ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಮೈಕ್ರೋಸಾಫ್ಟ್ ಇನ್ನು ಮುಂದೆ Xbox One ಕನ್ಸೋಲ್‌ಗಳಿಗಾಗಿ ಹೊಸ ಗೇಮ್ಗಳನ್ನು ತಯಾರಿಸುವುದಿಲ್ಲ ಎಂದು ಹೇಳಿದೆ. ಪ್ರಸ್ತುತ ಹಾರ್ಡ್‌ವೇರ್ ಸೈಕಲ್ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಮೈಕ್ರೋಸಾಫ್ಟ್‌ನ ಗೇಮ್ ಸ್ಟುಡಿಯೋ ಮುಖ್ಯಸ್ಥ ಮ್ಯಾಟ್ ಬೂಟಿ, ನಾವು Gen 9 ಗೆ ಸಾಗಿದ್ದೇವೆ ಎಂದಿದ್ದಾರೆ. Minecraft ನಂಥ ಪ್ರಸ್ತುತ ನಡೆಯುತ್ತಿರುವ ಗೇಮ್ಗಳಿಗೆ ಬೆಂಬಲ ನೀಡುವುದನ್ನು ಹೊರತುಪಡಿಸಿ ಹಳೆಯ ತಲೆಮಾರಿನ ಕನ್ಸೋಲ್‌ಗಳಿಗಾಗಿ ಯಾವುದೇ ಆಂತರಿಕ ತಂಡಗಳು ಈಗ ಗೇಮ್ ತಯಾರಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
Xbox One Gen 8 ಬಳಕೆದಾರರು ತನ್ನ ಸ್ಟ್ರೀಮಿಂಗ್ ಕ್ಲೌಡ್ ತಂತ್ರಜ್ಞಾನದ ಮೂಲಕ Gen 9 ಮೈಕ್ರೋಸಾಫ್ಟ್ ಆಟಗಳನ್ನು ಆಡಬಹುದು. ಈ ರೀತಿಯಲ್ಲಿ ನಾವು ಬೆಂಬಲವನ್ನು ಮುಂದುವರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಈ ವರ್ಷದ ಏಪ್ರಿಲ್‌ನಲ್ಲಿ ಕಂಪನಿಯು Xbox ಸಿರೀಸ್ X ಮತ್ತು ಸಿರೀಸ್ S ನಲ್ಲಿ ಆಟದ ಎಮ್ಯುಲೇಶನ್‌ಗಳನ್ನು ಚಲಾಯಿಸದಂತೆ ಬಳಕೆದಾರರನ್ನು ನಿರ್ಬಂಧಿಸಿದೆ.
ಏತನ್ಮಧ್ಯೆ, ಕಳೆದ ತಿಂಗಳು ಕಂಪನಿಯು ಎಕ್ಸ್‌ಬಾಕ್ಸ್ ಗೇಮ್ ಪಾಸ್‌ನ ಹೊಸ ಫ್ರೆಂಡ್ ರೆಫರಲ್ ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಇದು ಗೇಮ್ ಪಾಸ್ ಅಲ್ಟಿಮೇಟ್ ಮತ್ತು ಪಿಸಿ ಗೇಮ್ ಪಾಸ್ ಸದಸ್ಯರು ತಮ್ಮ ಐವರು ಸ್ನೇಹಿತರಿಗೆ ಉಚಿತ 14-ದಿನದ ಪಿಸಿ ಗೇಮ್ ಪಾಸ್ ನೀಡಲು ಅವಕಾಶ ಮಾಡಿ ಕೊಡುತ್ತದೆ. ಆದಾಗ್ಯೂ ಉಚಿತ ಗೇಮಿಂಗ್ ಪ್ರಯೋಜನವನ್ನು ರಿಡೀಮ್ ಮಾಡಲು ಆಹ್ವಾನಿಸಿದ ಸ್ನೇಹಿತರು ಗೇಮ್ ಪಾಸ್‌ಗೆ ಹೊಸಬರಾಗಿರಬೇಕು.
Xbox One ಇದು ಮೈಕ್ರೋಸಾಫ್ಟ್‌ನ 8 ನೇ ತಲೆಮಾರಿನ ವೀಡಿಯೊ ಗೇಮ್ ಕನ್ಸೋಲ್ ಆಗಿದೆ ಮತ್ತು ಮೂಲ Xbox ಮತ್ತು Xbox 360 ನ ಮುಂದಿನ ಹಂತವಾಗಿದೆ. ಇದನ್ನು ನವೆಂಬರ್ 22, 2013 ರಂದು ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ, ಮೆಕ್ಸಿಕೋ, ನ್ಯೂಜಿಲೆಂಡ್, ಸ್ಪೇನ್, ಯುಕೆ ಮತ್ತು ಯುಎಸ್ಎ ಗಳಲ್ಲಿ ಬಿಡುಗಡೆ ಮಾಡಲಾಯಿತು. ಮೈಕ್ರೋಸಾಫ್ಟ್ ಅಧಿಕೃತವಾಗಿ Xbox One ಯುನಿಟ್ಗಳ ಉತ್ಪಾದನೆಯನ್ನು 2020 ರ ಕೊನೆಯಲ್ಲಿ ಸ್ಥಗಿತಗೊಳಿಸಿತು.
ಎಕ್ಸ್ ಬಾಕ್ಸ್ ಒನ್ ಅನುಭವದ ಪ್ರಮುಖ ಭಾಗವೆಂದರೆ ಎಕ್ಸ್ ಬಾಕ್ಸ್ ನೆಟ್ ವರ್ಕ್. ನಿಮ್ಮ ಸಿಸ್ಟಮ್ ಅನ್ನು ಆನ್‌ಲೈನ್‌ನಲ್ಲಿ ಎಕ್ಸ್‌ಬಾಕ್ಸ್ ನೆಟ್‌ವರ್ಕ್‌ಗೆ ಸಂಪರ್ಕಿಸುವುದರಿಂದ ಗೇಮ್ ಡೌನ್‌ಲೋಡ್‌ಗಳನ್ನು ಖರೀದಿಸಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು, ರೆಕಾರ್ಡ್ ಮಾಡಿದ ಗೇಮ್‌ಪ್ಲೇ ವೀಡಿಯೊಗಳನ್ನು ಹಂಚಿಕೊಳ್ಳಲು, ಸ್ಕೈಪ್ ಬಳಸಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಲು, ನಿಮ್ಮ ಸ್ನೇಹಿತರು, ಸಾಧನೆಗಳು ಮತ್ತು ಆಟದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ನಿಮಗೆ ಅವಕಾಶ ನೀಡುತ್ತದೆ. ನೀವು ಇತರ ಜನರೊಂದಿಗೆ ಆನ್‌ಲೈನ್‌ನಲ್ಲಿ ಮಲ್ಟಿಪ್ಲೇಯರ್ ಆಟಗಳನ್ನು ಕೂಡ ಇದರಲ್ಲಿ ಆಡಬಹುದು.
ಇದನ್ನೂ ಓದಿ : Mobile Gaming: ವಿಶ್ವದ ಅತಿದೊಡ್ಡ ಮೊಬೈಲ್ ಗೇಮಿಂಗ್ ರಾಷ್ಟ್ರ ಭಾರತ: ಮಹಿಳೆಯರೇ ಮುಂಚೂಣಿಯಲ್ಲಿ!