ETV Bharat / lifestyle

ದೀಪಾವಳಿಗೂ ಮುನ್ನವೇ Jio Phone Next ಮಾರುಕಟ್ಟೆಗೆ..! - ಜಿಯೋ

ಜಿಯೋ ಮತ್ತು ಗೂಗಲ್ ಜಂಟಿಯಾಗಿ ವಿನ್ಯಾಸಗೊಳಿಸಿರುವ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ ‘ಜಿಯೋಫೋನ್ ನೆಕ್ಸ್ಟ್’ (JioPhone Next) ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

JioPhone
JioPhone
author img

By

Published : Sep 10, 2021, 8:13 AM IST

ಮುಂಬೈ: ಜಿಯೋ ಮತ್ತು ಗೂಗಲ್ ಜಂಟಿಯಾಗಿ ವಿನ್ಯಾಸಗೊಳಿಸಿರುವ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ ‘ಜಿಯೋಫೋನ್ ನೆಕ್ಸ್ಟ್’ (JioPhone Next) ಅನ್ನು ದೀಪಾವಳಿಗೂ ಮುನ್ನವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿವೆ

ಇದು ಆಂಡ್ರಾಯ್ಡ್(Android) ಮತ್ತು ಪ್ಲೇ ಸ್ಟೋರ್(Play Store)ನ್ನೊಳಗೊಂಡಿರುವ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಡಿವೈಸ್ ಮತ್ತು ಆಪರೇಟಿಂಗ್ ಸಿಸ್ಟಮ್ ಪ್ರೀಮಿಯಂ ಸಾಮರ್ಥ್ಯ ಹೊಂದಿರುವ ಈ ಫೋನ್​, ಇತರ ಸ್ಮಾರ್ಟ್​ಫೋನ್​ಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ವಾಯ್ಸ್​ ಫಸ್ಟ್​ ಫೀಚರ್ಸ್ ಸೇರಿದಂತೆ ಅನೇಕ ಆಯ್ಕೆಗಳನ್ನು ಸೇರಿಸಲಾಗಿದೆ. ಇತ್ತೀಚಿನ ಆಂಡ್ರಾಯ್ಡ್ ಫೀಚರ್ಸ್ ಮತ್ತು ಸುರಕ್ಷತಾ ಅಪ್‌ಡೇಟ್‌ಗಳಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡೂ ಕಂಪನಿಗಳು ಮತ್ತಷ್ಟು ಪರಿಷ್ಕರಣೆಗಾಗಿ ಸೀಮಿತ ಬಳಕೆದಾರರೊಂದಿಗೆ ಜಿಯೋಫೋನ್ ನೆಕ್ಸ್ಟ್ ಅನ್ನು ಪರೀಕ್ಷಿಸಲು ಆರಂಭಿಸಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ಫೋನ್​ ಹೆಚ್ಚು ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.

ಇದನ್ನೂ ಓದಿ: 'ಅತ್ಯುತ್ತಮ ಸಂಶೋಧನಾ ಸಂಸ್ಥೆ' ಪಟ್ಟ ಪಡೆದ IISc ಬೆಂಗಳೂರು..

ಈ ಹೆಚ್ಚುವರಿ ಸಮಯವು ಪ್ರಸ್ತುತ ಉದ್ಯಮದಾದ್ಯಂತ, ಜಾಗತಿಕ ಸೆಮಿಕಂಡಕ್ಟರ್ ಕೊರತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜಿಯೋಫೋನ್ ನೆಕ್ಸ್ಟ್ ಅನ್ನು ಗೂಗಲ್ ಅಸಿಸ್ಟೆಂಟ್, ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕಾಗಿ ಭಾಷಾ ಅನುವಾದ, ಭಾರತ ಕೇಂದ್ರಿತ ಫಿಲ್ಟರ್‌ಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಮರಾ ಹಾಗೂ ಇನ್ನಿತರ ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.