ETV Bharat / sitara

ಅಭಿಮಾನಿಗಳಿಗೆ ಹೃದಯಸ್ಪರ್ಶಿ ಬರಹ ಬರೆದು ವಿದಾಯ ಹೇಳಿದ ನಟಿ ದಿವ್ಯಾ ಚೌಕ್ಸೆ

author img

By

Published : Jul 13, 2020, 11:06 AM IST

ಕ್ಯಾನ್ಸರ್​ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದ್ದ ರೂಪದರ್ಶಿ ಮತ್ತು ನಟಿ ದಿವ್ಯಾ ಚೌಕ್ಸೆ ಭಾನುವಾರ ನಿಧನರಾಗಿದ್ದಾರೆ. ಸಾವಿಗಿಂತ ಕೆಲ ಗಂಟೆಗಳ ಮುಂಚೆ ದಿವ್ಯಾ ತನ್ನ ಅಭಿಮಾನಿಗಳಿಗಾಗಿ ಹೃದಯಸ್ಪರ್ಶಿ ಬರಹವೊಂದನ್ನು ಬರೆದು ಪೋಸ್ಟ್​ ಮಾಡಿದ್ದರು.

divvya chouksey death
ವಿದಾಯ ಹೇಳಿದ ನಟಿ ದಿವ್ಯಾ ಚೌಕ್ಸೆ

ಮುಂಬೈ : ಹೈ ಅಪ್ನಾ ದಿಲ್ ತೋಹ್ ಚಿತ್ರದಲ್ಲಿ ಕೆಲಸ ಮಾಡಿದ್ದ ರೂಪದರ್ಶಿ ಮತ್ತು ನಟಿ ದಿವ್ಯಾ ಚೌಕ್ಸೆ ಭಾನುವಾರ ನಿಧನರಾಗಿದ್ದಾರೆ. ನಟ ಸಾಹಿಲ್ ಆನಂದ್ ದಿವ್ಯಾ ಸಾವಿನ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ದೃಢಪಡಿಸಿದ್ದಾರೆ.

"ದಿವ್ಯಾ ಚೌಕ್ಸೆ , ನೀವು ನಿಮ್ಮ ಸಹೋದರನನ್ನು ತುಂಬಾ ಮಿಸ್​ ಮಾಡ್ಕೊಳ್ತಿದ್ದೀರಿ. ನಿಮ್ಮ ಉತ್ಸಾಹ, ಕನಸು, ಉದ್ಯಮದ ಬಗೆಗಿನ ಸಕಾರಾತ್ಮಕ ಭಾವನೆಗೆ ಯಾವುದೂ ಸರಿಸಾಟಿಯಿಲ್ಲ. ದೇವರು ನಿಮಗೆ ಬೇರೆ ಕೆಲ ಪ್ಲಾನ್​ಗಳನ್ನು ನಿಶ್ಚಯಿಸಿರಬಹುದು. ನೀವು ಉತ್ತಮವಾಗಿ ಮತ್ತು ಶಾಂತಿಯಿಂದ ಇದ್ದೀರಿ ಎಂಬ ಖಾತರಿ ನನಗಿದೆ. ನಿಮ್ಮ ಭಯ್ಯಾ ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ಯಾವಾಗಲೂ ಪ್ರೀತಿಸುತ್ತಲೇ ಇರುತ್ತಾನೆ. ನೀವು ಯಾವಾಗಲೂ ನನ್ನ ನೆನಪುಗಳಲ್ಲಿ ಮತ್ತು ಹೃದಯದಲ್ಲಿ ಜೀವಂತವಾಗಿರುತ್ತೀರಿ" ಎಂದು ಸಾಹಿಲ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸಾಹಿಲ್ ಪೋಸ್ಟ್​ಗೆ ನಟ- ಗಾಯಕ ಸುಯಾಶ್ ರೈ ರಿಪ್ ಎಂದು ಪ್ರತಿಕ್ರಿಯಿಸಿದ್ದಾರೆ

ಮೂಲಕಗಳ ಪ್ರಕಾರ ನಟಿ ದಿವ್ಯಾ ಚೌಕ್ಸೆ ಕ್ಯಾನ್ಸರ್​ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಸಾವಿಗಿಂತ ಕೆಲ ಗಂಟೆಗಳ ಮುಂಚೆ ದಿವ್ಯಾ ತನ್ನ ಅಭಿಮಾನಿಗಳಿಗಾಗಿ ಹೃದಯಸ್ಪರ್ಶಿ ಬರಹವೊಂದನ್ನು ಬರೆದು ಪೋಸ್ಟ್​ ಮಾಡಿದ್ದರು.

ಸಾವಿಗೂ ಮುನ್ನ ದಿವ್ಯಾ ಮಾಡಿದ ಟ್ವೀಟ್​​​

"ನಾನು ತಿಳಿಸಲು ಬಯಸಿದ್ದನ್ನು ಬರೆಯಲು ಪದಗಳು ಸಾಕಾಗುವುದಿಲ್ಲ ಅನಿಸುತ್ತದೆ. ಯಾಕೆಂದರೆ ತಿಂಗಳ ಬಳಿಕ ದೊಡ್ಡ ಸಂದೇಶವನ್ನು ತಿಳಿಸಲು ಬಂದಿದ್ದೇನೆ. ಈ ವಿಷಯ ಹೇಳುವ ಸಂದರ್ಭದಲ್ಲಿ ನಾನು ಸಾವಿನ ಹಾಸಿಗೆಯಲ್ಲಿದ್ದೇನೆ. ........ಸಂಭವಿಸುತ್ತದೆ, ನಾನು ದೃಢವಾಗಿದ್ದೇನೆ. ನೋವಿಲ್ಲದ ಇನ್ನೊಂದು ಜೀವನ ಇರಲಿ. ದಯವಿಟ್ಟು ಯಾವುದೇ ಪ್ರಶ್ನೆ ಕೇಳಬೇಡಿ. ನೀವು ನನಗೆ ಎಷ್ಟು ಅರ್ಥವಾಗಿದ್ದೀರಿ ಎಂಬುವುದು ದೇವರಿಗೆ ಮಾತ್ರ ಗೊತ್ತು. ಗುಡ್​ ಬಾಯ್​" ಎಂದು ದಿವ್ಯಾ ಬರೆದು ಕೊಂಡಿದ್ದರು.

ದಿವ್ಯಾ ಅವರ ಸೋದರ ಸಂಬಂಧಿ ಸೌಮ್ಯಾ ಅಮಿಶ್ ವರ್ಮಾ ಸಾವಿನ ಸುದ್ದಿಯನ್ನು ಫೇಸ್‌ಬುಕ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.