿಲ್ಲ. ಕುಟುಂಬಸ್ಥರು ಸೇರಿದಂತೆ ಕೆಲವೇ ಜನರನ್ನು ಮಾತ್ರ ಕರೆಯುತ್ತಿದ್ದೇವೆ. ತುಂಬಾ ಸರಳವಾಗಿ ವಿವಾಹ ಕಾರ್ಯ ನೆರವೇರಲಿದೆ ಎಂದು ಜಾವೇದ್ ಹೇಳಿದ್ದಾರೆ.
- " class="align-text-top noRightClick twitterSection" data="
">
ಸೊಸೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಜಾವೇದ್, ಶಿವಾನಿ ಬಹಳ ಒಳ್ಳೆಯ ಹುಡುಗಿ. ಕುಟುಂಬದವರೆಲ್ಲರಿಗೂ ಅವಳು ಅಂದ್ರೆ ತುಂಬಾ ಇಷ್ಟ. ಫರ್ಹಾನ್ ಮತ್ತು ಶಿವಾನಿ ಮುಂದಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಇರುತ್ತಾರೆ ಎಂದರು.
- " class="align-text-top noRightClick twitterSection" data="
">
ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ವಿವಾಹ. ಈ ಮುನ್ನ ಅವರು ಕೇಶ ವಿನ್ಯಾಸಕಿ ಅದ್ಬುನ ಭಬಾನಿ ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಈರ್ವರೂ ಬೇರ್ಪಟ್ಟಿದ್ದರು. ಈ ದಂಪತಿಗೆ ಶಕ್ಯ ಹಾಗೂ ಅಕಿರಾ ಎಂಬ ಮಕ್ಕಳಿದ್ದಾರೆ. ಪ್ರಸ್ತುತ ಫರ್ಹಾನ್ ವಿವಾಹವಾಗುತ್ತಿರುವ ಶಿವಾನಿ ನಿರೂಪಕಿ, ಹಾಡುಗಾರ್ತಿ ಹಾಗೂ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಓದಿ:VIDEO: ಶಮಿತಾ ಶೆಟ್ಟಿ, ನಿಶಾಂತ್ ಭಟ್ ಸ್ನೇಹದ ಕುರಿತು ಪ್ರತೀಕ್ ಹೇಳಿದ್ದೇನು?