ನವದೆಹಲಿ: ಏಳು ಸಾವಿರ ರೂ. ಒಳಗಿನ ಮೊಬೈಲ್ ಸಾಧನಗಳ ವಿಭಾಗದಲ್ಲಿ ಗ್ರಾಹಕರ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಇಟೆಲ್, ತನ್ನ ಮೊದಲ 4ಜಿ ಫೀಚರ್ ಫೋನ್ ಮ್ಯಾಜಿಕ್ 2 4ಜಿ (ಐಟಿ 9210 ಮಾದರಿ) ಯನ್ನು ತನ್ನ 'ಮ್ಯಾಜಿಕ್ ಸರಣಿ' ಅಡಿಯಲ್ಲಿ ಬಿಡುಗಡೆ ಮಾಡಿದೆ.
4 ಜಿ ಕನೆಕ್ಟಿವಿಟಿ, ಪ್ರೀಮಿಯಂ ಗ್ಲಾಸಿ ಡಿಸೈನ್, ದೀರ್ಘಕಾಲೀನ ಬ್ಯಾಟರಿ ಮತ್ತು ಕಿಂಗ್ ವಾಯ್ಸ್‌ನಂತಹ ಪವರ್-ಪ್ಯಾಕ್ಡ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಫೋನ್ ವೈ-ಫೈ ಮತ್ತು ಹಾಟ್‌ಸ್ಪಾಟ್ ಟೆಥರಿಂಗ್ ಅನ್ನು ಒದಗಿಸುತ್ತದೆ. ಇದರ ಮೂಲಕ ನಾವು 8 ಸಾಧನಗಳನ್ನು ಸಂಪರ್ಕಿಸಬಹುದು.
2,349 ರೂ. ಬೆಲೆಯಲ್ಲಿ ಮೊಬೈಲ್ ಕೈಸೇರಲಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಿದೆ.
ಈ 4ಜಿ ಫೀಚರ್ ಫೋನ್‌ನಲ್ಲಿ 1.3 ಎಂಪಿ ಬ್ಯಾಕ್ ಕ್ಯಾಮರಾ, ರೆಕಾರ್ಡಿಂಗ್ ಪ್ರಯೋಜನವನ್ನು ಹೊಂದಿರುವ ವೈರ್‌ಲೆಸ್ ಎಫ್‌ಎಂ, ಸಂಭಾಷಣೆಗಳನ್ನು ರೆಕಾರ್ಡ್ ಮಾಡಲು ಆಟೋ ಕಾಲ್ ರೆಕಾರ್ಡರ್, ದೊಡ್ಡ ಎಲ್ಇಡಿ ಟಾರ್ಚ್, ಒನ್-ಟಚ್ ಮ್ಯೂಟ್ ಮತ್ತು ಮನರಂಜನಾ ಅಗತ್ಯಗಳಿಗಾಗಿ 8 ಗೇಮ್ಸ್ ಲಭ್ಯವಿದೆ.
ಫೋನ್ 128 ಎಮ್ಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ, ಇದು 1900mAh ದೀರ್ಘಕಾಲೀನ ಬ್ಯಾಟರಿಯೊಂದಿಗೆ 24 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಸಹ ಒದಗಿಸುತ್ತದೆ. ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 ಜಿ, 3 ಜಿ, 4 ಜಿ, ವೈ-ಫೈ ಮತ್ತು ಬ್ಲೂಟೂತ್ ವಿ 2 ಸೇರಿವೆ.