ETV Bharat / science-and-technology

ವಾಟ್ಸ್​ಆ್ಯಪ್​ನಲ್ಲೂ ಕಾಣಿಸಲಿವೆ ಜಾಹೀರಾತು; ಆದರೆ ಮೇನ್ ಬಾಕ್ಸ್​ನಲ್ಲಿ ಅಲ್ಲ! - ಸ್ಟೋರೀಸ್​ ಮತ್ತು ಚಾನೆಲ್​ಗಳಲ್ಲಿ ಜಾಹೀರಾತುಗಳು

ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳಬಹುದು ಎಂದು ಕಂಪನಿಯ ಮುಖ್ಯಸ್ಥರು ಹೇಳಿದ್ದಾರೆ.

WhatsApp could introduce ads in Status and Channels: Report

author img

By ETV Bharat Karnataka Team

Published : Nov 8, 2023, 12:37 PM IST

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್​ಆ್ಯಪ್​ನಲ್ಲೂ ಇನ್ನು ಮುಂದೆ ಜಾಹೀರಾತುಗಳು ಕಾಣಿಸುವ ಸಾಧ್ಯತೆಗಳಿವೆ. ಸ್ಟೋರೀಸ್​ ಮತ್ತು ಚಾನೆಲ್​ಗಳಲ್ಲಿ ಜಾಹೀರಾತುಗಳು ಕಾಣಿಸಬಹುದು, ಆದರೆ ಮೇನ್​ ಬಾಕ್ಸ್​ನಲ್ಲಿ ಯಾವುದೇ ಜಾಹೀರಾತು ತೋರಿಸುವುದಿಲ್ಲ ಎಂದು ವಾಟ್ಸ್​ಆ್ಯಪ್​ ಮುಖ್ಯಸ್ಥ ವಿಲ್ ಕ್ಯಾಥ್​ಕಾರ್ಟ್ ಹೇಳಿದ್ದಾರೆ. ಬ್ರೆಜಿಲ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿಲ್ ಕ್ಯಾಥ್ಕಾರ್ಟ್, ಕಂಪನಿಯು ನಿಮ್ಮ ಮುಖ್ಯ ಚಾಟ್​ನಲ್ಲಿ ಯಾವುದೇ ಜಾಹೀರಾತುಗಳನ್ನು ತೋರಿಸಲು ಯೋಜಿಸುತ್ತಿಲ್ಲ, ಆದರೆ ಇತರ ಸ್ಥಳಗಳಲ್ಲಿ ಜಾಹೀರಾತುಗಳನ್ನು ತೋರಿಸಬಹುದು ಎಂದು ಹೇಳಿದ್ದಾರೆ.

ಕಂಪನಿಯು ಪ್ರಸ್ತುತ ಯಾವುದೇ ದೇಶದಲ್ಲಿ ಸ್ಟೇಟಸ್ ಜಾಹೀರಾತು ವೈಶಿಷ್ಟ್ಯವನ್ನು ಟೆಸ್ಟ್​ ಮಾಡುತ್ತಿಲ್ಲ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ. ಮಾರ್ಕ್ ಜುಕರ್​ಬರ್ಗ್ ನೇತೃತ್ವದ ಕಂಪನಿಯಾಗಿರುವ ವಾಟ್ಸ್​ಆ್ಯಪ್ ತನ್ನಲ್ಲಿ ಜಾಹೀರಾತು ತೋರಿಸುವ ವರದಿಗಳನ್ನು ಸೆಪ್ಟೆಂಬರ್​ನಲ್ಲಿ ನಿರಾಕರಿಸಿತ್ತು. ವಾಟ್ಸ್​ಆ್ಯಪ್​ ಜಾಗತಿಕವಾಗಿ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಭಾರತದಲ್ಲೇ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿದ್ದಾರೆ.

ವಾಟ್ಸ್​ಆ್ಯಪ್ ಈ ಹಿಂದೆ ಸ್ಟೇಟಸ್​ನಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವ ವೈಶಿಷ್ಟ್ಯವನ್ನು ಸಿದ್ಧಪಡಿಸಿತ್ತು. ಆದರೆ ಅದನ್ನು ಜಾರಿ ಮಾಡಲಿಲ್ಲ. ಈಗ ಕೊನೆಗೂ ವಾಟ್ಸ್​ಆ್ಯಪ್ ಮುಖ್ಯಸ್ಥರೇ ಇದರ ಬಗ್ಗೆ ಮಾತನಾಡಿರುವುದರಿಂದ ಜಾಹೀರಾತುಗಳು ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ. ಫೇಸ್​ಬುಕ್ ಸಂಸ್ಥಾಪಕ ಜುಕರ್​ಬರ್ಗ್ 2014 ರಲ್ಲಿ ವಾಟ್ಸ್​ಆ್ಯಪ್ ಅನ್ನು 19 ಬಿಲಿಯನ್ ಡಾಲರ್​ಗೆ ಖರೀದಿಸಿದ್ದರು.

2012 ರಲ್ಲಿ ಫೇಸ್​ಬುಕ್ ಸುಮಾರು 1 ಬಿಲಿಯನ್ ಡಾಲರ್ ನೀಡಿ ಇನ್​ಸ್ಟಾಗ್ರಾಮ್ ಅನ್ನು ಖರೀದಿಸಿತ್ತು. ಇನ್​​ಸ್ಟಾಗ್ರಾಮ್​ನಲ್ಲಿ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಆದರೆ ಈವರೆಗೂ ವಾಟ್ಸ್​ಆ್ಯಪ್ ಮಾತ್ರ ಜಾಹೀರಾತುಗಳಿಲ್ಲದೆಯೇ ಮುಂದುವರೆದಿದೆ. ವಾಟ್ಸ್​ಆ್ಯಪ್ ಇದು ಉಚಿತವಾಗಿ ಡೌನ್​ಲೋಡ್ ಮಾಡಿ ಸ್ಮಾರ್ಟ್​ಫೋನ್​ಗಳಲ್ಲಿ ಬಳಸುವ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಇದನ್ನು ಬಳಸಲು ನಿಮಗೆ ಸಿಮ್ ಕಾರ್ಡ್, ಇಂಟರ್ನೆಟ್ ಸಂಪರ್ಕ ಮತ್ತು ಫೋನ್ ಸಂಖ್ಯೆಯೊಂದಿಗೆ ಹೊಂದಿಕೆಯಾಗುವ ಸ್ಮಾರ್ಟ್​ಫೋನ್ ಅಥವಾ ಟ್ಯಾಬ್ಲೆಟ್ ಬೇಕಾಗುತ್ತದೆ.

ಇಂಟರ್​ನೆಟ್​ ಸಂಪರ್ಕದ ಮೂಲಕ ನೀವು ಇದರಲ್ಲಿ ಚಿತ್ರಗಳು, ವೀಡಿಯೊಗಳ ಮತ್ತು ಡಾಕ್ಯುಮೆಂಟ್​ಗಳನ್ನು ಕಳುಹಿಸಬಹುದು. ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಲೋಕೆಶನ್ ಮಾಹಿತಿಯನ್ನು ನೈಜ ಸಮಯದಲ್ಲಿ ಸಂದೇಶಗಳ ಮೂಲಕ ಹಂಚಿಕೊಳ್ಳಬಹುದು. ಗ್ರೂಪ್ ಚಾಟ್​ಗಳಲ್ಲಿ ಬಹಳಷ್ಟು ಜನರಿಗೆ ತ್ವರಿತವಾಗಿ ಸಂದೇಶಗಳನ್ನು ಕಳುಹಿಸಬಹುದು. ಮಾಜಿ ಯಾಹೂ ಉದ್ಯೋಗಿಗಳು 2009 ರಲ್ಲಿ ಸ್ಥಾಪಿಸಿದ ಇದು ಸಣ್ಣ ಸ್ಟಾರ್ಟ್ಅಪ್ ಆಗಿ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ 2,50,000 ಬಳಕೆದಾರರನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: 24 ಗಂಟೆಗಳಲ್ಲಿ ಡೀಪ್​ಫೇಕ್ ಕಂಟೆಂಟ್​ ತೆಗೆದುಹಾಕಿ; ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದ ನಿರ್ದೇಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.