ETV Bharat / science-and-technology

ಮಾಸಿಕ 500 ಮಿಲಿಯನ್ ಬಳಕೆದಾರರನ್ನು ದಾಟಿದ ವಾಟ್ಸ್​ಆ್ಯಪ್ ಚಾನೆಲ್ ವೈಶಿಷ್ಟ್ಯ - ವಾಟ್ಸ್​ಆ್ಯಪ್ ಸಮುದಾಯವು ಚಾನೆಲ್​ಗಳಲ್ಲಿ

ಇತ್ತೀಚೆಗೆ ಜಾರಿಯಾದ ವಾಟ್ಸ್​​ಆಪ್ ಚಾನೆಲ್ 500 ಮಿಲಿಯನ್​ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಪಡೆದು ಕೊಂಡಿದೆ.

WhatsApp Channels crosses 500 mn monthly active users

author img

By ETV Bharat Karnataka Team

Published : Nov 16, 2023, 5:08 PM IST

ನವದೆಹಲಿ: ಇತ್ತೀಚೆಗೆ ಆರಂಭಿಸಲಾದ ವಾಟ್ಸ್​ಆ್ಯಪ್ ಚಾನೆಲ್​ ಫೀಚರ್ ಮಾಸಿಕ 500 ಮಿಲಿಯನ್ ಬಳಕೆದಾರರನ್ನು ಮೀರಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜೂಕರ್​ಬರ್ಗ್ ಬುಧವಾರ ಘೋಷಿಸಿದರು. ವಾಟ್ಸ್​ಆ್ಯಪ್​ನಲ್ಲಿ ಜನ ತಾವು ಫಾಲೋ ಮಾಡುವ ಜನರು, ಸಂಸ್ಥೆಗಳು ಮತ್ತು ತಂಡಗಳಿಂದ ನಿರಂತರವಾಗಿ ಅಪ್ಡೇಟ್​ಗಳನ್ನು ಪಡೆಯಲು ಚಾನೆಲ್​ ಫೀಚರ್ ಹೊಸ ಮಾರ್ಗವಾಗಿದೆ.

ಚಾನೆಲ್​​ಗಳು ನಿಮ್ಮ ಖಾಸಗಿ ಚಾಟ್​ಗಳಿಗಿಂತ ಬೇರೆಯಾಗಿದ್ದು, ನೀವು ಯಾರನ್ನು ಫಾಲೋ ಮಾಡುತ್ತೀರಿ ಎಂಬುದು ಇತರ ಫಾಲೋವರ್​ಗಳಿಗೆ ಗೊತ್ತಾಗುವುದಿಲ್ಲ. "ಮೊದಲ 7 ವಾರಗಳಲ್ಲಿ ವಾಟ್ಸ್​ಆ್ಯಪ್ ಚಾನೆಲ್​ಗಳಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರು! ವಾಟ್ಸ್​ಆ್ಯಪ್ ಸಮುದಾಯವು ಚಾನೆಲ್​ಗಳಲ್ಲಿ ಇಷ್ಟು ತೊಡಗಿಸಿಕೊಂಡಿರುವುದನ್ನು ನೋಡಲು ಸಂತೋಷವಾಗಿದೆ" ಎಂದು ಜುಕರ್​ಬರ್ಗ್ ತಮ್ಮ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿಯೇ ಘೋಷಿಸಿದ್ದು ವಿಶಿಷ್ಟ.

ವಾಟ್ಸ್​ಆ್ಯಪ್​ನಲ್ಲಿ ಮತ್ತೆ ಏನು ಹೊಸ ಫೀಚರ್​ಗಳು ಬರುತ್ತಿವೆ ಎಂಬುದನ್ನು ತಿಳಿಸಲು ಸಹ ವಾಟ್ಸ್ಆ್ಯಪ್ ತನ್ನದೇ ಆದ ಚಾನೆಲ್ ಆರಂಭಿಸಿದೆ. ವಾಟ್ಸ್​ಆ್ಯಪ್ ಚಾನೆಲ್​ಗಳು ಏಕಮುಖ ಸಂವಹನದ ಸಾಧನವಾಗಿದ್ದು, ಅಪ್ಲಿಕೇಶನ್ ಒಳಗಡೆ ಬಳಕೆದಾರರಿಗೆ ಹಾಗೂ ಅವರಿಗೆ ಮುಖ್ಯವಾದ ಜನ ಮತ್ತು ಸಂಸ್ಥೆಗಳಿಂದ ಅಪ್ಡೇಟ್​ ಮಾಹಿತಿಗಳನ್ನು ಖಾಸಗಿಯಾಗಿ ಪಡೆಯಲು ಮಾರ್ಗವನ್ನು ಒದಗಿಸುತ್ತವೆ.

"ನಾವು ಚಾನೆಲ್ ಗಳಲ್ಲಿ ಸ್ಟಿಕ್ಕರ್ ಗಳನ್ನು ಪ್ರಾರಂಭಿಸಿದ್ದೇವೆ. ಬಳಕೆದಾರರು ತಾವು ಫಾಲೋ ಮಾಡುವ ಚಾನೆಲ್ ಗಳಿಂದ ಅಪ್ಡೇಟ್​ಗಳನ್ನು ಪಡೆಯುವುದನ್ನು ಆನಂದಿಸುತ್ತಿದ್ದಾರೆ ಮತ್ತು ಅಡ್ಮಿನ್​ಗಳು ತಮ್ಮ ಫಾಲೋವರ್ಸ್​ಗಳೊಂದಿಗೆ ಹೊಸ ಸ್ವರೂಪದಲ್ಲಿ ಸಂಪರ್ಕ ಸಾಧಿಸುವ ಮಾರ್ಗವಾಗಿ ಚಾನೆಲ್​ಗಳನ್ನು ಬಳಸುತ್ತಿದ್ದಾರೆ" ಎಂದು ವಾಟ್ಸ್​ಆ್ಯಪ್ ಹೇಳಿದೆ.

ವಾಟ್ಸ್​ ಆ್ಯಪ್ ಮುಂದಿನ ದಿನಗಳಲ್ಲಿ ಸ್ಟೋರೀಸ್ ಮತ್ತು ಚಾನೆಲ್​ಗಳಲ್ಲಿ ಜಾಹೀರಾತು ತೋರಿಸಲು ಆರಂಭಿಸಲಿದೆ ಎಂದು ಕಳೆದ ವಾರ ಕಂಪನಿಯ ಮುಖ್ಯಸ್ಥ ವಿಲ್ ಕ್ಯಾಥ್​ಕಾರ್ಟ್​ ಹೇಳಿದ್ದಾರೆ. ಆದರೆ, ಜಾಹೀರಾತುಗಳು ಮೇನ್​ ಚಾಟ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವಾಯ್ಸ್​ ಚಾಟ್ ವೈಶಿಷ್ಟ್ಯ: ವಾಟ್ಸ್​ಆ್ಯಪ್ ಅಧಿಕೃತವಾಗಿ ಹೊಸ ವಾಯ್ಸ್ ಚಾಟ್ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಇದು ಬಳಕೆದಾರರಿಗೆ ದೊಡ್ಡ ಗ್ರೂಪ್​ಗಳೊಂದಿಗೆ ಹೆಚ್ಚು ತಡೆರಹಿತ ರೀತಿಯಲ್ಲಿ ಲೈವ್ ಸಂಭಾಷಣೆ ನಡೆಸಲು ಅನುವು ಮಾಡಿಕೊಡುತ್ತದೆ. ಧ್ವನಿ ಕರೆಗಳು ಮತ್ತು ಧ್ವನಿ ನೋಟ್ಸ್​ಗಳಿಗಿಂತ ಭಿನ್ನವಾಗಿ, ಹೊಸ ವೈಶಿಷ್ಟ್ಯವು ವಾಯ್ಸ್​ ಚಾಟ್ ಪ್ರಾರಂಭಿಸಿದಾಗ ಪ್ರತಿ ಗುಂಪಿನ ಸದಸ್ಯರನ್ನು ಪ್ರತ್ಯೇಕವಾಗಿ ರಿಂಗ್ ಮಾಡುವುದಿಲ್ಲ. ಬದಲಾಗಿ, ಬಳಕೆದಾರರು ಸೈಲೆಂಟ್​ ನೋಟಿಫಿಕೇಶನ್​ಗಳನ್ನು ಪಡೆಯುತ್ತಾರೆ ಮತ್ತು ಯಾವುದೇ ಸಮಯದಲ್ಲಿ ವಾಯ್ಸ್​ ಚಾಟ್​ಗೆ ಸೇರಲು ಆಯ್ಕೆ ಮಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.