ETV Bharat / science-and-technology

ಲಂಡನ್​ನಲ್ಲಿ OpenAI ಕಚೇರಿ ಆರಂಭ: ಸಂಶೋಧನೆ, ಸಾಮರ್ಥ್ಯ ವೃದ್ಧಿಗೆ ಒತ್ತು - ಓಪನ್‌ಎಐನ ಸಿಇಒ ಆಲ್ಟ್‌ಮ್ಯಾನ್

ಜನಪ್ರಿಯ ಚಾಟ್​ ಜಿಪಿಟಿ ಸಾಫ್ಟ್‌ವೇರ್ ತಯಾರಕ ಕಂಪನಿ ಓಪನ್ ಎಐ (OpenAI) ಲಂಡನ್​ನಲ್ಲಿ ಹೊಸ ಕಚೇರಿ ಆರಂಭಿಸಿದೆ.

OpenAI opens office in London, home base of Google's

author img

By

Published : Jun 29, 2023, 3:47 PM IST

ಸ್ಯಾನ್ ಫ್ರಾನ್ಸಿಸ್ಕೋ : ಸ್ಯಾಮ್ ಆಲ್ಟ್‌ಮನ್ ನೇತೃತ್ವದ OpenAI ಕಂಪನಿ ತನ್ನ ಜಾಗತಿಕ ವಿಸ್ತರಣಾ ಯೋಜನೆಗಳ ಭಾಗವಾಗಿ ಲಂಡನ್‌ನಲ್ಲಿ ಹೊಸ ಕಚೇರಿಯನ್ನು ಆರಂಭಿಸಿದೆ. ಅಮೆರಿಕದ ಹೊರಗೂ ತನ್ನ ವಹಿವಾಟುಗಳನ್ನು ವಿಸ್ತರಿಸುವ ಪ್ರಯತ್ನಕ್ಕೆ ಕಂಪನಿ ಕೈಹಾಕಿದೆ. ಲಂಡನ್ ಇದು ಗೂಗಲ್‌ನ ಅತಿದೊಡ್ಡ AI ಸಂಶೋಧನಾ ವಿಭಾಗವಾದ ಡೀಪ್‌ಮೈಂಡ್‌ನ ಮೂಲ ನೆಲೆ ಕೂಡ ಆಗಿರುವುದು ವಿಶೇಷ.

ಲಂಡನ್‌ನಲ್ಲಿ ಆರಂಭವಾಗಿರುವ ತನ್ನ ಮೊದಲ ಅಂತಾರಾಷ್ಟ್ರೀಯ ಕಚೇರಿಯು ಓಪನ್ ಎಐ ನ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಕಂಪನಿ ಹೇಳಿದೆ. ನಮ್ಮ ಕಾರ್ಯಾಚರಣೆಗಳ ವ್ಯಾಪ್ತಿಯನ್ನು ವಿಸ್ತರಿಸಲು, ವೈವಿಧ್ಯಮಯ ದೃಷ್ಟಿಕೋನಗಳನ್ನು ತರಲು ಮತ್ತು ಮಾನವತೆಗೆ ಕೃತಕ ಸಾಮಾನ್ಯ ಬುದ್ಧಿಮತ್ತೆ (AGI)ಯ ಎಲ್ಲ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಇದು ತೋರಿಸುತ್ತದೆ ಎಂದು ಓಪನ್ ಎಐ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಚಾಟ್‌ಜಿಪಿಟಿ ಡೆವಲಪರ್ ಹಾಗೂ ಓಪನ್‌ಎಐನ ಸಿಇಒ ಆಲ್ಟ್‌ಮ್ಯಾನ್, ಈ ವಿಸ್ತರಣೆಯನ್ನು ವಿಶ್ವದರ್ಜೆಯ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಎಜಿಐ ಅಭಿವೃದ್ಧಿ ಮತ್ತು ನೀತಿಯಲ್ಲಿ ಹೊಸತನವನ್ನು ಹೆಚ್ಚಿಸುವ ಅವಕಾಶವಾಗಿದೆ ಎಂದು ಹೇಳಿದರು. ಭವಿಷ್ಯ ಹೇಗಿರಲಿದೆ ಎಂಬುದರ ಕುರಿತು ನಾವು ಉತ್ಸುಕರಾಗಿದ್ದೇವೆ ಮತ್ತು ಸುರಕ್ಷಿತ AI ಅನ್ನು ನಿರ್ಮಿಸಲು ಮತ್ತು ನಿಯೋಜಿಸಲು ನಮ್ಮ ಲಂಡನ್ ಕಚೇರಿ ನೀಡುವ ಕೊಡುಗೆಗಳನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಂಡನ್‌ನಲ್ಲಿರುವ ತಂಡಗಳ ಸದಸ್ಯರು ಓಪನ್ ಎಐ ನ ಪ್ರಮುಖ ಸಂಶೋಧನೆ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಮುನ್ನಡೆಸುವತ್ತ ಗಮನಹರಿಸಲಿದ್ದಾರೆ. ಅವರು ಸ್ಥಳೀಯ ಸಮುದಾಯಗಳು ಮತ್ತು ನೀತಿ ನಿರೂಪಕರೊಂದಿಗೆ ತಮ್ಮ ಕೆಲಸಗಳಲ್ಲಿ ಸಹಯೋಗ ಪಡೆಯಲಿದ್ದಾರೆ. ಸುರಕ್ಷಿತ AGI ಅನ್ನು ರಚಿಸುವ ಮತ್ತು ಪ್ರಚಾರ ಮಾಡುವ ಕಾರ್ಯದಲ್ಲಿ ನಮ್ಮ ಪ್ರಯತ್ನಗಳನ್ನು ಬಲಪಡಿಸಲು ಸಂಶೋಧನೆ, ಇಂಜಿನಿಯರಿಂಗ್ ಮತ್ತು ಗೋ-ಟು-ಮಾರ್ಕೆಟ್ ಕಾರ್ಯಗಳಲ್ಲಿ ಡೈನಾಮಿಕ್ ತಂಡಗಳನ್ನು ನಿರ್ಮಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಓಪನ್ ಎಐ ನ ಪೀಪಲ್ ವಿಭಾಗದ ವೈಸ್ ಪ್ರೆಸಿಡೆಂಟ್ ಡಯೇನ್ ಯೂನ್ ಹೇಳಿದರು.

1,300 ಕ್ಕೂ ಹೆಚ್ಚು AI ಕಂಪನಿಗಳು ಲಂಡನ್‌ನಲ್ಲಿ ನೆಲೆಗೊಂಡಿವೆ ಮತ್ತು ಹೂಡಿಕೆ ಮಾಡಿದ ವೆಂಚರ್ ಕ್ಯಾಪಿಟಲ್ ವಿಷಯದಲ್ಲಿ ನಗರವು ಯುಕೆಯಲ್ಲಿಯೇ ಅತ್ಯಧಿಕ ಧನಸಹಾಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಡೀಪ್‌ಮೈಂಡ್ ಇದು 2010 ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿಯಾಗಿದೆ ಮತ್ತು 2014 ರಲ್ಲಿ ಇದನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಡೀಪ್‌ಮೈಂಡ್ ಸಾಮಾನ್ಯ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ಕೆಲಸವನ್ನು ಕಲಿಯಬಹುದಾದ AI ವ್ಯವಸ್ಥೆಗಳನ್ನು ರಚಿಸುವ ಗುರಿಯನ್ನು ಕಂಪನಿ ಹೊಂದಿದೆ. ಡೀಪ್‌ಮೈಂಡ್‌ನ ಸಂಶೋಧನೆಯು ಯಂತ್ರ ಕಲಿಕೆ, ನರವಿಜ್ಞಾನ, ಕಂಪ್ಯೂಟರ್ ದೃಷ್ಟಿ, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ.

ಇದನ್ನೂ ಓದಿ : ChatGPT ದುರುಪಯೋಗ ತಡೆಗೆ 'ನೈತಿಕ' ಮಾರ್ಗಸೂಚಿ ಬಿಡುಗಡೆ ಮಾಡಿದ ವ್ಯಾಟಿಕನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.