ETV Bharat / sitara

ರಾಜ್​​​ಕುಮಾರ್ ಹಿರಾನಿಗೆ ಹುಟ್ಟುಹಬ್ಬದ ಸಂಭ್ರಮ: ಹಾಸ್ಯದಲ್ಲೇ ಸಂದೇಶ ನೀಡೋ ವಿಭಿನ್ನ ನಿರ್ದೇಶಕ - ಹಿರಾನಿ ನಿರ್ದೇಶನದ 3 ಈಡಿಯಟ್ಸ್ ಚಿತ್ರ

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹಿರಾನಿ ಅವರನ್ನು ಕುಟುಂಬಸ್ಥರು ಚಾರ್ಟೆಡ್ ಅಕೌಂಟೆಂಟ್ ಮಾಡಲು ಆಲೋಚಿಸಿದ್ದರು. ಆದರೆ, ರಾಜ್​​​ಕುಮಾರ್​​ಗೆ ಮೊದಲಿನಿಂದಲೂ ನಾಟಕ ಹಾಗೂ ಕಲೆಯ ಬಗ್ಗೆಯೇ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಪುಣೆಯಲ್ಲಿ ನಟನೆ ಹಾಗೂ ನಿದೇರ್ಶನ ಸಂಬಂಧ ಕೋರ್ಸ್​ಗೆ ಸೇರಿದ್ದರು.

Birthday celebration for Raj Kumar Hirani
ರಾಜ್​​​ಕುಮಾರ್ ಹಿರಾನಿಗೆ ಹುಟ್ಟುಹಬ್ಬದ ಸಂಭ್ರಮ
author img

By

Published : Nov 20, 2020, 12:59 PM IST

ಮುಂಬೈ: 1962 ರ ನವೆಂಬರ್ 20 ರಂದು ನಾಗ್ಪುರದಲ್ಲಿ ಜನಿಸಿದ ರಾಜ್‌ಕುಮಾರ್ ಹಿರಾನಿ ಅವರಿಗೆ ಇಂದು 58 ವರ್ಷ ತುಂಬಿದೆ. ಚಲನಚಿತ್ರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ವಿಭಿನ್ನ ಚಿತ್ರಗಳ ನಿರ್ಮಾಣದಿಂದ ಆರಂಭದಲ್ಲಿ ಯಶಸ್ವಿ ನಿರ್ದೇಶಕರ ಸಾಲಿನಲ್ಲಿ ಜಾಗ ಪಡೆದಿದ್ದರು. 2003ರ ಮುನ್ನಾ ಭಾಯ್ ಎಂಬಿಬಿಎಸ್​ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದ ರಾಜ್ ಮತ್ತೆಂದೂ ಹಿಂದಿರುಗಿ ನೋಡಿಯೇ ಇಲ್ಲ.

ಸಂಜಯ್ ದತ್ ನಾಯಕನಾಗಿ ನಟಿಸಿದ್ದ ಮುನ್ನಾ ಭಾಯ್ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಚರಿತ್ರೆ ಬರೆದಿತ್ತು. ಭಾರತದ ಬಹುತೇಕ ಭಾಷೆಗಳಿಗೆ ರಿಮೇಕ್ ಆದ ಚಿತ್ರ ಕೋಟಿ ಕೋಟಿ ಗಳಿಕೆ ಮಾಡಿತ್ತು. ಆಗಲೇ ಬಾಲಿವುಡ್​ನ ಕಿಕ್ಕಿರಿದ ಚಿತ್ರೋದ್ಯಮದಲ್ಲಿ ರಾಜ್​​ಕುಮಾರ್ ಹಿರಾನಿ ಯಶಸ್ಸಿನ ಪುಟ ತೆರೆದಿದ್ದರು.

ಮೊದಲ ಚಿತ್ರವೇ ವಿದೇಶಲ್ಲೂ ಉತಮ್ಮ ಪ್ರತಿಕ್ರಿಯೆ ಪಡೆದಿದಲ್ಲದೇ, ಈ ಚಿತ್ರಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದರು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹಿರಾನಿಯನ್ನು ಕುಟುಂಬಸ್ಥರು ಚಾರ್ಟೆಡ್ ಅಕೌಂಟೆಂಟ್ ಮಾಡಲು ಆಲೋಚಿಸಿದ್ದರು. ಆದರೆ ರಾಜ್​​​ಕುಮಾರ್​​ಗೆ ಮೊದಲಿನಿಂದಲೂ ನಾಟಕ ಹಾಗೂ ಕಲೆಯ ಬಗ್ಗೆಯೇ ಹೆಚ್ಚಿನ ಆಸಕ್ತಿ ಇತ್ತು.

ರಾಜ್​ಕುಮಾರ್ ಪುಣೆಯ ಫಿಲ್ಮ್​​ ಅಂಡ್ ಟೆಲಿವಿಷನ್ ಇನ್ಸ್​​ಸ್ಟಿಟ್ಯೂಷನ್​​ ಸೇರಿ ನಟನೆ ಹಾಗೂ ನಿದೇರ್ಶನ ಕುರಿತು ಅಧ್ಯಯನ ಮಾಡಿದ್ದರು. ಆದರೆ, ಅವರಿಗೆ ನಟನೆ ಮತ್ತು ನಿರ್ದೇಶನ ಕೈಹಿಡಿಯುವುದು ಅನುಮಾನ ಎಂದೆನಿಸಿದ್ದಾಗ ಎಡಿಟಿಂಗ್ ಕೋರ್ಸ್ ಸಹ ಮಾಡಿದ್ದರು.

Munnabai mbbs
ಮುನ್ನಾಭಾಯ್ ಎಂಬಿಬಿಎಸ್​​​

ಈ ಕೋರ್ಸ್​ಗಳನ್ನ ಮುಗಿಸಿ ಮುಂಬೈ ಮಹಾನಗರಿಗೆ ಬಂದಿಳಿದಿದ್ದ ಹಿರಾನಿ ಎಲ್ಲಿಯೂ ಕೆಲಸವಿಲ್ಲದೇ ಕಷ್ಟದ ದಿನ ಕಳೆದಿದ್ದರು.

ಸ್ಪಲ್ಪ ಸಮಯದ ಬಳಿಕ ವಿಧು ವಿನೋದ್ ಚೋಪ್ರಾ ಅವರ 'ಎ ಲವ್ ಸ್ಟೋರಿ' ಚಿತ್ರದ ಪ್ರೋಮೋಗಳಿಗಾಗಿ ಮತ್ತು 1998ರಲ್ಲಿ 'ನಿಯರ್', ನಂತರ 2000ದಲ್ಲಿ 'ಮಿಷನ್ ಕಾಶ್ಮೀರ' ಮತ್ತು 2001ರಲ್ಲಿ 'ತೇರೆ ಲಿಯೆ' ಚಿತ್ರಗಳಲ್ಲಿ ಕೆಲಸ ಮಾಡಿದರು.

PK movie directed by Hirani
ಹಿರಾನಿ ನಿರ್ದೇಶನದ ಪಿಕೆ ಚಿತ್ರ

ನಂತರ 2009 ರಲ್ಲಿ, ಚೇತನ್ ಭಗತ್ ಪುಸ್ತಕ ಆಧರಿತ ’’3 ಈಡಿಯಟ್ಸ್ ’’ ಚಿತ್ರ ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿಯಿತು. ಈ ಚಿತ್ರವು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ತನ್ನ ದಾಖಲೆ ಬರೆಯಿತು. ಈ ಚಿತ್ರದಿಂದ ರಾಜ್​​ಕುಮಾರ್ ಹಿರಾನಿ ಬೇರೆಲ್ಲ ನಿರ್ದೇಶಕರಿಗಿಂತಲೂ ವಿಭಿನ್ನ ಎನಿಸಿಕೊಂಡರು.

ಈ ಚಿತ್ರದ ನಂತರ, ಅಮೀರ್ ಖಾನ್ ಅವರ ಎರಡನೇ ಚಿತ್ರ 'ಪಿಕೆ' ಕೂಡ ದೊಡ್ಡ ಯಶಸ್ಸು ಗಳಿಸಿತು. ಈ ಚಿತ್ರದ ಯಶಸ್ಸು ರಾಜ್‌ಕುಮಾರ್ ಹಿರಾನಿಗೆ ಬಾಲಿವುಡ್‌ನಲ್ಲಿ ದೊಡ್ಡ ನಿರ್ದೇಶಕರ ಸ್ಥಾನಮಾನವನ್ನು ನೀಡಿತು. ಇನ್ನು ಸಂಜಯ್ ದತ್ ಜೀವಾನಾಧಾರಿತ ಚಿತ್ರ ‘ಸಂಜು’ ಸಹ ಬಾಕ್ಸ್ ಆಫೀಸ್​​​ನಲ್ಲಿ ದಾಖಲೆ ಬರೆದಿತ್ತು.

3 Idiots movie directed by Hirani
ಹಿರಾನಿ ನಿರ್ದೇಶನದ 3 ಈಡಿಯಟ್ಸ್ ಚಿತ್ರ

ಸಮಾಜಕ್ಕೆ ಉತ್ತಮ ಸಂದೇಶಗಳ ನೀಡುವ ಕುರಿತು ಇರುವ ಕಥೆಗಳ ಸುತ್ತ ಇವರ ಬಹುಪಾಲು ಸಿನಿಮಾಗಳು ತೆರೆ ಕಂಡವು. ಇದರಲ್ಲಿ ಕೆಲವು ವಿವಾದಗಳಿಗೆ ದಾರಿ ಮಾಡಿಕೊಟ್ಟವು. ಅಲ್ಲದೇ ಹಾಸ್ಯದ ಮೂಲಕವು ವಿಭಿನ್ನ ರೀತಿಯ ಗಟ್ಟಿ ಸಂದೇಶ ಸಮಾಜಕ್ಕೆ ತಲುಪಿಸಬಹುದು ಎಂದು ಹಿರಾನಿ ದೃಢಪಡಿಸುವಲ್ಲಿ ಯಶಸ್ಸು ಸಾಧಿಸಿದ್ದಂತೂ ಸುಳ್ಳಲ್ಲ.

2018ರಲ್ಲಿ ನಡೆದ ಸಿನೆಸ್ಟಾನ್ ಸ್ಕ್ರಿಪ್ಟ್ ಸ್ಪರ್ಧೆಯ ಎರಡನೇ ಆವೃತ್ತಿಯಲ್ಲಿ ಮಾತನಾಡಿದ ಹಿರಾನಿ, ಸಣ್ಣ ನಗರಗಳು ಕಥೆಗಳ ದೊಡ್ಡ ಬ್ಯಾಂಕ್ ಎಂದು ನಂಬಿದ್ದೇನೆ. ಏಕೆಂದರೆ ಜನರು ಅಲ್ಲಿ ವಾಸಿಸಲು ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ದೊಡ್ಡ ನಗರಗಳು ಸಾಮಾಜಿಕ ಸಂವಹನದ ಕೊರತೆಯು ಸೀಮಿತ ಜೀವನ ಅನುಭವಗಳಿಗೆ ಕಾರಣವಾಗುತ್ತದೆ ಎಂದಿದ್ದರು.

Hiranyi in the movie Sanju
ಸಂಜು ಚಿತ್ರದ ವೇಳೆ ಹಿರಾನಿ

ಚಿತ್ರದ ಯಾವುದೇ ದೃಶ್ಯವು ನಗು, ಕಣ್ಣೀರು ಮತ್ತು ನಟನೆ ಎಂಬ ಮೂರು ಅಂಶಗಳಲ್ಲಿ ಬೇರೂರಿದೆ. ಇದೆಲ್ಲವೂ ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾದರೆ ಚಿತ್ರ ಯಶಸ್ಸು ಗಳಿಸಲಿದೆ ಎಂಬುದನ್ನ ಹಿರಾನಿ ಕಂಡುಕೊಂಡಿದ್ದರು.

ರಾಜ್‌ಕುಮಾರ್ ಹಿರಾನಿ ಅವರ ಅತ್ಯುತ್ತಮ ಚಿತ್ರಗಳಿಗಾಗಿ ಇದುವರೆಗೆ 11 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಹಿರಾನಿ ಮೂರು ಸಿನಿಮಾಗಳ ಪ್ರೋಜೆಕ್ಟ್​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಒಂದು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಶತಕ ಬಾರಿಸಿದ್ದ ಬ್ಯಾಟ್ಸ್‌ಮನ್ ಲಾಲಾ ಅಮರನಾಥ್ ಅವರ ಜೀವನ ಚರಿತ್ರೆ, ಇನ್ನೊಂದು ಕಾಮಿಡಿ ಸಿನಿಮಾ ಮತ್ತು ಮೂರನೆಯದು ಕ್ರಿಕೆಟ್ ಆಧಾರಿತ ಕಾಲ್ಪನಿಕ ಕಥೆಯನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.