ನವದೆಹಲಿ: ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಇದೀಗ ಹೊಸ ವಿನ್ಯಾಸದೊಂದಿಗೆ ಪುಟ ರಚನೆ ಮಾಡಿ, ಕೆಲವೊಂದು ರಾಜ್ಯಗಳಲ್ಲಿ ಕಾಣಿಸಿಕೊಳ್ಳಲಿದೆ.
ಡೆಡ್ಲಿ ವೈರಸ್ ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿರುವ ಛತ್ತೀಸ್ಗಢ್, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ಗಳಲ್ಲಿ ಈ ಟ್ವಿಟರ್ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ಗೋಸ್ಕರ ಸಹಾಯ ಮಾಡುವ ಇತ್ತೀಚಿನ ಚಿತ್ರಗಳು ಮುಖ ಪುಟದಲ್ಲಿದ್ದು, ಈಗಾಗಲೇ ಆಯಾ ರಾಜ್ಯಗಳಲ್ಲಿ ಬಿಡುಗಡೆಯಾಗಿದೆ ಎಂದು ಟ್ವಿಟರ್ ಹೇಳಿಕೊಂಡಿದೆ. ಈ ಪುಟಗಳಲ್ಲಿ ದ್ವಿಭಾಷಾ ಟ್ವೀಟ್ಗಳಿದ್ದು, ಇಂಗ್ಲಿಷ್ ಮತ್ತು ಅಲ್ಲಿನ ಅಧಿಕೃತ ಸ್ಥಳೀಯ ಭಾಷೆ ಕಾಣಸಿಗಲಿದೆ.
ಈ ಪುಟಗಳಲ್ಲಿ ಇತ್ತೀಚಿನ ಅತ್ಯಂತ ವಿಶ್ವಾಸಾರ್ಹ ಸುದ್ದಿ ಟೈಮ್ಲೈನ್ನಲ್ಲಿ ಬಿತ್ತರಗೊಳ್ಳಲಿದ್ದು, ಅದಕ್ಕಾಗಿ ಮಾಧ್ಯಮ ಸಂಸ್ಥೆ ಹಾಗೂ ಪತ್ರಕರ್ತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ವೈದ್ಯಕೀಯ ಸೇವೆ, ಆಮ್ಲಜನಕ, ಔಷಧಗಳು, ಅಹಾರ ಪೂರೈಕೆ ಬಗ್ಗೆ ಮಾಹಿತಿ ಸಹ ಇಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ: ಕೊಡದೊಳಗೆ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಬಾಲಕ.. ಸತತ 2 ಗಂಟೆಗಳ ಕಾಲ ನಡೀತು ರಕ್ಷಣಾ ಕಾರ್ಯ
ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಅದರಿಂದ ಹೊರ ಬರಲು ಹರಸಾಹಸ ಪಡುತ್ತಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೈಜೋಡಿಸಿರುವ ಟ್ವಿಟರ್ 110 ಕೋಟಿ ರೂ. ದೇಣಿಗೆ ಸಹ ನೀಡಿದೆ.