ETV Bharat / science-and-technology

ಅಕ್ಟೋಬರ್​ನಲ್ಲಿ 75 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್

ವಾಟ್ಸ್​ಆ್ಯಪ್ ಅಕ್ಟೋಬರ್ ತಿಂಗಳಲ್ಲಿ 75 ಲಕ್ಷಕ್ಕೂ ಅಧಿಕ ಅಕೌಂಟ್​ಗಳನ್ನು ಬ್ಯಾನ್ ಮಾಡಿದೆ.

WhatsApp bans nearly 75 lakh Indian accounts in the month of October 2023: Find out why |

author img

By ETV Bharat Karnataka Team

Published : Dec 4, 2023, 2:36 PM IST

ಬೆಂಗಳೂರು : ಅಕ್ಟೋಬರ್ ತಿಂಗಳಲ್ಲಿ ವಾಟ್ಸ್​ಆ್ಯಪ್ ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿದೆ. ಬಳಕೆದಾರರ ಕುಂದುಕೊರತೆಗಳು, ಭಾರತೀಯ ಕಾನೂನುಗಳು ಅಥವಾ ವಾಟ್ಸ್​ಆ್ಯಪ್​ನ ಸೇವಾ ನಿಯಮಗಳ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಕೈಗೊಂಡ ಕ್ರಮದ ಮಾಸಿಕ ಮಾಸಿಕ ವರದಿಯಲ್ಲಿ ವಾಟ್ಸ್​ ಆ್ಯಪ್ ಈ ವಿಷಯ ತಿಳಿಸಿದೆ. ವರದಿಯ ಪ್ರಕಾರ ಖಾತೆಗಳನ್ನು ದುರುಪಯೋಗಪಡಿಸಿಕೊಂಡ ಕಾರಣದಿಂದ ಅಕ್ಟೋಬರ್ 1, 2023 ರಿಂದ ಅಕ್ಟೋಬರ್ 31, 2023ರ ಅವಧಿಯಲ್ಲಿ ವಾಟ್ಸ್​ಆ್ಯಪ್ ಭಾರತದಲ್ಲಿ ಒಟ್ಟು 75,48,000 ಖಾತೆಗಳನ್ನು ನಿಷೇಧಿಸಿದೆ.

ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ವರದಿಯು ನಿರ್ದಿಷ್ಟ ಖಾತೆಗಳ ದುರುಪಯೋಗವನ್ನು ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದೆ. ವರದಿಯ ಅವಧಿಯಲ್ಲಿ ವಾಟ್ಸ್​ಆ್ಯಪ್​ಗೆ ಒಟ್ಟು 9,063 ದೂರುಗಳು ಬಂದಿವೆ ಎಂದು ವರದಿಯಾಗಿದೆ. ಹೆಚ್ಚಿನ ದೂರುಗಳು ಖಾತೆ ನಿಷೇಧ ತೆರವುಗೊಳಿಸುವುದಕ್ಕೆ (4,771) ಗೆ ಸಂಬಂಧಿಸಿವೆ. ಅಕೌಂಟ್ ಸಪೋರ್ಟ್, ಇತರ ಸಪೋರ್ಟ್, ಪ್ರಾಡಕ್ಟ್ ಸಪೋರ್ಟ್ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆಯೂ ದೂರುಗಳು ಬಂದಿವೆ. ಒಟ್ಟು ದೂರುಗಳನ್ನು ಆಧರಿಸಿ 12 ಖಾತೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ದೂರಿನ ಸ್ವರೂಪದ ಆಧಾರದ ಮೇಲೆ ಇವನ್ನು ನಿಷೇಧಿಸಲಾಗಿದೆ ಅಥವಾ ಖಾತೆ ಪುನಃಸ್ಥಾಪನೆ ಮಾಡಲಾಗಿದೆ.

ಹೆಚ್ಚುವರಿಯಾಗಿ, ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ (ಜಿಎಸಿ) ಸ್ವೀಕರಿಸಿದ ಆದೇಶಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ಅವಧಿಯಲ್ಲಿ ಐದು ಆದೇಶಗಳು ತನಗೆ ಬಂದಿವೆ ಎಂದು ವಾಟ್ಸ್​ಆ್ಯಪ್ ಹೇಳಿದೆ. ಸೆಪ್ಟೆಂಬರ್ 1, 2023 ರಿಂದ ಸೆಪ್ಟೆಂಬರ್ 30, 2023 ರವರೆಗೆ ಒಟ್ಟು 7,111,000 ವಾಟ್ಸ್​ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿತ್ತು.

ಈ ಪೈಕಿ 2,571,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬರುವ ಮುನ್ನವೇ ಪೂರ್ವಭಾವಿಯಾಗಿ ನಿಷೇಧಿಸಲಾಗಿತ್ತು ಎಂದು ವಾಟ್ಸ್​ ಆ್ಯಪ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಆರು ಆದೇಶಗಳು ಬಂದಿದ್ದವು ಹಾಗೂ ಈ ಎಲ್ಲವುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ವಾಟ್ಸ್​ಆ್ಯಪ್ ಇದೊಂದು ಉಚಿತವಾಗಿ ಡೌನ್ಲೋಡ್ ಮಾಡಿ ಬಳಸಬಹುದಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಆಗಿದೆ. ಇಂಟರ್​ನೆಟ್​ ಸಂಪರ್ಕದ ಮೂಲಕ ಇದರಲ್ಲಿ ನೀವು ಸಂದೇಶಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಬಹುದು. ಇದರಲ್ಲಿ ನೀವು ವಾಯ್ಸ್​ ಅಥವಾ ವೀಡಿಯೊ ಕರೆ ಕೂಡ ಮಾಡಬಹುದು.

ತೀರ್ಮಾನ: ಗೂಗಲ್​ನ ಹೊಸ ಎಐ 'ಜೆಮಿನಿ' ಬಿಡುಗಡೆ ಮುಂದೂಡಿಕೆ; ತಪ್ಪು ಉತ್ತರ ನೀಡಿದ್ದೇ ಕಾರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.