ETV Bharat / science-and-technology

ಕೋವಿಡ್​ -19 ವೈರಸ್ ಪ್ರಯೋಗಾಲಯದಿಂದಲೇ ಹರಡಿದೆ: ಅಮೆರಿಕ ಇಂಧನ ಇಲಾಖೆ - ಯೋಗಾಲಯದಿಂದಲೇ ಸೋರಿಕೆಯಾಗಿದೆ

ಕೋವಿಡ್ 19 ವೈರಸ್ ಯಾವುದೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ ಎಂದು ಅಮೆರಿಕದ ಇಂಧನ ಇಲಾಖೆ ಹೇಳಿದೆ. ಆದಾಗ್ಯೂ ಕೋವಿಡ್​ ಮೂಲದ ಬಗ್ಗೆ ಈಗಲೂ ವಿಶ್ವಸಮುದಾಯದಲ್ಲಿ ಯಾವುದೇ ಸ್ಪಷ್ಟತೆ ಮೂಡಿಲ್ಲ.

Covid-19 pandemic a result of lab leak: US agency

author img

By

Published : Feb 27, 2023, 12:37 PM IST

ವಾಷಿಂಗ್ಟನ್( ಅಮೆರಿಕ) : ಚೀನಾದ ಪ್ರಯೋಗಾಲಯದಿಂದಲೇ ಕೋವಿಡ್ -19 ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕ ಇಂಧನ ಇಲಾಖೆಯ ವರದಿ ತಿಳಿಸಿದೆ. ಈ ಕುರಿತಾದ ರಹಸ್ಯ ಗುಪ್ತಚರ ವರದಿಯನ್ನು (classified intelligence report) ಇತ್ತೀಚೆಗೆ ಶ್ವೇತಭವನ ಮತ್ತು ಕಾಂಗ್ರೆಸ್‌ನ ಪ್ರಮುಖ ಸದಸ್ಯರಿಗೆ ಒದಗಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್ ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ವಿಭಿನ್ನ ಗುಪ್ತಚರ ಸಂಸ್ಥೆಗಳು ಹೇಗೆ ವಿಭಿನ್ನ ತೀರ್ಪುಗಳನ್ನು ನೀಡಿವೆ ಎಂಬುದನ್ನು ಇದರಲ್ಲಿ ಎತ್ತಿ ತೋರಿಸಲಾಗಿದೆ.

ವರ್ಗೀಕೃತ ವರದಿಯನ್ನು ಓದಿದ ಜನರ ಪ್ರಕಾರ, ಇಂಧನ ಇಲಾಖೆಯು ಕಡಿಮೆ ವಿಶ್ವಾಸದಿಂದ ತನ್ನ ತೀರ್ಪು ನೀಡಿದೆ ಎನ್ನಲಾಗಿದೆ. ಪ್ರಯೋಗಾಲಯದಿಂದಲೇ ಕೋವಿಡ್ -19 ವೈರಸ್ ಸೋರಿಕೆಯಾಗಿದೆ ಎಂಬ ವಾದವನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ಹಲವಾರು ಏಜೆನ್ಸಿಗಳು ಒಪ್ಪುತ್ತವೆ. ಕೋವಿಡ್​ ವೈರಸ್​ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು 2021 ರಲ್ಲಿ ಇಂಧನ ಇಲಾಖೆ ತೀರ್ಮಾನಕ್ಕೆ ಬಂದಿತ್ತು ಮತ್ತು ಇಲಾಖೆ ಈವರೆಗೂ ಅದೇ ದೃಷ್ಟಿಕೋನವನ್ನು ಹೊಂದಿದೆ.

ನೈಸರ್ಗಿಕವಾಗಿ ಹರಡಿದೆ ಎಂದು ನಾಲ್ಕು ಏಜೆನ್ಸಿಗಳ ಹೇಳಿಕೆ: ಆದಾಗ್ಯೂ ರಾಷ್ಟ್ರೀಯ ಗುಪ್ತಚರ ಸಮಿತಿಯೊಂದಿಗೆ ಇತರ ನಾಲ್ಕು ಏಜೆನ್ಸಿಗಳು ಇದು ನೈಸರ್ಗಿಕವಾಗಿ ಹರಡಿದೆ ಎಂದು ಅಭಿಪ್ರಾಯಪಟ್ಟಿವೆ ಮತ್ತು ಇದರ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಎರಡು ಏಜೆನ್ಸಿಗಳು ಹೇಳಿವೆ. ದೇಶದ ಅಧ್ಯಕ್ಷರ ನಿರ್ದೇಶನದಂತೆ ಕೋವಿಡ್ -19 ರ ಮೂಲವನ್ನು ತನಿಖೆ ಮಾಡುವಲ್ಲಿ ನಮ್ಮ ಗುಪ್ತಚರ ವೃತ್ತಿಪರರ ಸಂಪೂರ್ಣ, ಎಚ್ಚರಿಕೆಯ ಮತ್ತು ವಸ್ತುನಿಷ್ಠ ಕೆಲಸವನ್ನು ಬೆಂಬಲಿಸುವುದನ್ನು ಮುಂದುವರೆಸಿದೆ ಎಂದು ಇಂಧನ ಇಲಾಖೆ ವಕ್ತಾರರು ಉಲ್ಲೇಖಿಸಿದ್ದಾರೆ. ಆದಾಗ್ಯೂ ತನ್ನ ಮೌಲ್ಯಮಾಪನದ ವಿವರಗಳನ್ನು ಚರ್ಚಿಸಲು ಸಂಸ್ಥೆ ನಿರಾಕರಿಸಿದೆ ಎಂದು ವರದಿ ತಿಳಿಸಿದೆ.

ವಸ್ತುನಿಷ್ಠವಾಗಿ ಮರು ಪರಿಶೀಲಿಸಲು ಸಿದ್ದ: ತಮ್ಮ ಪೂರ್ವಗ್ರಹಿಕೆಗಳನ್ನು ಬದಿಗಿರಿಸಿ ಮತ್ತು ಕೋವಿಡ್ ಮೂಲದ ಬಗ್ಗೆ ನಮಗೆ ತಿಳಿದಿರುವ ಮತ್ತು ತಿಳಿದಿಲ್ಲದಿರುವುದನ್ನು ವಸ್ತುನಿಷ್ಠವಾಗಿ ಮರುಪರಿಶೀಲಿಸಲು ಸಿದ್ಧರಿರುವವರಿಗೆ ಅಭಿನಂದನೆಗಳು ಎಂದು ಹೊಸ ಸಂಶೋಧನೆಗಳ ನಿರ್ಣಯಗಳನ್ನು ಸ್ವಾಗತಿಸಿದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿಸ್ಟ್ ಡೇವಿಡ್ ರೆಲ್ಮನ್ ಹೇಳಿದರು. ನಾವು ಅಪೂರ್ಣ ಉತ್ತರವನ್ನು ಸ್ವೀಕರಿಸಬಾರದು ಅಥವಾ ರಾಜಕೀಯ ಲಾಭಕ್ಕಾಗಿ ಇದರ ಹುಡುಕಾಟವನ್ನು ಬಿಟ್ಟುಕೊಡಬಾರದು ಎಂಬುದು ನನ್ನ ಮನವಿ ಎಂದು ರೆಲ್ಮನ್ ತಿಳಿಸಿದರು.

ಅಮೆರಿಕದ 2021 ರ ಗುಪ್ತಚರ ವರದಿಯ ಪ್ರಕಾರ, ಕೋವಿಡ್ -19 ವೈರಸ್ ಮೊದಲು ಚೀನಾದ ವುಹಾನ್‌ನಲ್ಲಿ ನವೆಂಬರ್ 2019 ರ ನಂತರ ಹರಡಿತು. ಆದರೆ, ಕೋವಿಡ್ ಸಾಂಕ್ರಾಮಿಕ ಹರಡಿ ಎರಡು ವರ್ಷಗಳ ನಂತರವೂ ಕೋವಿಡ್ -19 ನ ಮೂಲವು ಸ್ಪಷ್ಟವಾಗಿಲ್ಲ. ಕೊರೊನಾವೈರಸ್ ಮೊಟ್ಟಮೊದಲಿಗೆ ಬಾವಲಿಗಳಿಂದ ಮನುಷ್ಯರಿಗೆ ಹರಡಿದೆ ಎಂಬ ವಿಷಯವು ಜಾಗತಿಕವಾಗಿ ವಿಜ್ಞಾನಿಗಳು ಮತ್ತು ರಾಜಕಾರಣಿಗಳ ವಲಯದಲ್ಲಿ ಈಗಲೂ ಚರ್ಚೆಯಾಗುತ್ತಿದೆ.

ಇನ್ನು ಕೊರೊನಾವೈರಸ್ ಮೂಲದ ಬಗ್ಗೆ ತನ್ನ ದೇಶದಲ್ಲಿ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ತಡೆ ಒಡ್ಡಿದೆ. ಕೊರೊನಾವೈಸರ್​ ಪ್ರಯೋಗಾಲಯದಿಂದ ಲೀಕ್ ಆಗಿದೆ ಎಂಬ ವಾದವನ್ನು ಚೀನಾ ತಿರಸ್ಕರಿಸಿದ್ದು, ಈ ವೈರಸ್ ಚೀನಾ ದೇಶದ ಹೊರಗಿನಿಂದ ಹರಡಿದೆ ಎಂದು ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ: ಅಮೆರಿಕದ ಶೇ 85 ಕೋವಿಡ್​ ಪ್ರಕರಣಗಳಿಗೆ ಕಾರಣವಾಗುತ್ತಿದೆ ಓಮ್ರಿಕಾನ್​ ಉಪತಳಿ​ XBB1.5

ETV Bharat Logo

Copyright © 2025 Ushodaya Enterprises Pvt. Ltd., All Rights Reserved.