ETV Bharat / jagte-raho

ನಾಪತ್ತೆಯಾಗಿದ್ದ ಬಾಲಕ ಮಸೀದಿಯ ಟೆರೇಸ್​ನಲ್ಲಿ​​ ಶವವಾಗಿ ಪತ್ತೆ.. - Delhi crime latest news

ಹಣಕ್ಕಾಗಿ ಇಬ್ಬರು ಅಪ್ರಾಪ್ತರು ಸೇರಿ ಬಾಲಕನೋರ್ವನನ್ನು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

2 juveniles strangulate 10-yr-old boy to death for ransom
ನಾಪತ್ತೆಯಾಗಿದ್ದ ಬಾಲಕ ಮಸೀದಿಯ ಟೆರೇಸ್​ನಲ್ಲಿ​​ ಶವವಾಗಿ ಪತ್ತೆ
author img

By

Published : Jan 11, 2021, 4:32 PM IST

Updated : Jan 11, 2021, 4:51 PM IST

ನವದೆಹಲಿ: ದೆಹಲಿಯ ಶ್ರೀರಾಮ್ ಕಾಲೋನಿಯಲ್ಲಿರುವ ಮಸೀದಿಯ ಟೆರೇಸ್ ಮೇಲೆ 10 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಪತ್ತೆಯಾಗಿದ್ದ ಬಾಲಕ ಮಸೀದಿಯ ಟೆರೇಸ್​ನಲ್ಲಿ​​ ಶವವಾಗಿ ಪತ್ತೆ

ಜ.7 ರಂದು ಸಂಜೆ ಮಸೀದಿಗೆ ಹೋಗಿದ್ದ ಫರ್ಹಾನ್​ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಕೂಡಲೇ ಬಾಲಕನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬಾಲಕನ ಮೃತದೇಹ ಮಸೀದಿಯ ಟೆರೇಸ್​ನಲ್ಲಿದ್ದ ನಿರ್ಮಾಣ ಸಾಮಗ್ರಿಗಳ ಅಡಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಟ್ರಂಪ್​ ಟ್ವಿಟ್ಟರ್ ಖಾತೆ ರದ್ದತಿ ಹಿಂದಿದೆ ಭಾರತೀಯ ಮೂಲದ ಮಹಿಳೆಯ ಪಾತ್ರ

ತನಿಖೆ ವೇಳೆ ಇಬ್ಬರು ಬಾಲಕರೇ ಫರ್ಹಾನ್​ನನ್ನು ಕೊಂದಿರುವುದು ತಿಳಿದುಬಂದಿದೆ. ಫರ್ಹಾನ್​ನನ್ನು ಅಪಹರಿಸಿ, ಅವರ ತಂದೆಯ ಬಳಿ ಹಣಕ್ಕೆ ಬೇಡಿಕೆಯಿಡುವುದು ಇವರ ಪ್ಲಾನ್​ ಆಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Jan 11, 2021, 4:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.