ETV Bharat / science-and-technology

ಏನಿದು ಐರನ್ ಡೋಮ್​? ಇಸ್ರೇಲ್​ನ ರಕ್ಷಣೆಗೆ ಇದೆಷ್ಟು ಸಮರ್ಥ? - Iron Dome missile defence system

ಗಾಜಾದಿಂದ ಹಾರಿ ಬರುವ ರಾಕೆಟ್​ ದಾಳಿಯನ್ನು ತಡೆಗಟ್ಟಲು ಇಸ್ರೇಲ್ ಐರನ್ ಡೋಮ್ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

Is Israel's Iron Dome missile defence system ironclad?

author img

By ETV Bharat Karnataka Team

Published : Oct 24, 2023, 3:21 PM IST

ಜೆರುಸಲೇಂ: ಇಸ್ರೇಲ್ 2011ರಲ್ಲಿ ಐರನ್ ಡೋಮ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದಾಗಿನಿಂದ, ಈ ಅತ್ಯಾಧುನಿಕ ರಾಕೆಟ್-ರಕ್ಷಣಾ ವ್ಯವಸ್ಥೆಯು ಗಾಜಾ ಪಟ್ಟಿಯಿಂದ ಹಾರಿಸಲಾದ ಸಾವಿರಾರು ರಾಕೆಟ್​ಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಿದೆ. ಈ ವ್ಯವಸ್ಥೆಯು ಇಸ್ರೇಲ್ ನಿವಾಸಿಗಳಿಗೆ ಸುರಕ್ಷತೆಯ ಭಾವನೆಯನ್ನು ನೀಡಿದೆ. ಗಾಜಾ ಪಟ್ಟಿಯಿಂದ ರಾಕೆಟ್​ಗಳು ಹಾರಿ ಬರುವುದು ಮತ್ತು ಅವುಗಳನ್ನು ಐರನ್ ಡೋಮ್​ ಪತ್ತೆ ಹಚ್ಚಿ ಹೊಡೆದುರುಳಿಸುವ ದೃಶ್ಯಗಳು ಇಸ್ರೇಲ್​ನ ಆಕಾಶದಲ್ಲಿ ಆಗಾಗ ಕಾಣಿಸುತ್ತವೆ.

ಆದರೆ ಪ್ರಸ್ತುತ ಹಮಾಸ್ ಆರಂಭಿಸಿರುವ ಯುದ್ಧ ಇಸ್ರೇಲ್ ಪಾಲಿಗೆ ಕಠಿಣ ಸವಾಲಿನದ್ದಾಗಿದೆ. ಕೇವಲ ಎರಡು ವಾರಗಳಲ್ಲಿ ಹಮಾಸ್ ಇಸ್ರೇಲ್ ಕಡೆಗೆ 7,000 ರಾಕೆಟ್‌ಗಳನ್ನು ಹಾರಿಸಿತ್ತು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಇದು 2007ರಲ್ಲಿ ಗಾಜಾದಲ್ಲಿ ಉಗ್ರಗಾಮಿ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಹಿಂದಿನ ನಾಲ್ಕು ಯುದ್ಧಗಳಿಗಿಂತ ಹೆಚ್ಚಾಗಿದೆ. ವೆಸ್ಟ್ ಪಾಯಿಂಟ್​ನ ಅಂಕಿಅಂಶಗಳ ಪ್ರಕಾರ, ಯುದ್ಧದ ಮೊದಲ ದಿನವಾದ ಅಕ್ಟೋಬರ್ 7 ರಂದು ಹಮಾಸ್ ಕನಿಷ್ಠ 2,000 ರಾಕೆಟ್​ಗಳನ್ನು ಉಡಾವಣೆ ಮಾಡಿದೆ.

ಲೆಬನಾನ್‌ನ ಹಿಜ್ಬುಲ್ಲಾ ಕೂಡ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ನ ಉತ್ತರ ಭಾಗದಲ್ಲಿ ನೂರಾರು ರಾಕೆಟ್ ಗಳನ್ನು ಹಾರಿಸಿದೆ. ಬಹುತೇಕ ರಾಕೆಟ್ ಗಳನ್ನು ತಡೆಹಿಡಿಯಲಾಗಿದ್ದರೂ, ಕೆಲ ರಾಕೆಟ್​ಗಳು ಟೆಲ್​ ಅವಿವ್​ನ ಕಟ್ಟಡಗಳಿಗೆ ಅಪ್ಪಳಿಸಿ ಕನಿಷ್ಠ 11 ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್​ನ ಐರನ್ ಡೋಮ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಐರನ್ ಡೋಮ್ ಹೇಗೆ ಕೆಲಸ ಮಾಡುತ್ತದೆ?: ಐರನ್ ಡೋಮ್ ಎಂಬುದು ಒಳಬರುವ ಅಲ್ಪ-ಶ್ರೇಣಿಯ ರಾಕೆಟ್ ಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ತಡೆಹಿಡಿಯಲು ರಾಡಾರ್‌ಗಳನ್ನು ಬಳಸುವ ಬ್ಯಾಟರಿಗಳ ಸರಣಿಯಾಗಿದೆ. ಪ್ರತಿ ಬ್ಯಾಟರಿಯಲ್ಲಿ ಮೂರು ಅಥವಾ ನಾಲ್ಕು ಲಾಂಚರ್​ಗಳು, 20 ಕ್ಷಿಪಣಿಗಳು ಮತ್ತು ರಾಡಾರ್ ಇರುತ್ತವೆ ಎಂದು ಇಸ್ರೇಲ್​ನ ರಫೇಲ್ ಡಿಫೆನ್ಸ್ ಸಿಸ್ಟಮ್ಸ್​ನೊಂದಿಗೆ ಕೆಲಸ ಮಾಡುವ ಯುಎಸ್ ರಕ್ಷಣಾ ಸಾಮಗ್ರಿಗಳ ತಯಾರಕ ಕಂಪನಿ ರೇಥಿಯಾನ್ ತಿಳಿಸಿದೆ. ರಾಡಾರ್ ರಾಕೆಟ್ ಅನ್ನು ಪತ್ತೆಹಚ್ಚಿದ ನಂತರ, ರಾಕೆಟ್ ಜನನಿಬಿಡ ಪ್ರದೇಶದ ಕಡೆಗೆ ಹೋಗುತ್ತಿದೆಯೇ ಎಂದು ವ್ಯವಸ್ಥೆಯು ನಿರ್ಧರಿಸುತ್ತದೆ.

Iron Dome
ಐರನ್ ಡೋಮ್

ಒಂದೊಮ್ಮೆ ರಾಕೆಟ್​ ಜನವಸತಿ ಪ್ರದೇಶದ ಕಡೆಗೆ ಬರುತ್ತಿದ್ದರೆ ಐರನ್ ಡೋಮ್ ಕ್ಷಿಪಣಿಯನ್ನು ಉಡಾಯಿಸಿ ರಾಕೆಟ್​ ಅನ್ನು ಮಾರ್ಗ ಮಧ್ಯದಲ್ಲಿಯೇ ಧ್ವಂಸಗೊಳಿಸುತ್ತದೆ. ರಾಕೆಟ್ ಬಯಲು ಪ್ರದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳುವಂತಿದ್ದರೆ ಅದನ್ನು ಬೀಳಲು ಬಿಡಲಾಗುತ್ತದೆ. ಈ ಮೂಲಕ ಅನಗತ್ಯವಾಗಿ ಕ್ಷಿಪಣಿಗಳನ್ನು ಹಾಳು ಮಾಡುವುದನ್ನು ತಪ್ಪಿಸಲಾಗುತ್ತದೆ. ಪ್ರಸ್ತುತ ಎಷ್ಟು ಐರನ್ ಡೋಮ್ ಬ್ಯಾಟರಿಗಳನ್ನು ನಿಯೋಜಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಮಿಲಿಟರಿ ನಿರಾಕರಿಸಿದೆ.

ಆದರೆ 2021 ರ ಹೊತ್ತಿಗೆ, ಇಸ್ರೇಲ್ ದೇಶಾದ್ಯಂತ 10 ಬ್ಯಾಟರಿಗಳನ್ನು ಅಳವಡಿಸಿದೆ. ಪ್ರತಿಯೊಂದೂ 60 ಚದರ ಮೈಲಿ (155 ಚದರ ಕಿಲೋಮೀಟರ್) ಪ್ರದೇಶವನ್ನು ರಕ್ಷಿಸಲು ಸಮರ್ಥವಾಗಿದೆ ಎಂದು ರೇಥಿಯಾನ್ ತಿಳಿಸಿದೆ.

ಐರನ್ ಡೋಮ್ ನಿಖರತೆ ಎಷ್ಟು?: ರಫೇಲ್ ಪ್ರಕಾರ ಇದು ಸರಿಸುಮಾರು 90%ರಷ್ಟು ನಿಖರವಾಗಿದೆ. ಆದರೆ ರಾಕೆಟ್‌ಗಳ ಬೃಹತ್ ಸುರಿಮಳೆಯಾದರೆ ಐರನ್ ಡೋಮ್ ಗೊಂದಲಕ್ಕೀಡಾಗಬಹುದು. ಇದು ಇಲ್ಲಿಯವರೆಗೆ ಉತ್ತಮವಾಗಿಯೇ ಕಾರ್ಯನಿರ್ವಹಿಸಿದ್ದರೂ, ಹಿಜ್ಬುಲ್ಲಾ ಯುದ್ಧಕ್ಕೆ ಪ್ರವೇಶಿಸಿದರೆ ಅಪಾಯ ಹೆಚ್ಚಾಗಬಹುದು. ಹಿಜ್ಬುಲ್ಲಾ ಬಳಿ ಅಂದಾಜು 1,50,000 ರಾಕೆಟ್‌ಗಳು ಮತ್ತು ಕ್ಷಿಪಣಿಗಳಿರುವುದೇ ಈ ಆತಂಕಕ್ಕೆ ಕಾರಣವಾಗಿದೆ.

ಇದಕ್ಕೆಷ್ಟು ಖರ್ಚಾಗುತ್ತದೆ?: ಟೆಲ್ ಅವೀವ್ ಥಿಂಕ್ ಟ್ಯಾಂಕ್ ಇನ್​ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್ ಪ್ರಕಾರ, ಪ್ರತಿ ಕ್ಷಿಪಣಿಯ ಬೆಲೆ ಅಂದಾಜು 40,000 ರಿಂದ 50,000 ಡಾಲರ್. ಯುಎಸ್ ಈ ವ್ಯವಸ್ಥೆಯಲ್ಲಿ ಭಾರಿ ಹೂಡಿಕೆ ಮಾಡಿದೆ. ಇದರ ನಿರ್ವಹಣೆಗೆ ಮತ್ತು ಇದಕ್ಕೆ ರಾಕೆಟ್ ಅಳವಡಿಸಲು ಅಮೆರಿಕ ಇಸ್ರೇಲ್​ಗೆ ನಿರಂತರವಾಗಿ ಸಹಾಯ ಮಾಡುತ್ತದೆ.

ಇಸ್ರೇಲ್​ಗೆ 14.3 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲು ಕಾಂಗ್ರೆಸ್ ಅನ್ನು ಕೋರುವುದಾಗಿ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದರಲ್ಲಿ ಹೆಚ್ಚಿನ ಸಹಾಯ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ ನೀಡಲಾಗುತ್ತಿದೆ ಎಂದು ಶ್ವೇತಭವನ ತಿಳಿಸಿದೆ. ಐರನ್ ಡೋಮ್ ಅನ್ನು ಮರುಪೂರಣ ಮಾಡಲು ಮದ್ದುಗುಂಡುಗಳು ಮತ್ತು ಇಂಟರ್​ಸೆಪ್ಟರ್​ಗಳು ಸೇರಿದಂತೆ ಮಿಲಿಟರಿ ಸಹಾಯವನ್ನು ಹೆಚ್ಚಿಸುತ್ತಿದ್ದೇವೆ ಎಂದು ಬೈಡನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.