ETV Bharat / jagte-raho

ಗೋವಾದಲ್ಲಿ 8.5 ಲಕ್ಷ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ.. ಮೂವರ ಬಂಧನ

ಗೋವಾ ಅಂತರರಾಷ್ಟ್ರೀಯ ಕೇಂದ್ರದಲ್ಲಿ ತಂಗಿದ್ದ ಮೂರು ಶಂಕಿತ ವ್ಯಕ್ತಿಗಳ ಕೊಠಡಿಯಲ್ಲಿ 8.5 ಲಕ್ಷ ರೂ. ಮೌಲ್ಯದ 85 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ಗೋವಾ ಅಪರಾಧ ಶಾಖೆ ಅಧಿಕಾರಿಗಳು ಪಶಪಡಿಸಿಕೊಂಡಿದ್ದಾರೆ.

Goa Crime Branch arrests 3 with 85 gram MDMA
ಗೋವಾದಲ್ಲಿ ಮೂವರ ಬಂಧನ
author img

By

Published : Dec 28, 2020, 10:46 AM IST

ಪಣಜಿ: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿರುವ ಗೋವಾ ಅಪರಾಧ ಶಾಖೆ, ಆರೋಪಿಗಳ ಬಳಿ ಇದ್ದ 8.5 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದೆ.

ಹೊಸ ವರ್ಷದಂದು ಸೇವಿಸಲು ಗೋವಾಗೆ ಡ್ರಗ್ಸ್​ ಸಾಗಣೆ ಮಾಡುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ಅಧಿಕಾರಿಗಳ ತಂಡ, ಗೋವಾ ಅಂತರರಾಷ್ಟ್ರೀಯ ಕೇಂದ್ರದಲ್ಲಿ ತಂಗಿದ್ದ ಮೂರು ಶಂಕಿತ ವ್ಯಕ್ತಿಗಳ ಕೊಠಡಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

ಆರೋಪಿಗಳು ಕೊಠಡಿ ಹಾಗೂ ತಮ್ಮ ವಾಹನಗಳಲ್ಲಿ ಎಂಡಿಎಂಎ (ಮೀಥೈಲೆನೆಡಿಯೋಕ್ಸಿಮೆಥಾಂಫೆಟಮೈನ್ - ಒಂದು ಬಗೆಯ ಡ್ರಗ್​​) ಅಡಗಿಸಿಟ್ಟಿದ್ದರು. 8.5 ಲಕ್ಷ ರೂ. ಮೌಲ್ಯದ 85 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಡ್ರಗ್ ಮಾರಾಟಕ್ಕೆ ತಯಾರಿ: ಇಬ್ಬರ ಬಂಧನ

ಬಂಧಿತ ಆರೋಪಿಗಳನ್ನು ಹೈದರಾಬಾದ್ ನಿವಾಸಿ ಅಯಾನ್ ಅಲಿ ಖಾನ್, ಮುಂಬೈ ನಿವಾಸಿಗಳಾದ ವ್ಯಾಲೆಂಟೈನ್ ಪೆರೆರಾ ಮತ್ತು ಸ್ಟ್ರೋಮ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.