ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ದೃಷ್ಟಿ ಸಾಮರ್ಥ್ಯದೊಂದಿಗೆ ಹೊಸ ಟೆಕ್ಸ್ಟ್ - ಟು - ಸ್ಪೀಚ್ ವೈಶಿಷ್ಟ್ಯ ಪರಿಚಯಿಸಿದೆ. ಇದರ ಮೂಲಕ ಟೆಕ್ಸ್ಟ್ ಅನ್ನು ಇನ್ಪುಟ್ ಮಾಡಿ ಅದರಂತೆ ಮಾತನಾಡುವ ಅವತಾರ್ ವಿಡಿಯೋಗಳನ್ನು ರಚಿಸಬಹುದು ಮತ್ತು ಮಾನವರ ಚಿತ್ರಗಳನ್ನು ಬಳಸಿಕೊಂಡು ತರಬೇತಿ ಪಡೆದ ನೈಜ - ಸಮಯದ ಸಂವಾದಾತ್ಮಕ ಬಾಟ್ಗಳನ್ನು ನಿರ್ಮಿಸಬಹುದು. ಅಜುರ್ ಎಐ ಸ್ಪೀಚ್ ಟೆಕ್ಸ್ಟ್ ಎಂದು ಕರೆಯಲ್ಪಡುವ ಮತ್ತು ಸಾರ್ವಜನಿಕರಿಗೆ ಪರಿಶೀಲನೆಗೆ ಮುಕ್ತವಾಗಿರುವ ಈ ಸಾಫ್ಟ್ವೇರ್ ಗ್ರಾಹಕರಿಗೆ 2 ಡಿ ಫೋಟೋರಿಯಲಿಸ್ಟಿಕ್ ಅವತಾರ್ನಲ್ಲಿ ಮಾತನಾಡುವ ಸಂಶ್ಲೇಷಿತ ವಿಡಿಯೋಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
"ನ್ಯೂರಲ್ ಟೆಕ್ಸ್ಟ್ ಟು ಸ್ಪೀಚ್ ಅವತಾರ್ ಮಾದರಿಗಳನ್ನು ಮಾನವ ವಿಡಿಯೋ ರೆಕಾರ್ಡಿಂಗ್ ಮಾದರಿಗಳ ಆಧಾರದ ಮೇಲೆ ಆಳವಾದ ನ್ಯೂರಲ್ ಜಾಲಗಳಿಂದ ತರಬೇತಿ ನೀಡಲಾಗುತ್ತದೆ ಮತ್ತು ಅವತಾರ್ನ ಧ್ವನಿಯನ್ನು ಟೆಕ್ಸ್ಟ್ ಟು ಸ್ಪೀಚ್ ವಾಯ್ಸ್ ಮಾದರಿಯಿಂದ ಒದಗಿಸಲಾಗುತ್ತದೆ" ಎಂದು ಕಂಪನಿ ಬುಧವಾರ 'ಮೈಕ್ರೋಸಾಫ್ಟ್ ಇಗ್ನೈಟ್' ಕಾರ್ಯಕ್ರಮದಲ್ಲಿ ಹೇಳಿದೆ.
ಟೆಕ್ಸ್ಟ್ ಟು ಸ್ಪೀಚ್ ಅವತಾರ್ ಮೂಲಕ ಬಳಕೆದಾರರು ಹೆಚ್ಚು ಆಕರ್ಷಕ ಡಿಜಿಟಲ್ ಸಂವಹನಗಳನ್ನು ರಚಿಸಬಹುದು. ಸಂಭಾಷಣೆ ನಡೆಸುವ ವ್ಯಕ್ತಿಗಳು, ವರ್ಚುಯಲ್ ಸಹಾಯಕರು, ಚಾಟ್ಬಾಟ್ ಮುಂತಾದುವುಗಳನ್ನು ನಿರ್ಮಿಸಲು ಟೆಕ್ಸ್ಟ್ ಟು ಸ್ಪೀಚ್ ಅವತಾರ್ ಅನ್ನು ಬಳಸಬಹುದು.
ಟೆಕ್ಸ್ಟ್ ಟು ಸ್ಪೀಚ್ ಅವತಾರ ಅನ್ನು ವ್ಯಕ್ತಿಗಳು ಮತ್ತು ಸಮಾಜದ ಹಕ್ಕುಗಳನ್ನು ರಕ್ಷಿಸುವ, ಪಾರದರ್ಶಕ ಮಾನವ - ಕಂಪ್ಯೂಟರ್ ಸಂವಹನವನ್ನು ಉತ್ತೇಜಿಸುವ ಮತ್ತು ಹಾನಿಕಾರಕ ಡೀಪ್ಫೇಕ್ಗಳು ಮತ್ತು ದಾರಿತಪ್ಪಿಸುವ ಕಂಟೆಂಟ್ಗಳನ್ನು ರಚಿಸದಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿ, ಕಸ್ಟಮ್ ಅವತಾರ್ ಅನ್ನು ಬಳಸಬೇಕಾದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಮತ್ತು ಇದನ್ನು ಕೆಲವೇ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಬಳಸಬಹುದಾಗಿದೆ.
ಕಂಪನಿ ಸದ್ಯ ಎರಡು ಮಾದರಿಯ ಟೆಕ್ಸ್ಟ್ ಟು ಸ್ಪೀಚ್ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಅವು ಯಾವವು ಎಂದರೆ , ಪೂರ್ವನಿರ್ಮಿತ ಪಠ್ಯದಿಂದ ಸ್ಪೀಚ್ ಅವತಾರ್ (prebuilt text to speech avatar) ಮತ್ತು ಕಸ್ಟಮ್ ಟೆಕ್ಸ್ಟ್ ಟು ಸ್ಪೀಚ್ ಅವತಾರ್ (custom text to speech avatar).
"ಮೈಕ್ರೋಸಾಫ್ಟ್ ತನ್ನ ಅಜೂರ್ ಚಂದಾದಾರರಿಗೆ ಔಟ್ ಆಫ್ ಬಾಕ್ಸ್ ಉತ್ಪನ್ನಗಳಂತೆ ಟೆಕ್ಸ್ಟ್ ಟು ಸ್ಪೀಚ್ ವೈಶಿಷ್ಟ್ಯ ನೀಡುತ್ತಿದೆ. ಈ ಅವತಾರ್ಗಳು ಪಠ್ಯ ಇನ್ಪುಟ್ ಆಧಾರದ ಮೇಲೆ ವಿಭಿನ್ನ ಭಾಷೆಗಳು ಮತ್ತು ಧ್ವನಿಗಳಲ್ಲಿ ಮಾತನಾಡಬಹುದು. ಗ್ರಾಹಕರು ವಿವಿಧ ಆಯ್ಕೆಗಳಿಂದ ಅವತಾರ್ ಅನ್ನು ಆಯ್ಕೆ ಮಾಡಬಹುದು ಮತ್ತು ನೈಜ ಸಮಯದ ಅವತಾರ್ ಪ್ರತಿಕ್ರಿಯೆಗಳೊಂದಿಗೆ ವಿಡಿಯೋ ಕಂಟೆಂಟ್ ಅಥವಾ ಸಂವಾದಾತ್ಮಕ ಅಪ್ಲಿಕೇಶನ್ಗಳನ್ನು ರಚಿಸಲು ಅದನ್ನು ಬಳಸಬಹುದು" ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : ಮಾಸಿಕ 500 ಮಿಲಿಯನ್ ಬಳಕೆದಾರರನ್ನು ದಾಟಿದ ವಾಟ್ಸ್ಆ್ಯಪ್ ಚಾನೆಲ್ ವೈಶಿಷ್ಟ್ಯ