ETV Bharat / science-and-technology

130 ಕೋಟಿಗೆ ತಲುಪಿದ ಜಾಗತಿಕ 5G ಬಳಕೆದಾರರ ಸಂಖ್ಯೆ; ಭಾರತದಲ್ಲಿ ಅತ್ಯಧಿಕ ಚಂದಾದಾರರ ಸೇರ್ಪಡೆ

ಜಾಗತಿಕವಾಗಿ ಎರಡನೇ ತ್ರೈಮಾಸಿಕದಲ್ಲಿ 175 ಮಿಲಿಯನ್​ಗೂ ಅಧಿಕ ಹೊಸ 5ಜಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

Global 5G mobile subscriptions reach 1.3 bn, India adds most overall users

author img

By ETV Bharat Karnataka Team

Published : Sep 5, 2023, 12:52 PM IST

ನವದೆಹಲಿ: ವಿಶ್ವದಲ್ಲಿ ಈ ವರ್ಷದ ​ಎರಡನೇ ತ್ರೈಮಾಸಿಕದಲ್ಲಿ (ಕ್ಯೂ 2) 175 ಮಿಲಿಯನ್​ಗೂ ಅಧಿಕ ಹೊಸ 5ಜಿ ನೆಟ್​ವರ್ಕ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿ ಈ ಅವಧಿಯಲ್ಲಿ ಅತ್ಯಧಿಕ ಏಳು ದಶಲಕ್ಷಕ್ಕೂ ಹೆಚ್ಚು ಹೊಸ 5ಜಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಹೊಸ ವರದಿ ಮಂಗಳವಾರ ತಿಳಿಸಿದೆ. ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ 5 ಜಿ ಬಳಕೆದಾರರ ಸಂಖ್ಯೆ 1.3 ಬಿಲಿಯನ್​ (130 ಕೋಟಿ)ಗೆ ತಲುಪಿದೆ.

ಎರಡನೇ ತ್ರೈಮಾಸಿಕದಲ್ಲಿ 40 ಮಿಲಿಯನ್ ಹೊಸ ಮೊಬೈಲ್ ಬಳಕೆದಾರರು ಸೃಷ್ಟಿಯಾಗಿದ್ದು, ಜಾಗತಿಕವಾಗಿ ಒಟ್ಟಾರೆ ಮೊಬೈಲ್ ಬಳಕೆದಾರರ ಸಂಖ್ಯೆ 8.3 ಬಿಲಿಯನ್ ಆಗಿದೆ. ಹಾಗೆಯೇ ಅನನ್ಯ ಮೊಬೈಲ್ ಬಳಕೆದಾರರ ಸಂಖ್ಯೆ 6.1 ಬಿಲಿಯನ್ ಆಗಿದೆ. ಈ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ಅಂದರೆ 7 ಮಿಲಿಯನ್​ಗೂ ಅಧಿಕ ಹೊಸ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಚೀನಾ 5 ಮಿಲಿಯನ್ ಹಾಗೂ ಅಮೆರಿಕ 3 ಮಿಲಿಯನ್ ಹೊಸ ಮೊಬೈಲ್ ಬಳಕೆದಾರರ ಸೇರ್ಪಡೆಯೊಂದಿಗೆ ನಂತರದ ಸ್ಥಾನಗಳಲ್ಲಿವೆ.

"ವಿಶ್ವದಲ್ಲಿ ಸುಮಾರು 260 ಮೊಬೈಲ್ ಸಂಪರ್ಕ ಕಂಪನಿಗಳು (communications service providers -CSPs) ವಾಣಿಜ್ಯ 5 ಜಿ ಸೇವೆಗಳನ್ನು ಪ್ರಾರಂಭಿಸಿವೆ. ಸುಮಾರು 35 ಸಿಎಸ್​ಪಿಗಳು ಸ್ವತಂತ್ರ 5 ಜಿ (ಎಸ್ಎ) ನೆಟ್​ವರ್ಕ್​ಗಳನ್ನು ಪ್ರಾರಂಭಿಸಿವೆ" ಎಂದು ವರದಿ ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಮೊಬೈಲ್ ಚಂದಾದಾರಿಕೆಯ ಬೆಳವಣಿಗೆ ಶೇಕಡಾ 105 ರಷ್ಟಿತ್ತು.

ಹಾಗೆಯೇ ಮೊಬೈಲ್ ಬ್ರಾಡ್​ಬ್ಯಾಂಡ್ ಚಂದಾದಾರರ ಸಂಖ್ಯೆ ತ್ರೈಮಾಸಿಕದಲ್ಲಿ ಸುಮಾರು 100 ಮಿಲಿಯನ್​ನಷ್ಟು ಏರಿಕೆಯಾಗಿ, ಒಟ್ಟು 7.4 ಬಿಲಿಯನ್​ಗೆ ತಲುಪಿದೆ. ಒಟ್ಟಾರೆ ಮೊಬೈಲ್ ಚಂದಾದಾರಿಕೆಗಳ ಪೈಕಿ ಮೊಬೈಲ್ ಬ್ರಾಡ್​ಬ್ಯಾಂಡ್ ಪ್ರಮಾಣ ಶೇಕಡಾ 88 ರಷ್ಟಿದೆ ಎಂದು ಸಂಶೋಧನೆಗಳು ತೋರಿಸಿವೆ. 2022 ಮತ್ತು 2023 ರ ಎರಡನೇ ತ್ರೈಮಾಸಿಕದ ನಡುವೆ ಮೊಬೈಲ್ ಡೇಟಾ ದಟ್ಟಣೆ ಶೇಕಡಾ 33 ರಷ್ಟು ಹೆಚ್ಚಾಗಿದೆ. 4 ಜಿ ಚಂದಾದಾರಿಕೆಗಳು 11 ಮಿಲಿಯನ್​​ನಷ್ಟು ಏರಿಕೆಯಾಗಿ ಒಟ್ಟು 5.2 ಬಿಲಿಯನ್​ಗೆ ತಲುಪಿವೆ. ಒಟ್ಟು ಮೊಬೈಲ್ ಬಳಕೆದಾರರ ಪೈಕಿ ಶೇ 62 ರಷ್ಟು ಜನ 4ಜಿ ನೆಟ್​​ವರ್ಕ್​ ಬಳಸುತ್ತಿದ್ದಾರೆ.

5 ಜಿ ಎಂಬುದು ವೈರ್​ಲೆಸ್​ ಸೆಲ್ಯುಲಾರ್ ತಂತ್ರಜ್ಞಾನದ ಐದನೇ ಪೀಳಿಗೆಯಾಗಿದ್ದು, ಅತ್ಯಧಿಕ ಅಪ್ಲೋಡ್ ಮತ್ತು ಡೌನ್ಲೋಡ್ ವೇಗ, ಹೆಚ್ಚು ಸ್ಥಿರವಾದ ಸಂಪರ್ಕ ಮತ್ತು ಹಿಂದಿನ ನೆಟ್​​ವರ್ಕ್​ಗಳಿಗಿಂತ ಸುಧಾರಿತ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ಜನಪ್ರಿಯವಾಗಿರುವ 4 ಜಿ ನೆಟ್​ವರ್ಕ್​ಗಿಂತ 5 ಜಿ ಹೆಚ್ಚು ವೇಗವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ಹೆಚ್ಚಿನ ವೇಗ, ಉತ್ತಮ ವಿಶ್ವಾಸಾರ್ಹತೆ ಮತ್ತು ಅತಿ ಕಡಿಮೆ ವಿಳಂಬದೊಂದಿಗೆ, 5 ಜಿ ತಂತ್ರಜ್ಞಾನವು ಮೊಬೈಲ್ ಬಳಕೆಯ ವಿಚಾರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದೆ. 5 ಜಿ ತಂತ್ರಜ್ಞಾನವು ಇಂದಿನ ಬಹುತೇಕ ಎಲ್ಲ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ : ಜುಲೈನಲ್ಲಿ 72 ಲಕ್ಷ ಖಾತೆಗಳನ್ನು ನಿರ್ಬಂಧಿಸಿದ ವಾಟ್ಸ್​ಆ್ಯಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.