ETV Bharat / science-and-technology

ಮೆಟಾದಲ್ಲಿ ಜನಾಂಗೀಯ ತಾರತಮ್ಯ ಆರೋಪ: ಭಾರತೀಯ ಮೂಲದ ಉದ್ಯೋಗಿಯಿಂದ ಮೊಕದ್ದಮೆ

author img

By

Published : Jul 12, 2023, 7:53 PM IST

ಮೆಟಾದಲ್ಲಿ ತಮ್ಮ ವಿರುದ್ಧ ಜನಾಂಗೀಯ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಮೆಟಾದ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಮೊಕದ್ದಮೆ ಹೂಡಿದ್ದಾರೆ.

Indian-origin techie accuses Meta of anti-Asian bias, files lawsuit

ನ್ಯೂಯಾರ್ಕ್ (ಅಮೆರಿಕ) : ಫೇಸ್​ಬುಕ್ ಒಡೆತನ ಹೊಂದಿರುವ ಕಂಪನಿ ಮೆಟಾ ಜನಾಂಗೀಯ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಸಿಂಗಾಪುರದ ಭಾರತೀಯ ಮೂಲದ ಮಹಿಳಾ ಎಂಜಿನಿಯರ್ ಒಬ್ಬರು ಕ್ಯಾಲಿಫೋರ್ನಿಯಾದ ನಾಗರಿಕ ಹಕ್ಕುಗಳ ಇಲಾಖೆಯಲ್ಲಿ ಮೊಕದ್ದಮೆ ಹೂಡಿದ್ದಾರೆ. ಜನಾಂಗೀಯ ತಾರತಮ್ಯದ ಕಾರಣದಿಂದ ತಾನು ಬಡ್ತಿ ಮತ್ತು ಕೆಲಸದ ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.

ಡಿಸ್ನಿ, ಗೂಗಲ್ ಮತ್ತು ಟ್ವಿಟರ್‌ನಲ್ಲಿ ಕೆಲಸ ಮಾಡಿದ ನಂತರ ಜನವರಿ 2020 ರಲ್ಲಿ ಮೆಟಾಗೆ ಸೇರಿದ 36 ವರ್ಷದ ವೈಷ್ಣವಿ ಜಯಕುಮಾರ್, ಮೆಟಾದಲ್ಲಿ ಬಡ್ತಿ ಕೇಳಿದ್ದಕ್ಕಾಗಿ ತಮಗೆ ಶಿಕ್ಷೆ ನೀಡಲಾಗಿದೆ ಮತ್ತು ತಮಗಿಂತ ಕಡಿಮೆ ಅನುಭವಿ ಸಹೋದ್ಯೋಗಿಗಳ ಅಡಿ ಕೆಲಸ ಮಾಡುವಂತೆ ಮಾಡಲಾಯಿತು ಎಂದು ಹೇಳಿದ್ದಾರೆ.

"ಏಷ್ಯನ್ ಮಹಿಳೆಯಾಗಿ ನಾನು ಉದ್ಯೋಗಿಯಾಗಲು ಉದ್ದೇಶಿಸಿದ್ದೆ, ಆದರೆ ನಾಯಕಿಯಾಗಲು ಉದ್ದೇಶಿಸಿಲ್ಲ" ಎಂದು ಜಯಕುಮಾರ್ ಇತ್ತೀಚಿನ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಮೆಟಾದಲ್ಲಿ ನಡೆದ ಸಾಮೂಹಿಕ ವಜಾ ಪ್ರಕ್ರಿಯೆಯಲ್ಲಿ ತಮ್ಮನ್ನು ಪ್ರತೀಕಾರದ ಕ್ರಮವಾಗಿ ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೆಟಾದಲ್ಲಿ ಯುವ ನೀತಿಯ (youth policy) ಮುಖ್ಯಸ್ಥರಾಗಿ ವೈಷ್ಣವಿ ಜಯಕುಮಾರ್ ಅವರು ಮೆಟಾದ ಎಲ್ಲ ಅಪ್ಲಿಕೇಶನ್‌ಗಳಾದ್ಯಂತ ವಯಸ್ಸಿಗೆ ಸೂಕ್ತವಾದ ನೀತಿಗಳು ಮತ್ತು ಉತ್ಪನ್ನ ವೈಶಿಷ್ಟ್ಯಗಳ ಕುರಿತು ಮಾರ್ಗದರ್ಶನ ನೀಡುವ ತಂಡವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು.

"ಮೊದಲ ಎರಡು ವರ್ಷಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಇನ್​ಸ್ಟಾಗ್ರಾಮ್ ಮತ್ತು ಇತರ ಮೆಟಾ ಸೇವೆಗಳಲ್ಲಿ ಯುವಕರ ಯೋಗಕ್ಷೇಮವನ್ನು ಸುಧಾರಿಸಲು ನಾನು ನನ್ನ ಸಹೋದ್ಯೋಗಿಗಳೊಂದಿಗೆ ಶ್ರಮಿಸಿದ್ದೇನೆ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದೇನೆ" ಎಂದು ವೈಷ್ಣವಿ ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಎರಡು ವರ್ಷಗಳ ನಂತರ ತನಗೆ ಬಡ್ತಿ ನೀಡುವ ಬಗ್ಗೆ ಕೇಳಿದಾಗ ಏಷ್ಯನ್-ಅಮೆರಿಕನ್ನರು ಎದುರಿಸುವ ಅಡ್ಡಿಯನ್ನು ಎದುರಿಸಿದೆ ಎಂದು ಅವರು ಹೇಳಿದ್ದಾರೆ.

ವೈಷ್ಣವಿ ಪ್ರಕಾರ, ಆಕೆಯ ಮ್ಯಾನೇಜರ್ ಇದ್ದಕ್ಕಿದ್ದಂತೆ ಜನಾಂಗೀಯ ದೃಷ್ಟಿಕೋನದ ನಕಾರಾತ್ಮಕ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದರು. ವೈಷ್ಣವಿಯವರು ಮೇಲಿನ ಸ್ಥಾನಕ್ಕೆ ಏರಲು ಸಾಕಷ್ಟು ಹಿರಿತನ ಹೊಂದಿಲ್ಲ ಎಂದು ಹೇಳಲಾರಂಭಿಸಿದರು. ತಾವು ಇತರ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರುವುದಾಗಿ ಹೇಳಿದರೂ ಕೂಡ ವೈಷ್ಣವಿ ಅವರ ಮಾತನ್ನು ಕಡೆಗಣಿಸಲಾಯಿತು.

ಜಯಕುಮಾರ್ ಅವರ ದೂರಿನಲ್ಲಿ ಏಷ್ಯನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ವೃತ್ತಿಪರರ ನೆಟ್‌ವರ್ಕ್ ಅಸೆಂಡ್‌ನ 2022 ರ ಅಧ್ಯಯನವನ್ನು ಉಲ್ಲೇಖಿಸಲಾಗಿದೆ. ಮೆಟಾದ ಉದ್ಯೋಗಿಗಳ ಪೈಕಿ ಶೇಕಡಾ 49 ರಷ್ಟು ಏಷ್ಯನ್ ಮೂಲದವರಾಗಿದ್ದಾರೆ. ಆದರೆ, ಅದರ ಕಾರ್ಯನಿರ್ವಾಹಕ ಸಿಬ್ಬಂದಿಯಲ್ಲಿ ಶೇಕಡಾ 25 ರಷ್ಟು ಮಾತ್ರ ಏಷ್ಯನ್ನರು ಎಂದು ಈ ವರದಿ ಹೇಳಿದೆ.

ಮೆಟಾ 2022 ರ ಕೊನೆಯಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ನಂತರ ಈ ವರ್ಷದ ಮಾರ್ಚ್‌ನಲ್ಲಿ ಮತ್ತೊಂದು ಸುತ್ತಿನ ಸಾಮೂಹಿಕ ವಜಾಗಳಲ್ಲಿ ಮತ್ತೆ 10,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಸಿಲಿಕಾನ್ ವ್ಯಾಲಿಯಲ್ಲಿ ದೀರ್ಘಕಾಲದ ಜನಾಂಗೀಯ ಪೂರ್ವಾಗ್ರಹದ ವಿರುದ್ಧ ಕ್ರಮಕ್ಕಾಗಿ ಟೆಕ್ ಉದ್ಯಮದಲ್ಲಿ ಏಷ್ಯನ್ ಅಮೆರಿಕನ್ನರು ಸಲ್ಲಿಸುತ್ತಿರುವ ಮೊಕದ್ದಮೆಗಳ ಪೈಕಿ ವೈಷ್ಣವಿ ಜಯಕುಮಾರ್ ಅವರ ದೂರು ಕೂಡ ಒಂದಾಗಿದೆ.

ಇದನ್ನೂ ಓದಿ : ISRO: ಖಾಸಗಿ ಕಂಪನಿಗಳಿಗೆ SSLV ರಾಕೆಟ್​ ತಂತ್ರಜ್ಞಾನ ನೀಡಲಿದೆ ಇಸ್ರೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.