ETV Bharat / science-and-technology

ವಿಶ್ವದ ಮೊದಲ ಮೆಸೆಜ್​ 'ಮೆರ್ರಿ ಕ್ರಿಸ್​ಮಸ್​'ಗೆ 30 ವರ್ಷ: ಯಾರು ಕಳುಹಿಸಿದ್ದು ಗೊತ್ತಾ?

ಮೊಬೈಲ್​ನಲ್ಲಿ ಟೈಪಿಸಿ ಕಳುಹಿಸಿದ ಮೊದಲ ಸಂದೇಶ ಯಾವುದು ಎಂಬುದು ನಿಮಗೆ ಗೊತ್ತೇ?. ಇದನ್ನು ಯಾರು, ಯಾರಿಗೆ ಕಳುಹಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

first-text-message-marks-30-years
ವಿಶ್ವದ ಮೊದಲ ಮೆಸೆಜ್​ 'ಮೆರ್ರಿ ಕ್ರಿಸ್​ಮಸ್​'ಗೆ 30 ವರ್ಷ
author img

By

Published : Dec 4, 2022, 12:46 PM IST

ಮೊಬೈಲ್​ ತಂತ್ರಜ್ಞಾನ ಇಂದು ವಿಪರೀತವಾಗಿ ಬೆಳೆದುನಿಂತಿದೆ. ಕ್ಷಣಮಾತ್ರದಲ್ಲಿ ನಾವು ಏನನ್ನು ಬೇಕಾದರೂ ಮೊಬೈಲ್ ಮೂಲಕ ಸಾಧಿಸಬಹುದಾಗಿದೆ. ವಾಟ್ಸ್​ಆ್ಯಪ್​ ಬಂದ ಮೇಲಂತೂ ಸಂದೇಶ ರವಾನೆ ಇನ್ನೂ ಸುಲಭವಾಗಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಯಾರು ಯಾರಿಗೆ ಮೆಸೆಜ್​ ಮಾಡಿದರು ಎಂಬುದು ಕುತೂಹಲಕಾರಿ ಅಂಶ. ಅಂದಹಾಗೆ ವಿಶ್ವದ ಮೊದಲ ಸಂದೇಶ ರವಾನೆಯಾಗಿ ಡಿಸೆಂಬರ್​ 3 ಕ್ಕೆ 30 ವರ್ಷ ಸಂದಿವೆ.

ವಿಶ್ವದ ಮೊದಲ ಮೆಸೆಜ್​ ಏನಾಗಿತ್ತು ಗೊತ್ತಾ?: 30 ವರ್ಷಗಳ ಹಿಂದೆ ಅಂದರೆ ಯುನೈಟೆಡ್ ಕಿಂಗ್‌ಡಮ್‌ನ ಬರ್ಕ್‌ಷೈರ್‌ನಲ್ಲಿ 1992 ರ ಡಿಸೆಂಬರ್ 3 ರಂದು ಮೊದಲ ಬಾರಿಗೆ ಎಸ್​ಎಂಎಸ್​(ಶಾರ್ಟ್​ ಮೆಸೆಜ್​ ಸರ್ವೀಸ್​) ಒಂದು ಇನ್ನೊಬ್ಬರಿಗೆ ತಲುಪಿತ್ತು. ಇದನ್ನು ವೊಡಾಫೋನ್​ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ನೀಲ್​ ಪಾಪ್​ವರ್ಥ್​ ಅವರು, ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ರಿಚರ್ಡ್​ ಜಾರ್ವಿಸ್​ಗೆ "ಮೆರ್ರಿ ಕ್ರಿಸ್​ಮಸ್​" ಎಂದು ಬರೆದ ಸಂದೇಶವನ್ನು ರವಾನಿಸಿದ್ದರು.

ಜಾರ್ವಿಸ್ ಕ್ರಿಸ್‌ಮಸ್ ಪಾರ್ಟಿಯಲ್ಲಿದ್ದ ಕಾರಣ, ಪಾಪ್‌ವರ್ಥ್​ಗೆ ಮರು ಉತ್ತರ ನೀಡಿರಲಿಲ್ಲ. ಮೆಸೆಜ್​ ರವಾನಿಸುವ ತಂತ್ರಜ್ಞಾನವನ್ನು ಪರೀಕ್ಷಿಸಲು ಪಾಪ್‌ವರ್ಥ್​ ಈ ಎಸ್​ಎಂಎಸ್​ ಮಾಡಿದ್ದರು. ಇದೇ ವಿಶ್ವದ ಮೊದಲ ಮೆಸೆಜ್​ ಆಗಿ ದಾಖಲಾಗಿದೆ.

ಮೆಸೆಜ್​ ಕಳುಹಿಸುವ ತಂತ್ರವನ್ನು 1980 ರ ದಶಕದಲ್ಲೇ ಕಂಡುಕೊಳ್ಳಲಾಗಿತ್ತು. 160 ಪದಗಳ ಸಾಲಿನ ಮೆಸೆಜ್​ ಅನ್ನು ಟೈಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅದನ್ನು ಮೊಬೈಲ್​ನಲ್ಲಿ ಅಳವಡಿಸಲು 10 ವರ್ಷಗಳೇ ಬೇಕಾಯಿತು. 1992 ರಲ್ಲಿ ಮೊದಲ ಬಾರಿಗೆ ಮೊಬೈಲ್​ ಮೂಲಕ ಮೆಸೆಜ್​ ಕಳುಹಿಸುವುದನ್ನು ಪರಿಚಯಿಸಲಾಯಿತು.

ಮೊದಲ ಮೆಸೆಜ್​ ಕಳುಹಿಸಿದ ಖ್ಯಾತಿಯ ನೀಲ್​ ಪಾಪ್​ವರ್ಥ್​ ಪ್ರಕಾರ, ಕ್ರಿಸ್​ಮಸ್​​ ವೇಳೆ ನಾನು ಕಳುಹಿಸಿದ "ಮೆರ್ರಿ ಕ್ರಿಸ್​ಮಸ್​" ಸಂದೇಶವೇ ಮೊದಲಾಗಿದೆ. ಇದನ್ನು ಅಂದೇ ನನ್ನ ಮಕ್ಕಳೊಂದಿಗೆ ಹಂಚಿಕೊಂಡಿದ್ದೆ. ಇಂದು ಮೆಸೆಜ್​ ತಂತ್ರಾಂಶ ಬಹುವಾಗಿ ಬೆಳೆದು ವ್ಯಾಪಿಸಿದೆ. ಅಕ್ಷರಗಳ ಜಾಗದಲ್ಲಿ ಇಮೋಜಿಗಳು ಬಂದಿದ್ದು ಕಂಡರೆ ಆಶ್ಚರ್ಯವಾಗುತ್ತದೆ. ಈ ಅಂಶ ಇಷ್ಟೊಂದು ವ್ಯಾಪಿಸುತ್ತದೆ ಎಂಬುದನ್ನು ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಚಿನ್ನದ ಎಟಿಎಂ: ನೀವು ಯಾವಾಗ ಬೇಕಾದ್ರೂ ಚಿನ್ನ ಡ್ರಾ ಮಾಡಬಹುದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.