ETV Bharat / lifestyle

ಆಂಡ್ರಾಯ್ಡ್‌ ಗೂಗಲ್​ ಮ್ಯಾಪ್​​ ಇನ್ನು ಡಾರ್ಕ್​ ಮೋಡ್​ನಲ್ಲಿ ಲಭ್ಯ

author img

By

Published : Feb 24, 2021, 5:57 PM IST

ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಗೂಗಲ್​ ಮ್ಯಾಪ್​​ ಡಾರ್ಕ್​ ಮೋಡ್​ನಲ್ಲಿ ಲಭ್ಯವಾಗುವಂತೆ ನವೀಕರಿಸಲಾಗಿದ್ದು, ಬಳಕೆದಾರರು ಇದರಿಂದಾಗಿ ತಮ್ಮ ಕಣ್ಣಿಗೆ ಆಗುವ ಹಾನಿಯನ್ನು ತಗ್ಗಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

FIle Photo
ಸಂಗ್ರಹ ಚಿತ್ರ

ಸ್ಯಾನ್ ಫ್ರಾನ್ಸಿಸ್ಕೋ: ಆಂಡ್ರಾಯ್ಡ್‌ನಲ್ಲಿ ಗೂಗಲ್​ ಮ್ಯಾಪ್​​ ಬಳಕೆದಾರರ ಹಿತಕ್ಕಾಗಿ ಫುಲ್​​ ಡಾರ್ಕ್​ಮೋಡ್​ ಆಯ್ಕೆಯೊಂದನ್ನ ನೀಡಲು ಸಕಲ ಸಿದ್ಧತೆಗಳು ನಡೆದಿದ್ದು, ಇದರಿಂದಾಗಿ ದೃಷ್ಟಿ ದೋಷ, ಕಣ್ಣಿಗೆ ಆಗುವ ಹಾನಿ ತಪ್ಪಲಿದೆ ಎಂದು ಕಂಪನಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ, ನಾವೆಲ್ಲರೂ ಮೊಬೈಲ್​ ಬಳಕೆ ಹೆಚ್ಚಾಗಿ ಮಾಡತೊಡಗಿದ್ದು, ಇದರಿಂದಾಗಿ ನಮ್ಮ ಕಣ್ಣಿಗೆ ಹೆಚ್ಚಿನ ಆಯಾಸವನ್ನು ಉಂಟುಮಾಡಿದಂತಾಗುತ್ತಿದೆ. ಗೂಗಲ್ ಮ್ಯಾಪ್​​​ನಲ್ಲಿ ಡಾರ್ಕ್ ಥೀಮ್‌ಗಳನ್ನು ಶೀಘ್ರದಲ್ಲೇ ಅಳವಡಿಸುವ ಮೂಲಕ ನೀವು ನಿಮ್ಮ ಕಣ್ಣುಗಳಿಗೆ ಹೆಚ್ಚು ವಿರಾಮವನ್ನು ನೀಡಬಹುದು ಮತ್ತು ನಿಮ್ಮ ಬ್ಯಾಟರಿ ಅವಧಿಯನ್ನು ಉಳಿಸಬಹುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ನಿಮ್ಮ ಗೂಗಲ್ ಮ್ಯಾಪ್​​ ಆ್ಯಪ್​​ ನವೀಕರಿಸಿದ ನಂತರ, ಸೆಟ್ಟಿಂಗ್‌, ಥೀಮ್‌ಗೆ ತೆರಳಿ ಯಾವಾಗಲೂ ಡಾರ್ಕ್ ಥೀಮ್ ಇರುವಂತೆ ಅಳವಡಿಸಿಕೊಳ್ಳಬಹುದಾಗಿದೆ. ಕಂಪನಿಯು ಆಂಡ್ರಾಯ್ಡ್ ಫೋನ್​​ಗಳಿಗಾಗಿ ಆಟೋ ಮೋಡ್​ ಹಾಗೂ ಮ್ಯಾನ್ಯುವಲ್​​ ಮೋಡ್​​ಗಳನ್ನು ನವೀಕರಿಸಿ ಪರಿಚಯಿಸಿದೆ ಎಂದು ಕಂಪನಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.