ETV Bharat / jagte-raho

ಭೀಕರ ರಸ್ತೆ ಅಪಘಾತ: ಬೆಂಗಳೂರಲ್ಲಿ ಇಬ್ಬರನ್ನು ಬಲಿ ಪಡೆದ ಆ್ಯಂಬುಲೆನ್ಸ್​​ - ಬೆಂಗಳೂರಿನ ಓಲ್ಡ್ ಏರ್​ಪೋರ್ಟ್ ರಸ್ತೆ ಅಪಘಾತ ನ್ಯೂಸ್​

ಬೈಕ್​ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿ ನಡೆದಿದೆ.

Road accident
Road accident
author img

By

Published : Jan 8, 2020, 5:00 PM IST

ಬೆಂಗಳೂರು:‌ ಬೈಕ್​ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಇಲ್ಲಿನ ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

Road accident
ಇಬ್ರಾಹಿಂ ಖಲೀಲ್ ಹಾಗೂ ಮನ್ಸೂರ್ ಮೃತರು

ಇಬ್ರಾಹಿಂ ಖಲೀಲ್ ಹಾಗೂ ಮನ್ಸೂರ್ ಮೃತರು. ಓಲ್ಡ್ ಏರ್​ಪೋರ್ಟ್ ರಸ್ತೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಬೈಕ್​ನಲ್ಲಿ ನಾಗವಾರ ಕಡೆ ಇಬ್ಬರು ಯುವಕರು ಹೊರಟಿದ್ದರು. ಈ ವೇಳೆ ಒನ್ ವೇ ನಲ್ಲಿ ಆ್ಯಂಬುಲೆನ್ಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಯುವಕರು ಸಾವನ್ನಪ್ಪಿದ್ದಾರೆ‌.

ಈ‌ ಸಂಬಂಧ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಅಶೋಕ್​ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಜೀವ ಉಳಿಸುವ ಅಂಬ್ಯುಲೆನ್ಸ್ ನಿಂದಲೇ ಇಬ್ಬರ ಬೈಕ್ ಸವಾರರ ಬಲಿ

ಬೆಂಗಳೂರು:‌ ಜೀವ ಉಳಿಸುವ ಅಂಬ್ಯುಲೆನ್ಸ್ ನಿಂದಲೇ ಇಬ್ಬರ ಜೀವನ ಅಂತ್ಯವಾಗಿದೆ.. ಒನ್ ವೇ ನಲ್ಲಿ ಅತಿವೇಗವಾಗಿ ಹೋಗಿ ಇಬ್ಬರು ಬೈಕ್ ಸವಾರರನ್ನು ಆಂಬುಲೆನ್ಸ್ ಬಲಿ ಪಡೆದಿದೆ.
ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿ ಶ್ರೀನಿವಾಗಿಲು ಜಂಕ್ಷನ್ ಬಳಿ ನಿನ್ನೆ ರಾತ್ರಿ 9 ಗಂಟೆಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ..
ಇಬ್ರಾಹಿಂ ಖಲೀಲ್ ಹಾಗೂ ಮನ್ಸೂರ್ ಮೃತಪಟ್ಟ ದುದೈರ್ವಿಗಳು. ಓಲ್ಡ್ ಏರ್ ಪೋರ್ಟ್ ರಸ್ತೆಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮುಗಿಸಿ ಬೈಕ್ ನಲ್ಲಿ ನಾಗವಾರ ಕಡೆ ಇಬ್ಬರು ಯುವಕರು ಹೊರಟಿದ್ದರು. ಈ ವೇಳೆ ಅತಿವೇಗವಾಗಿ ಒನ್ ವೇ ನಲ್ಲಿ ಅಂಬುಲೆನ್ಸ್ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಈ ಸಂಬಂಧ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆಆಸ್ಪತ್ರೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ‌. ಈ‌ ಸಂಬಂಧ ಅಂಬುಲೆನ್ಸ್ ಚಾಲಕನ ವಿರುದ್ಧ ಅಶೋಕನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.